ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

By Suvarna News  |  First Published Dec 9, 2019, 12:17 PM IST

ವರ್ಷಾಂತ್ಯ ಬಂದೇ ಬಿಡ್ತು. ನೀವು ಈಗಾಗಲೇ ಹೊಸ ವರ್ಷದ ರೆಸೊಲ್ಯೂಶನ್ ಪಟ್ಟಿ ಮಾಡಲಾರಂಭಿಸಿದ್ದೀರಿ ಎಂದರೆ, ನಿಮ್ಮ ರಾಶಿಗನುಗುಣವಾಗಿ ನೀವು ಬರುವ ವರ್ಷದಲ್ಲಿ ಬಿಡಬೇಕಾದ ಒಂದು ಕೆಟ್ಟ ಗುಣವನ್ನು ನಾವು ಹೇಳುತ್ತೇವೆ. 


ಅರೆ! ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. 2019 ಮುಗಿಯೋಕೆ ಇನ್ನೇನು ಕೆಲವೇ ದಿನಗಳು ಬಾಕಿ. ಬರುವ ವರ್ಷದ ರೆಸೊಲ್ಯೂಶನ್‌ನಲ್ಲಿ ಹೊಸತೇನೋ ಕಲಿಯುವುದನ್ನು ನೀವು ಸೇರಿಸಿಕೊಂಡಿಯೇ ಇರುತ್ತೀರಿ. ಜೊತೆಗೆ, ಬಹಳ ಸಮಯದಿಂದ ನಿಮ್ಮೊಂದಿಗಿರುವ ಒಂದು ಕೆಟ್ಟ ಗುಣವನ್ನೂ ಬಿಟ್ಟರೆ ಬದುಕು ಇನ್ನಷ್ಟು ಚೆಂದದಲ್ಲಿ ಬದಲಾಗುತ್ತದೆ. ಕೆಟ್ಟ ಚಟ, ಗುಣ ಬಿಡುವುದು ಸುಲಭದ ಮಾತಲ್ಲ. ಆದರೆ, ನಮಗಾಗಿ ನಾವು ಸ್ವಲ್ಪ ಕಷ್ಟ ಪಡಲೇಬೇಕಲ್ಲ... ನಿಮಗೆ ಕನ್ಫ್ಯೂಶನ್ ಇದ್ದರೆ ನಿಮ್ಮ ರಾಶಿಗನುಗುಣವಾಗಿ ನೀವೇನು ಬಿಡಬೇಕೆಂಬುದನ್ನು ನಾವು ಹೇಳುತ್ತೇವೆ. 

ಮೇಷ

Tap to resize

Latest Videos

undefined

ತಾಳ್ಮೆಯಿಂದಿರಿ, ಒಳ್ಳೆಯ ಕಾಲ ಬರುತ್ತಿದೆ. ಎಲ್ಲವೂ ನಿಮ್ಮ ಸಮಯಕ್ಕನುಗುಣವಾಗಿ, ನೀವಿಷ್ಟಪಟ್ಟಂತೆಯೇ ಆಗಬೇಕೆನ್ನುವವರು ನೀವು. ಆದರೆ, ಒಳ್ಳೆಯದು ಆಗಲು ಸಮಯ ಹಿಡಿಯುತ್ತದೆ. ಹಾಗಾಗಿ ತಾಳ್ಮೆಯೊಂದನ್ನು ರೂಢಿಸಿಕೊಂಡರೆ ನೀವು ಖುಷಿಯಾಗಿರಬಹುದು. 

ಜ್ಯೋತಿಷ್ಯ: ಬೆಂಕಿಯಂಥ ಕುಜನ ವಕ್ರದೃಷ್ಟಿ ಬಿದ್ದರೆ, ಮನುಷ್ಯ ಥರ ಥರ...!

ವೃಷಭ

ಹೊರ ಹೋಗಿ ಎಂಜಾಯ್ ಮಾಡಿ. ಹೊರ ಹೋಗಲು ಹಿಂಜರಿಯುವುದೇಕೋ ನೀವು? ಇದುವರೆಗೂ ಪಟ್ಟ ಕಷ್ಟ, ಒಂಟಿತನ ಸಾಕು. ಕಳೆದ ವರ್ಷ ಸಾಕಷ್ಟು ಕಷ್ಟಪಟ್ಟಿದ್ದೀರಿ. ಈಗ ಯಾರೇ ಕರೆದರೂ ಜೊತೆಗೆ ಹೊರ ಹೋಗಿ ಎಂಜಾಯ್ ಮಾಡುವುದನ್ನು ರೂಢಿಸಿಕೊಳ್ಳಿ. ಯಾರಿಗೆ ಗೊತ್ತು, ಈ ಪಾರ್ಟಿಯಲ್ಲಿ ನಿಮಗೆ ಸ್ಪೆಶಲ್ ವ್ಯಕ್ತಿಯ ಪರಿಚಯವಾಗಿ ಜೀವನವೇ ಹಬ್ಬವಾಗಬಹುದು.

ಮಿಥುನ

ಆಯ್ಕೆಗಳು ನಿಮ್ಮದೇ ಆಗಿರಲಿ. ನೀವು ಯಾವಾಗಲೂ ಆಯ್ಕೆಯ ವಿಷಯದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ನಿಮ್ಮ ರಾಶಿಯೇ ಹಾಗಿದೆ. ಆದರೆ, ನೀವು ಗೊಂದಲವಿಲ್ಲದೆ ಆಯ್ಕೆ ಮಾಡುವಂತಾಗಲು ಸರಿಯಾಗಿ ಪ್ರಾಕ್ಟೀಸ್ ಮಾಡಿ. ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಲ್ಲ. ಆರಂಭದಲ್ಲಿ ಸಣ್ಣ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಗಿ. ನಿದಾನವಾಗಿ ದೊಡ್ಡ ನಿರ್ಧಾರವೂ ಸ್ಪಷಟವಾಗಿ ತೆಗೆದುಕೊಳ್ಳಬಲ್ಲಿರಿ. 

ಕಟಕ

ಅತಿಯಾಗಿ ಯೋಚಿಸೋದು ಬಿಡಿ. ನೀವು ಅತಿ ಭಾವುಕ ವ್ಯಕ್ತಿ ಎಂಬುದೇನೋ ನಿಜ. ಆದರೆ, ಹಾಗಂಥ ಸಮಸ್ಯೆಯನ್ನು ತಿಂಗಳುಗಟ್ಟಲೆ ಯೋಚಿಸಿ ಚಿಂತಿಸಿದರೆ ಪ್ರಯೋಜನವೇನು? ಈ ಅಭ್ಯಾಸ ಬಿಡಲು ಇದು ಸಕಾಲ. ಜಗತ್ತು ನಿಮಗಾಗಿ ಕಾಯುತ್ತಿರುವುದಿಲ್ಲ. ಯಾವುದನ್ನೂ ಅತಿಯಾಗಿ ಯೋಚಿಸದೆ ಮುಂದುವರಿಯಿರಿ. 

ಈ ರಾಶಿಯವರೊಡನೆ ಡೇಟ್ ಹೋಗುವ ಮುನ್ನ ಎರಡು ಬಾರಿ ಯೋಚಿಸಿ!

ಸಿಂಹ

ನೀವು ನಿಜವಾಗಿಯೂ ಸಖತ್ ಚಾರ್ಮಿಂಗ್ ಹಾಗೂ ಆಕರ್ಷಕ ವ್ಯಕ್ತಿತ್ವ ಉಳ್ಳವರು. ಹಾಗಂಥ ಪ್ರತಿ ಬಾರಿಯೂ ನೀವೇ ಹೈಲೈಟ್ ಆಗಬೇಕೆಂದು ಬಯಸುವುದು ಬಿಟ್ಟುಬಿಡಿ. ನಿಮ್ಮ ಸುತ್ತಲಿರುವ ಜನಕ್ಕೆ ಕೆಲ ಸಮಯ ನಿಮ್ಮ ಬದುಕು, ನೀವು ವಿಶೇಷ ಎನಿಸಬಹುದು. ಆದರೆ, ನಿಧಾನವಾಗಿ ಅವರವರು ಅವರ ಬದುಕಿನ ಕಡೆ ಗಮನ ಹರಿಸಿ ಹೋಗುತ್ತಾರೆ. ಅದ್ಯಾವುದೂ ಬೇಡ, ಜನ ನನ್ನ ಜೊತೆ ಇರಬೇಕೆನ್ನುವವರು ನೀವಾದರೆ ಸದಾ ನೀವೇ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕೆಂಬ ಧೋರಣೆ ಬಿಡಿ. 

ಕನ್ಯಾ

ನಿಮಗೆ ಕೇವಲ ಕೆಲವರೊಂದಿಗೆ ಮಾತ್ರ ಕಂಫರ್ಟೇಬಲ್ ಎನಿಸುತ್ತದೆ. ಹಾಗೂ ಅವರೊಂದಿಗೆ ಮಾತ್ರ ಮಾತನಾಡಿಕೊಂಡಿರುತ್ತೀರಿ. ಉಳಿದ ಜಗತ್ತನ್ನು ಅವಾಯ್ಡ್ ಮಾಡುತ್ತೀರಿ. ಆದರೆ ಈ ಅಭ್ಯಾಸ ಖಂಡಿತಾ ಒಳ್ಳೆಯದಲ್ಲ. ಎಲ್ಲರೊಂದಿಗೂ ಗೆಳೆಯರಾಗದಿದ್ದರೂ ಒಂದು ಸ್ಮೈಲ್ ಕೊಡಲು, ಒಂದು ಹಾಯ್ ಹೇಳಲು ಏನೂ ಖರ್ಚು ಮಾಡಬೇಕಿಲ್ಲ ಅಲ್ಲವೇ? ಬರುವ ವರ್ಷ ಹೊರಜಗತ್ತಿನೊಂದಿಗೆ ಬೆರೆಯಲು ಸಾಧ್ಯವಾದಷ್ಟು ಬೆರೆಯುವುದನ್ನು ಗುರಿಯಾಗಿಸಿಕೊಳ್ಳಿ.

ದುಡ್ಡು ಯಾರಿಗೆ ಬೇಡ ಹೇಳಿ? ಲಕ್ಷ್ಮಿ ಒಲಿಸಿಕೊಳ್ಳಲು ಶ್ರೀ ಸೂಕ್ತವೆಂಬ ಶಕ್ತಿ!

ತುಲಾ

ಜನ ಹೇಳಿದ್ದನ್ನೆಲ್ಲ ನಂಬುವವರು, ಅದಕ್ಕೆ ಬೇಗ ಇನ್ಫ್ಲುಯೆನ್ಸ್ ಆಗುವ ಸ್ವಭಾವ ನಿಮ್ಮದು. ಆದರೆ, ಇದರಿಂದ ನೀವು ನಿಮಗೆ ಗೊತ್ತಿಲ್ಲದವರ ಬಗ್ಗೆ ಕೋಪ ಬೆಳೆಸಿಕೊಂಡು ಬಿಡುತ್ತೀರಿ. ಇನ್ನು ಕೆಲವೊಮ್ಮೆ ಕೇಳಿದ್ದೇ ಸತ್ಯ ಎಂದುಕೊಂಡು ಸುಳ್ಳನ್ನೇ ನಂಬಿ ಸತ್ಯಕ್ಕೆ ಮೋಸ ಮಾಡುತ್ತೀರಿ. ಇದರಿಂದ ಒಳ್ಳೆಯ ಜನರನ್ನು ಕಳೆದುಕೊಳ್ಳುತ್ತೀರಿ. ಹಾಗಾಗಿ, ಈ ಚಟದಿಂದ ಮುಕ್ತರಾಗುವುದನ್ನು ಅಭ್ಯಾಸಬಲದಿಂದ ಸಾಧ್ಯವಾಗಿಸಿಕೊಳ್ಳಿ. ಇದು ಕಷ್ಟವೇ ಆದರೂ, ಅಸಾಧ್ಯವೇನಲ್ಲ.

ವೃಶ್ಚಿಕ

ನೀವು ಪ್ರತಿಭಾವಂತರೇ ಇರಬಹುದು. ಹಾಗಂಥ ನಿಮ್ಮ ಸುತ್ತಲಿನವರಲ್ಲಿ ಯಾರಿಗೂ ಪ್ರತಿಭೆ ಇರಬಾರದು ಎಂದು ಬಯಸುವುದು ತಪ್ಪು. ಯಾರಿಗೆ ಏನೇ ಒಳ್ಳೆಯದಾದರೂ, ಯಾರಾದರೂ ಏನಾದರೂ ಸಾಧಿಸಿದರೆ ಅದಕ್ಕಾಗಿ ಹೊಟ್ಟೆಕಿಚ್ಚು ಪಡುವ ಅಭ್ಯಾಸ ಬಿಟ್ಟುಬಿಡಿ. ಬದಲಿಗೆ ಹೊಸ ವರ್ಷದಿಂದ ಯಾರಿಗೆ ಏನೇ ಒಳ್ಳೆಯದಾದರೂ ಅದಕ್ಕೆ ಖುಷಿ ಪಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅವರನ್ನು ಇನ್ನಷ್ಟು ಬೆಳೆಯುವಂತೆ ಹುರಿದುಂಬಿಸಿ. 

ಧನು

ನೀವು ಇತರರು ನೋಡದ ಜಗತ್ತನ್ನು ನೋಡಿದ್ದೀರಿ, ಇತರರಿಗೆ ಆಗದ ಅನುಭವಗಳು ನಿಮಗೆ ಆಗಿವೆ ನಿಜ, ಹಾಗಂಥ ನೀವು ಎಲ್ಲವನ್ನೂ ಬಲ್ಲವರೆಂದು ಬಗೆದುಕೊಳ್ಳುವುದು ಹಾಗೂ ಆ ಧಾಟಿಯಲ್ಲಿ ಮಾತನಾಡುವುದು ಯಾರಿಗೂ ಸಹ್ಯವಾಗುವುದಿಲ್ಲ. ನೀವು ಯಾವ ರೀತಿಯಲ್ಲಿ ಕೆಲಸ ಮಾಡಿದ್ದೀರೋ ಅದೇ ರೀತಿಯಲ್ಲಿ ಮತ್ತೊಬ್ಬರು ಮಾಡಬೇಕು ಎಂಬ ನಿರೀಕ್ಷೆ ಬಿಡಿ. ಅವರವರು ಅವರವರ ಸ್ವಭಾವಕ್ಕನುಗುಣವಾಗಿ ವಿಷಯಗಳನ್ನು ಅನುಭವಿಸಲಿ ಬಿಡಿ. 

ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

ಮಕರ

ಎಲ್ಲವನ್ನೂ ನೆಗೆಟಿವ್ ಆಗಿ ಯೋಚಿಸಿ ಅರ್ಥ ಮಾಡಿಕೊಳ್ಳುವವರು ನೀವು. ಆದರೆ, ಪಾಸಿಟಿವ್ ಯೋಚನೆಯಿಂದಷ್ಟೇ ಬದುಕು ಮೇಲ್ಮುಖವಾಗಿ ಸಾಗಲು ಸಾಧ್ಯ. ಹಾಗಾಗಿ, ಬರುವ ವರ್ಷದಿಂದ ಪ್ರತಿ ವಿಷಯಗಳಲ್ಲೂ ಪಾಸಿಟಿವ್ ಸಂಗತಿಗಳನ್ನು ಹುಡುಕುವ ಅಭ್ಯಾಸ ರೂಢಿಸಿಕೊಳ್ಳಿ.

ಕುಂಭ

ಬಹಳ ಸಮಯದಿಂದ ಬಚ್ಚಿಟ್ಟುಕೊಂಡು ಬಂದ ಆ ಫೀಲಿಂಗ್ಸ್‌ಗಳಿಗೆ ಬಿಡುಗಡೆ ಭಾಗ್ಯ ಕೊಡಲು ಇನ್ನಾದರೂ ಮನಸ್ಸು ಮಾಡಿ. ಎಮೋಶನಲ್ ಆಗುವುದು ನಿಮಗಿಷ್ಟವಾಗುವುದಿಲ್ಲ. ಆದರೆ, ಎಮೋಶನ್ಸ್ ಫೀಲಿಂಗ್ಸ್ ಆಗಿದ್ದು ಅವನ್ನು ಅನುಭವಿಸುವುದು ಮುಖ್ಯ. 

ಮೀನ

ಎಲ್ಲ ವಿಷಯಗಳನ್ನೂ ಅತಿಯಾಗಿ ಅನಲೈಸ್ ಮಾಡುವುದರಲ್ಲಿ ನೀವು ಪಂಟರು. ಪ್ರತಿಯೊಂದರಲ್ಲೂ ಅಯ್ಯೋ ಕೆಟ್ಟದ್ದಾದರೆ ಎಂದು ಭಯ ಪಡುವವರು ನೀವು. ಆದರೆ, ನಂಬಿಕೆ ಇಟ್ಟು, ನೀವು ನೀವಂದುಕೊಂಡಿದ್ದಕ್ಕಿಂತ ಸ್ಟ್ರಾಂಗ್ ಆಗಿದ್ದೀರಿ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ಭಯವನ್ನು ಬಿಟ್ಟುಬಿಡಿ.

click me!