Indian Mythology: ದ್ರೌಪದಿಯ ಸೌಂದರ್ಯಕ್ಕೆ ಮರುಳಾಗಿದ್ದರು ಈ 12 ಮಂದಿ ರಾಜರು!

Published : Feb 22, 2025, 05:44 PM ISTUpdated : Feb 22, 2025, 06:29 PM IST
Indian Mythology: ದ್ರೌಪದಿಯ ಸೌಂದರ್ಯಕ್ಕೆ ಮರುಳಾಗಿದ್ದರು ಈ 12 ಮಂದಿ ರಾಜರು!

ಸಾರಾಂಶ

ಮಹಾಭಾರತದಲ್ಲಿ ದ್ರೌಪದಿಯ ಸೌಂದರ್ಯಕ್ಕೆ ಮಾರುಹೋದ 12 ಪುರುಷರ ಕಥೆ ಇದು. ಸ್ವಯಂವರದಲ್ಲಿ ಆಕೆಯನ್ನ ಪಡೆಯಲು ಬಂದ ರಾಜರು ಹಲವರು. ಆಕೆಯನ್ನು ವರಿಸಲು ಸಾಧ್ಯವಾಗದೆ ನಂತರ ಅವಳನ್ನು ಅವಮಾನಿಸಲು ಪ್ರಯತ್ನಿಸಿದವರು ಹಲವರು, ಇಬ್ಬರು ಮೂರ್ಖರು ಆಕೆಯನ್ನು  ಬಲವಂತಪಡಿಸಲೂ ಯತ್ನಿಸಿದ್ದರು!

ಮಹಾಭಾರತದಲ್ಲಿ ದ್ರೌಪದಿಯ ಪಾತ್ರವು ಯಾವಾಗಲೂ ಎಲ್ಲರ ಗಮನ ಸೆಳೆಯುವಂಥದು. ಸಾಕಷ್ಟು ಒಳಸಂಚಿಗೆ, ಅವಮಾನಕ್ಕೆ ತುತ್ತಾಗುತ್ತದೆ. ಅಗ್ನಿಕುಂಡದಿಂದ ಜನಿಸಿದ ದ್ರೌಪದಿಯು ಜ್ವಾಲೆಯಂತೆಯೇ ತೀವ್ರವಾದ ಸೌಂದರ್ಯವನ್ನು ಹೊರಸೂಸುತ್ತಾಳೆ. ಅದು ಅವಳನ್ನು ನೋಡಿದ ಪ್ರತಿಯೊಬ್ಬರನ್ನೂ ಆಕರ್ಷಿಸಿತ್ತು. ಮಹಾಭಾರತದಲ್ಲಿ ಆಕೆಯ ಸೌಂದರ್ಯದ ಬಗ್ಗೆ ಕೇಳಿ ಆಕರ್ಷಿತರಾಗಿ, ಆಕೆಯನ್ನು ಮದುವೆಯಾಗಲು ಬಯಸಿ ಸ್ವಯಂವರಕ್ಕೆ ಸಾವಿರಾರು ರಾಜರು, ರಾಜಕುಮಾರರು ಧಾವಿಸಿ ಬಂದಿದ್ದರು. ಅದರಲ್ಲೂ 12 ಮಂದಿ ರಾಜರು, ರಾಜಕುಮಾರರು ಆಕೆಯ ಬಗ್ಗೆ ಜೀವನಪೂರ್ತಿ ಆಳವಾದ ಆಕರ್ಷಣೆ ಹೊಂದಿದ್ದರು. ದ್ರೌಪದಿಯ ಅದ್ಭುತ ಸೌಂದರ್ಯ, ಬುದ್ಧಿವಂತಿಕೆ ಮತ್ತು ಶಕ್ತಿ ಅನೇಕ ಯೋಧರ ಹೃದಯಗಳನ್ನು ಅಲುಗಾಡಿಸಿತ್ತು. ಆದರೂ ಈ ಪುರುಷರಲ್ಲಿ ಕೆಲವರು ಅವಳ ಹೃದಯವನ್ನು ಗೆಲ್ಲಲು ಸಾಧ್ಯವಾಗದಿದ್ದಾಗ, ಅವಳನ್ನು ಅವಮಾನಿಸಲು, ಅತ್ಯಾಚಾರ ಮಾಡಲು ಪ್ರಯತ್ನಿಸಿದರು. ದ್ರೌಪದಿಯಿಂದ ಮೋಡಿಗೆ ಒಳಗಾದ ಆ 12 ಪುರುಷರನ್ನು ಇಲ್ಲಿ ನೋಡಿ.

ಕರ್ಣ

ದ್ರೌಪದಿಯ ಸೌಂದರ್ಯದಿಂದ ಆಳವಾಗಿ ಪ್ರಭಾವಿತನಾದ ಕರ್ಣ, ಮಹಾನ್ ಬಿಲ್ಲುಗಾರ ಮತ್ತು ಸ್ವಯಂನಿರ್ಮಿತ ರಾಜ. ಅವಳನ್ನು ವರಿಸಬೇಕೆಂದು ಬಯಸಿದ್ದ. ದ್ರೌಪದಿ ತನ್ನನ್ನು ಆರಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸದಿಂದ ಸ್ವಯಂವರದಲ್ಲಿ ಪಾಲ್ಗೊಂಡ. ಆದರೆ ದ್ರೌಪದಿಯ ಹೃದಯವು ಅರ್ಜುನನನ್ನು ಆರಿಸಿಕೊಂಡಿತು. ಸ್ವಯಂವರದಲ್ಲಿ ಕರ್ಣನನ್ನು ಅವಳು ತಿರಸ್ಕರಿಸಿದಳು. ʼಸೂತಪುತ್ರʼ ಎಂದು ಕರ್ಣನನ್ನು ಕರೆದಳು. ಅವನಿಗೆ ಅವಮಾನವಾಯಿತು. ಆಕೆಯ ಕುರಿತು ಅವನಲ್ಲಿ ತೀರದ ಕೋಪವನ್ನು  ಹುಟ್ಟಿಸಿತು.

ದುರ್ಯೋಧನ

ಹಸ್ತಿನಾಪುರದ ರಾಜಕುಮಾರ ದುರ್ಯೋಧನನೂ ದ್ರೌಪದಿಯನ್ನು ಬಯಸಿದ. ಸ್ವಯಂವರದಲ್ಲಿ ಧನುಸ್ಸನ್ನು ಎತ್ತಲು ವಿಫಲರಾದ. ದ್ರೌಪದಿ ನಕ್ಕಳು. ಇದು ಅವನ ಅಹಂಕಾರವನ್ನು ಘಾಸಿಗೊಳಿಸಿತು. ಅವನ ಹತಾಶೆಯು ಅಸೂಯೆ ಮತ್ತು ಕೋಪಕ್ಕೆ ತಿರುಗಿತು. ಅಂದಿನಿಂದ ಅವನು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ. ರಾಜಸೂಯ ಯಾಗದ ಸಂದರ್ಭದಲ್ಲಿ ಇಂದ್ರಪ್ರಸ್ಥದ ಅರಮನೆಯಲ್ಲಿ ಅವನು ನೆಲ ಎಂದು ತಿಳಿದು ನೀರಿನಲ್ಲಿ ನಡೆದು ಜಾರಿಬಿದ್ದಾಗಲೂ ದ್ರೌಪದಿ ನಕ್ಕಳು. ಇದೆಲ್ಲ ಮುಂದೆ ಹಸ್ತಿನಾಪುರದ ಆಸ್ಥಾನದಲ್ಲಿ ಪಗಡೆಯಾಟದ ವೇಳೆ ದ್ರೌಪದಿಯನ್ನು ಸಾರ್ವಜನಿಕವಾಗಿ ಕೌರವ ಅವಮಾನಿಸಲು ನಾಂದಿ ಹಾಡಿತು.

ಜಯದ್ರಥ

ಸಿಂಧು ದೇಶದ ರಾಜ, ದುರ್ಯೋಧನನ ಭಾವ. ಕೌರವರ ತಂಗಿ ದುಶ್ಶಲೆಯ ಗಂಡ. ಇವನೂ ದ್ರೌಪದಿಯನ್ನು ತನ್ನ ಹೆಂಡತಿಯಾಗಿ ಬಯಸಿದ. ಸ್ವಯಂವರದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರ ಅವನು ಪಾಂಡವರ ವನವಾಸದ ಸಮಯದಲ್ಲಿ ಅವಳನ್ನು ಬಲವಂತವಾಗಿ ಅಪಹರಿಸಲು ಪ್ರಯತ್ನಿಸಿದ. ಇದನ್ನು ತಿಳಿದ ಪಾಂಡವರು ಅವನನ್ನು ಬೆನ್ನಟ್ಟಿದರು. ಭೀಮನು ಅವನನ್ನು ಹಿಡಿದ. ಅವನ ಮಂಡೆ ಬೋಳಿಸಿ ಅವಮಾನಿಸಿದ. 

ಶಿಶುಪಾಲ

ಚೇದಿ ದೇಶದ ರಾಜ ಮತ್ತು ಕೃಷ್ಣನ ಶತ್ರು. ಶಿಶುಪಾಲನ ಕಣ್ಣುಗಳು ದ್ರೌಪದಿಯ ಮೇಲೂ ಇತ್ತು. ಅವರು ಸ್ವಯಂವರದಲ್ಲಿ ಭಾಗವಹಿಸಿದ. ಆದರೆ ಇತರರಂತೆ ಬಿಲ್ಲು ಎತ್ತುವಲ್ಲಿ ವಿಫಲರಾದ. ಮುಂದೆ ರಾಜಸೂಯದಲ್ಲಿ ಕೃಷ್ಣನ ಕೈಯಿಂದ ಹತನಾದ.

ಶಲ್ಯ

ನಕುಲ ಮತ್ತು ಸಹದೇವರ ಮಾವನಾಗಿದ್ದ ಈತ ಮಾದ್ರಿಯ ಸಹೋದರ. ಮಾದ್ರದ ರಾಜ. ಶಲ್ಯನು ಸಹ ಸ್ವಯಂವರಕ್ಕೆ ಬಂದ. ಆದರೆ ಬಿಲ್ಲು ಎತ್ತಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ಆತ ದ್ರೌಪದಿಯನ್ನು ಮೆಚ್ಚಿದ್ದ.

ಬೃಹದ್ಬಲ

ಭಗವಾನ್ ರಾಮನ ವಂಶಸ್ಥನಾದ ಇವನು ಕೋಸಲದ ರಾಜನಾಗಿದ್ದ. ಬೃಹದ್ಬಲನು ದ್ರೌಪದಿಯನ್ನು ಗೆಲ್ಲುವ ಉದ್ದೇಶದಿಂದ ಸ್ವಯಂವರದಲ್ಲಿ ಭಾಗವಹಿಸಿದ. ಆದರೆ ಸ್ಪರ್ಧೆಯಲ್ಲಿ ವಿಫಲನಾದ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರವಾಗಿ ಹೋರಾಡಿದ. ಅಲ್ಲಿ ಕೊಲ್ಲಲ್ಪಟ್ಟ.

ಅರ್ಜುನ

ಅರ್ಜುನನ ಹೃದಯವೂ ಅವಳ ಸೌಂದರ್ಯದ ಕುರಿತ ವರ್ಣನೆಗಳಿಂದ ಆಕರ್ಷಿತವಾಗಿತ್ತು. ಬ್ರಾಹ್ಮಣನ ವೇಷ ಧರಿಸಿ ಸ್ವಯಂವರಕ್ಕೆ ಬಂದ. ಅವನು ಬಿಲ್ಲಿನ ಮೂಲಕ ಮತ್ಸ್ಯಯಂತ್ರ ಛೇದನದ ಪರೀಕ್ಷೆಯನ್ನು ಪೂರ್ಣಗೊಳಿಸಿದ ಮತ್ತು ದ್ರೌಪದಿಯನ್ನು ಗೆದ್ದ. ಶ್ರೀಕೃಷ್ಣನ ಆಶೀರ್ವಾದದೊಂದಿಗೆ ಆಕೆಯ ಪತಿಯಾದ. 

Indian Mythology: ಮಹಾಭಾರತದಲ್ಲಿ ಕರ್ಣನ ಜನ್ಮರಹಸ್ಯ ಹನ್ನೊಂದು ಮಂದಿಗೆ ತಿಳಿದಿತ್ತು!

ನಾಲ್ವರು ಪಾಂಡವರು

ಅರ್ಜುನನು ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದು ಮನೆಗೆ ಹಿಂದಿರುಗಿದಾಗ, ಅವನ ತಾಯಿ ಕುಂತಿ ಅವನ ವಿಜಯದ ಸಂದರ್ಭವನ್ನು ತಿಳಿಯದೆ, "ಈ ಬಹುಮಾನವನ್ನು ನಿಮ್ಮ ಸಹೋದರರೊಂದಿಗೆ ಸಮಾನವಾಗಿ ಹಂಚಿಕೊ" ಎಂದು ಅವನಿಗೆ ಸೂಚಿಸಿದಳು. ಪರಿಣಾಮವಾಗಿ, ಎಲ್ಲಾ ಐವರು ಪಾಂಡವ ಸಹೋದರರು, ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರು ತಮ್ಮ ತಾಯಿಯ ಮಾತಿಗೆ ಬದ್ಧರಾಗಿ ದ್ರೌಪದಿಯನ್ನು ವಿವಾಹವಾದರು, ಇದು ಮಹಾಭಾರತದ ನಿರ್ಣಾಯಕ ಅಂಶವಾಯಿತು. ಪ್ರತಿಯೊಬ್ಬ ಸಹೋದರನೂ ಅವಳನ್ನು ಪ್ರೀತಿಸುತ್ತಿದ್ದ ಮತ್ತು ಅವಳ ಇಚ್ಛೆ ಪೂರೈಸಲು ಉತ್ಸುಕನಾಗಿದ್ದ.

ಕೀಚಕ

ಮತ್ಸ್ಯದೇಶದ ರಾಜ ವಿರಾಟನ ಭಾವ, ಆತನ ಸೈನ್ಯದ ನಾಯಕನಾಗಿದ್ದವನು ಕೀಚಕ. ಪಾಂಡವರು ಅಜ್ಞಾತವಾದಲ್ಲಿದ್ದಾಗ ವಿರಾಟನ ಅರಮನೆಯಲ್ಲಿ ದ್ರೌಪದಿಯು ಸೈರಂಧ್ರಿ ಎಂಬ ಸೇವಕಿಯ ವೇಷ ಧರಿಸಿದ್ದಳು. ಅವಳ ಸೌಂದರ್ಯಕ್ಕೆ ಮರುಳಾಗಿದ್ದ ಕೀಚಕ ಅವಳನ್ನ ಅತ್ಯಾಚಾರ ಮಾಡಲು ಪ್ರಯತ್ನಿಸಿದ. ದ್ರೌಪದಿ ವಿರೋಧಿಸಿದಳು. ಭೀಮನ ಮೊರೆಹೋದಳು. ಅಡುಗೆಭಟ್ಟನಾಗಿದ್ದ ಭೀಮ ಕ್ರೋಧದಿಂದ ಕಿಚಕನನ್ನು ಕೊಂದ. 

Indian Mythology: ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನಿಂದಲೂ ಹಿರಿಯಜ್ಜನೊಬ್ಬ ಹೋರಾಡಿದ್ದ! ಅವನ್ಯಾರು ಗೊತ್ತೆ?
 

PREV
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ