ಈ ರಾಶಿಯವರನ್ನು ಮದುವೆ ಆದರೆ ಲೈಫ್‌ ಜಿಂಗಾಲಾಲ!

By Web Desk  |  First Published Nov 8, 2019, 12:37 PM IST

ಸಂಬಂಧದಲ್ಲಿ ಪ್ರಾಮಾಣಿಕವಾಗಿರುವುದೆಂದರೇನು? ಕೆಲವರ ಅರ್ಥಕೋಶದಲ್ಲಿ ಇದಕ್ಕೆ ಇನ್ನೊಬ್ಬರೊಂದಿಗೆ ಅನಧಿಕೃತ ಸಂಬಂಧ ಹೊಂದಿಲ್ಲದಿರುವುದು ಎಂಬಷ್ಟೇ ಅರ್ಥವಿದ್ದರೆ, ಮತ್ತೆ ಕೆಲವರಿಗೆ ಸದಾ ತಮ್ಮ ಜೊತೆಗಿರುವುದು, ತಮ್ಮ ಸೋಲುಗಳಿಗೆ ಸಾಂತ್ವಾನವಾಗುವುದು, ದುಃಖದಲ್ಲಿ ಹೆಗಲು ಕೊಡುವುದು ಇತ್ಯಾದಿ. ಈ ಬಗ್ಗೆ ನಿಮ್ಮ ವಿವರಣೆ ಏನೇ ಇರಲಿ, ಅಥವಾ ಜ್ಯೋತಿಷ್ಯ ಏನೇ ಹೇಳಲಿ- ನಿಮಗೆ ಮತ್ತೊಬ್ಬ ವ್ಯಕ್ತಿ ನಿಮ್ಮೊಂದಿಗೆ ಪ್ರಾಮಾಣಿಕವಾಗಿರಬಲ್ಲ ಎನಿಸದೆ ನೀವು ಅವರೊಂದಿಗೆ ಕಮಿಟ್ ಆಗಲಾರಿರಿ. 


ಸಂಬಂಧದೊಳಗೆ ಕಾಲಿಡುವ ಮುನ್ನವೇ ನಮ್ಮ ಸಂಗಾತಿಯ ಪ್ರಾಮಾಣಿಕತೆ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆಯದಲ್ಲವೇ? ಪ್ರಾಮಾಣಿಕತೆ ಎಂಬುದಕ್ಕೆ ಪ್ರತಿಯೊಬ್ಬರಲ್ಲೂ ಅವರದೇ ಆದ ವ್ಯಾಖ್ಯಾನವಿದೆ. ಜೊತೆಗೆ ವ್ಯಕ್ತಿಯು ಎಷ್ಟು ಪ್ರಾಮಾಣಿಕ ಎಂದು ಅಳೆಯಲು ಯಾವುದೇ ನಿಖರ ಮಾನದಂಡಗಳಿಲ್ಲ. ಇಂಥ ಸಂದರ್ಭದಲ್ಲಿ ನಾವು ಜ್ಯೋತಿಷ್ಯದ ಮೊರೆ ಹೋಗಬಹುದು. ಜ್ಯೋತಿಷ್ಯದ ಪ್ರಕಕಾರ, ಸಂಬಂಧಗಳಲ್ಲಿ ಬಹಳ ಪ್ರಾಮಾಣಿಕವಾಗಿರುವವರು ಈ ರಾಶಿಗೆ ಸೇರಿದವರು. 

ಈ ರಾಶಿಯವರ ಮದ್ವೆಯಾದರೆ ಸೆಕ್ಸ್ ಲೈಫ್ ಸೂಪರ್

Tap to resize

Latest Videos

1. ಕರ್ಕಾಟಕ

ಕರ್ಕಾಟಕ ರಾಶಿಯವರು ಹೆಚ್ಚು ಭಾವನಾಜೀವಿಗಳಾಗಿದ್ದು, ತಮ್ಮ ಸಂಗಾತಿಯನ್ನು ಮೆಚ್ಚಿಸಲು ಹೆಚ್ಚೇ ಪ್ರಯತ್ನ ಹಾಕುತ್ತಾರೆ. ನಿಜವಾದ ಪ್ರೀತಿ ಹಾಗೂ ಸದಾ ಸುಖವಾಗಿರುವ ವಿಷಯಗಳಲ್ಲಿ ಇವರಿಗೆ ನಂಬಿಕೆ ಹೆಚ್ಚು. ಸದಾ ತಮ್ಮ ಆತ್ಮಸಂಗಾತಿಯ ಹುಡುಕಾಟದಲ್ಲಿರುವ ಇವರು, ಒಮ್ಮೆ ಅಂಥ ಸಂಗಾತಿ ಸಿಕ್ಕರೆ ಪ್ರಾಮಾಣಿಕತೆಗೆ ಮಿತಿಯೇ ಇಲ್ಲದಂತೆ ಸಂಗಾತಿಗೆ ನಿಷ್ಠೆ ತೋರುವರು. ಜಗಳ, ವಾದಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನ ಹಾಕುತ್ತಾರೆ. 

2. ವೃಶ್ಚಿಕ

ಬಹಳ ಸೂಕ್ಷ್ಮ ಮನಸ್ಸಿನವರಾದ ವೃಶ್ಚಿಕ ರಾಶಿಯವರು, ಯಾವುದಾದರೂ ಒಂದು ಸಂಬಂಧಕ್ಕೆ ಕಮಿಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಸಂಬಂಧದ ಆರಂಭಿಕ ಹಂತಗಳಲ್ಲಿ ನಂಬಿಕೆಯ ವಿಷಯದಲ್ಲಿ ಅವರು ಸಂಗಾತಿಯನ್ನು ಬಹಳ ಅನುಮಾನದಿಂದ ನೋಡಬಹುದು. ಅವುಗಳನ್ನು ನಿರ್ವಹಿಸಲು ಹೆಚ್ಚು ತಾಳ್ಮೆ ಬೇಕಾಗಬಹುದು. ಆದರೆ, ಒಮ್ಮೆ ಅವರ ಅನುಮಾನಗಳನ್ನೆಲ್ಲ ಪರಿಹರಿಸಿದಿರಾದರೆ, ಅವರು ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ವರ್ತಿಸುತ್ತಾರೆ ಹಾಗೂ ನಂಬಿಕೆಯ ಸಂಗಾತಿಯಾಗುತ್ತಾರೆ. ಇವರು ನಿಮ್ಮನ್ನು ಪ್ರೀತಿಸಲಿ ಅಥವಾ ದ್ವೇಷಿಸಲಿ, ಆದರೆ ನಂಬಿಕೆದ್ರೋಹ ಮಾತ್ರ ಎಂದಿಗೂ ಮಾಡಲಾರರು. ಜೊತೆಗೆ, ಎಂಥ ಸಮಯ ಬಂದರೂ ಜೊತೆ ನಿಲ್ಲುವ ಇವರು, ನಿಮ್ಮಿಂದಲೂ ಅಂಥದೇ ವರ್ತನೆ ನಿರೀಕ್ಷಿಸುತ್ತಾರೆ. 

ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

3. ವೃಷಭ

ವೃಷಭ ರಾಶಿಯವರು ಒಬ್ಬರೊಂದಿಗೆ ಕಮಿಟ್ ಆದರೆಂದರೆ, ಆ ಸಂಬಂಧ ಗಟ್ಟಿಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯದವರು ಇವರು. ಬಹಳ ಗಟ್ಟಿತನ ಹಾಗೂ ದೃಢ ಸ್ವಭಾವದ ಇವರು, ಧೀರ್ಘಕಾಲೀನ ಸಂಬಂಧದಲ್ಲಿ ನಂಬಿಕೆ ಉಳ್ಳವರು. ಅರ್ಥ ಮಾಡಿಕೊಂಡು ಪ್ರೀತಿಸುವ ಉತ್ತಮ ಸಂಗಾತಿ ಇವರು.

4. ತುಲಾ

ಶಾಂತಿ ಪ್ರಿಯರಾದ ತುಲಾ ರಾಶಿಯವರು ಸಂಬಂಧಗಳಲ್ಲಿ ಬಹಳ ಸಮತೋಲಿತ ಮನಸ್ಥಿತಿಯಿಂದ ವರ್ತಿಸುತ್ತಾರೆ. ಅಭದ್ರತೆಗಳನ್ನು ಮೆಟ್ಟಿ ನಿಂತರೆಂದರೆ ಸಂಬಂಧಕ್ಕೆ ಬದ್ಧರಾಗಲು ಮತ್ತೆ ಸಮಯ ಬೇಡಲಾರರು ಇವರು. ಸಂಗಾತಿಯೊಂದಿಗೆ ಭವಿಷ್ಯದುದ್ದಕ್ಕೂ ಬಹಳ ಪ್ರೀತಿಯಿಂದ ಇರಬಲ್ಲರು. ಕೆಲವೊಮ್ಮೆ ಕಿರಿಕಿರಿ ಮಾಡಿದರೂ ಪ್ರಾಮಾಣಿಕತೆ ಹಾಗೂ ಪ್ರೀತಿಗೆ ಮೋಸ ಮಾಡಲಾರರು. 

ಭಯಂಕರವಾಗಿ ಕಾಡುವ ಶನಿ ಕಾಟಕ್ಕೆ ಇದೆಯಾ ಮುಕ್ತಿ..?

5. ಮಕರ

ಸುಮ್ಮನೆ ಡೇಟ್ ಮಾಡುವುದು, ಫ್ಲರ್ಟ್ ಮಾಡುವುದು, ಕೆಲ ದಿನಗಳಿಗಾಗಿ ಕಮಿಟ್ ಆಗುವುದು- ಇಂಥ ಸಂಗತಿಗಳೆಲ್ಲ ಮಕರ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಯಾರೊಂದಿಗಾದರೂ ಡೇಟ್ ಮಾಡಿದರೆಂದರೆ ಆ ಸಂಬಂಧದ ಬಗ್ಗೆ ಬಹಳ ಗಂಭೀರವಾಗಿದ್ದಾರೆಂದೇ ಅರ್ಥ. ಸಂಗಾತಿಗೆ ಮೋಸ ಮಾಡುವುದು ಇವರಿಗೆ ಕನಸಿನಲ್ಲಿಯೂ ಸುಳಿಯದು. 

6. ಸಿಂಹ

ಜೀವನದಲ್ಲಿ ಸೆಟಲ್ ಆಗುವುದು ಎಂಬ ಐಡಿಯಾದಲ್ಲಿ ಇವರಿಗೆ ನಂಬಿಕೆ ಹೆಚ್ಚು. ಚೆಂದದ ಕುಟುಂಬ ಹೊಂದಿ ಸುಂದರವಾಗಿ ಜೀವನ ನಡೆಸಬೇಕೆಂದು ಬಯಸುವವರು ಸಿಂಹ ರಾಶಿಯವರು. ಬಹಳ ಸರಳ ನಡೆಯವರಾದ ಇವರು ಎಂಥದೇ ಪರಿಸ್ಥಿತಿ ಬಂದರೂ ತಮ್ಮ ಸಂಗಾತಿಯ ಬಗಲಿಗೆ ನಿಲ್ಲುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಏನಾದರೂ ನೋವಾಯಿತೆಂದರೆ ಅವರಿಗಿಂತ ಹೆಚ್ಚು ನೋವು ಅನುಭವಿಸುತ್ತಾರೆ. ಇದರೊಂದಿಗೆ ಸಿಂಹ ರಾಶಿಯವರು ಸಂಗಾತಿಯಿಂದ ಹೆಚ್ಚು ಪ್ರೀತಿ, ಗಮನ, ಮುದ್ದನ್ನು ಬಯಸುತ್ತಾರೆ. 

click me!