ಭ್ರಾಮಕ ಜಗತ್ತಿನಲ್ಲಿ ನಾವು, ನಮ್ಮ ಪಾಪ ಕರ್ಮಗಳು!

By Suvarna NewsFirst Published Dec 6, 2019, 3:44 PM IST
Highlights

ಅಧ್ಯಾತ್ಮದಲ್ಲಿ ಕರ್ಮ ಎಂಬುದಕ್ಕೆ ಮಹತ್ವದ ಸ್ಥಾನವಿದೆ. ಅಷ್ಟೇ ಅಲ್ಲ, ನಮ್ಮ ನಿತ್ಯ ಜೀವನದಲ್ಲೂ ಕರ್ಮವೆಂಬುದರ ಕಲ್ಪನೆ ಹಾಸುಹೊಕ್ಕಾಗಿದೆ. ಮಾಡಿದ್ದನ್ನು ಉಣ್ಣಲೇಬೇಕೆಂಬುದು ಕರ್ಮದ ನಿಲುವು. ಶಿವಕರ್ಮದ ಇಂಥ ಏಳು ನಿಯಮಗಳು ಯಾವುವು ಗೊತ್ತಾ...

ಏನಾದರೂ ಅನ್ಯಾಯವಾದರೆ, ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಏನೋ, ಅದರ ಫಲ ಅನುಭವಿಸುತ್ತಿದ್ದೇನೆ ಎಂದು ಕೊರಗುತ್ತೇವೆ. ಇನ್ಯಾರಿಂದಲೋ ಅನ್ಯಾಯವಾದರೆ, ಅವನ ಪಾಡಿಗೆ ಅವನನ್ನು ಬಿಡು, ದೇವರೇ ಅವನು ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ನೀಡುತ್ತಾನೆ ಎನ್ನುತ್ತೇವೆ. ಒಳ್ಳೆಯವರಿಗೆ ಒಳ್ಳೆಯದೇ ಆಗಬೇಕು, ಕೆಟ್ಟವರಿಗೆ ಕೆಟ್ಟದ್ದಾಗಿಯೇ ತೀರುತ್ತದೆ ಎಂದು ನಂಬುತ್ತೇವೆ. ಇವೆಲ್ಲವೂ ಕರ್ಮದ ಕುರಿತು ನಮ್ಮ  ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಕಲ್ಪನೆಗಳು.

ಅಂದರೆ, ನಾವು ಅನುಭವಿಸುವ ಸುಖದುಃಖಗಳೆಲ್ಲವೂ ನಾವು ಮಾಡುವ ಕೆಲಸದ  ಪ್ರತಿಫಲ ಎಂಬುದು ನಮ್ಮ ನಿಲುವು. ಇನ್ನು ಹಿಂದೂಗಳಿಗೆಶಿವ ಬಹಳ ಪ್ರಮುಖ ದೇವರು. ಈತ ವಿನಾಶಕಾರಕ. ತೀರ್ಪಿನ ದಿನದಂದು ಎಲ್ಲವನ್ನೂ ಮುಗಿಸುವವವನೀತ. ಅಷ್ಟೇ  ಅಲ್ಲ, ಜೀವನದ  ನೋವು, ಅಡೆತಡಗಳನ್ನೂ ನಾಶಗೊಳಿಸುವವನು. ಶಿವಪುರಾಣದಲ್ಲಿ ಶಿವಧರ್ಮದ ಬಗೆಗೆ ಮಾತ್ರವಲ್ಲ, ಶಿವಕರ್ಮದ ಬಗ್ಗೆಯೂ ವಿವರಗಳಿವೆ. ಅದರಂತೆ ಶಿವಕರ್ಮದ ಕೆಲ ಮುಖ್ಯ ನಿಯಮಗಳು ಇಲ್ಲಿವೆ...

1. ಸತ್ಯ

ಈ ನಿಯಮವು ಶಿವಭಕ್ತರಿಗೆ ಸತ್ಯದ ಹಾದಿಯಲ್ಲಿ ನಡೆಯುವಂತೆ ಹೇಳುತ್ತದೆ. ನ್ಯಾಯಯುತವಾಗಿ, ನಮಗೆ ನಾವು ಪ್ರಾಮಾಣಿಕರಾಗಿ  ಬದುಕಬೇಕೆಂದು ಹೇಳುತ್ತದೆ. ಅಪ್ರಾಮಾಣಿಕತೆ ಹಾಗೂ ಸುಳ್ಳಿನಿಂದ ಸಣ್ಣಪುಟ್ಟ ಹೋರಾಟಗಳಲ್ಲಿ ಗೆಲ್ಲಬಹುದು. ಆದರೆ ಯುದ್ಧ ಗೆಲ್ಲಲು ಸತ್ಯದಿಂದ ಮಾತ್ರ ಸಾಧ್ಯ ಎನ್ನುವುದು ಇದರ ಬೋಧನೆ.

2. ಜ್ಞಾನವೇ ದೇವರು

ಏಕವ್ಯಕ್ತಿಯು ಜಗತ್ತಿನ ಎಲ್ಲ ಜ್ಞಾನವನ್ನೂ ಹೊಂದಲಾಗದಿರಬಹುದು. ಆದರೆ ಎಲ್ಲರಲ್ಲೂ ಒಂದಿಲ್ಲೊಂದು ಜ್ಞಾನ ಇರುತ್ತದೆ.  ನಮ್ಮಲ್ಲಿರುವ ಜ್ಞಾನವನ್ನು ನಾವೇ ಹುಡುಕಬೇಕು. ನಂತರ ಇದರ ಸುತ್ತಮುತ್ತಲಿನ ಕರ್ಮವನ್ನು ಮಾಡಬೇಕು.

3. ಎಲ್ಲವೂ ಭ್ರಮೆ

ನಾವೊಂದು ಭ್ರಾಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ನಾವು ಎಲ್ಲೇ ವಾಸಿಸುತ್ತಿರಬಹುದು, ಎಂಥದೇ ಜೀವನ ನಡೆಸುತ್ತಿರಬಹುದು, ಆದರೆ, ವಸ್ತುಗಳನ್ನು ಹೊಂದುವುದರ ಮೇಲೆ ನಮ್ಮ ಸಂತೋಷ ಹರಡಿದ್ದರೆ, ಸಂತೋಷವೆಂಬುದು ಕೂಡಾ ನಮಗೆ ಭ್ರಮೆಯಾಗಿಬಿಡುವುದು. ಆ ವಸ್ತುವನ್ನು ಕಳೆದುಕೊಳ್ಳಲು ಸಂತೋಷವೂ ಕಳೆದುಹೋಗುವುದು. ಹಾಗಾಗಿ, ಶಿವ ಕರ್ಮದ ಮೂರನೇ ನಿಯಮವು, ಭೌತಿಕ ವಸ್ತುಗಳ ಮೇಲೆ ಸಂತೋಷಕ್ಕಾಗಿ ಅರಸಬೇಡಿ ಎಂಬುದನ್ನು ಹೇಳುತ್ತದೆ.

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ

4. ಸಂತೋಷದಾಚೆಗೆ...

ನಾವು ಬದುಕಿರುವ ಜಗತ್ತು ಹೆಚ್ಚು ಸ್ವಾರ್ಥತೆಯಿಂದ ಕೂಡಿದೆ. ಎಲ್ಲರೂ ತಮ್ಮ ಸ್ವಂತದ ಸಂತೋಷಕ್ಕೊಂದೇ ಬೆಲೆ ನೀಡುತ್ತಿದ್ದಾರೆ. ತಮ್ಮ ಸುತ್ತಮುತ್ತಲಿನವರ ಸಂತೋಷದ ಬಗ್ಗೆ ಯಾರೂ ಯೋಚನೆಯನ್ನೂ ಮಾಡುತ್ತಿಲ್ಲ. ಆದರೆ, ನಿಜವಾದ ಸಂತೋಷವು ಮಿತಿಗಳಾಚೆಗೆ ಇದ್ದು, ನಮ್ಮೊಳಗಿನ ಜ್ಞಾನದ ಪರಿಚಯವಾದಾಗಲಷ್ಟೇ ಅದು ಕಾಣಸಿಗುತ್ತದೆ. ಸಂತೋಷವೆಂಬುದು ನಮ್ಮ ಒಳಗೆಯೇ ಇದೆ ಹೊರತು ಹೊರಗಿನಿಂದ ಸಿಗುವಂಥದಲ್ಲ ಎಂಬುದನ್ನು ನೆನಪಿಡಿ.

5. ಆಕಾರರಹಿತರಾಗಿ

ನಿಜವಾಗಿ ಸಂತೋಷವಾಗಿರುವವನನ್ನು ನೀವು ಎಲ್ಲಿಯೇ ತೆಗೆದುಕೊಂಡು ಹೋಗಿ ಬಿಡಿ, ಎಂಥದೇ ಪರಿಸ್ಥಿತಿಗೆ ಒಡ್ಡಿ, ಆತನ ಸಂತೋಷ ಒಂದಿಂಚೂ ಕಡಿಮೆಯಾಗದು. ಭ್ರಮೆಯು ಆತನ ಸಂತೋಷವನ್ನು ನಿಯಂತ್ರಿಸುವುದಿಲ್ಲ. ಅವರು ಯಾವಾಗಲೂ ಶಾಂತವಾಗಿ ತೃಪ್ತಿಯಿಂದ ಬಾಳುತ್ತಾರೆ. ಹಾಗಾಗಿ, ಶಿವಕರ್ಮ ಹೇಳುತ್ತದೆ, ಎಲ್ಲಿಯೇ ಹೋಗಿ ನೀರಿನಂತೆ ಶೇಖರಿಸಿದ ಪಾತ್ರೆಯ ಆಕಾರ ಹೊಂದಿ, ಪಾರದರ್ಶಕವಾಗಿರಿ. 

6. ಎಲ್ಲ ಇಂದ್ರಿಯಗಳ ಬಳಕೆ

ನಮ್ಮ ಮನಸ್ಸು ನೆಮ್ಮದಿ ಹಾಗೂ ಶಾಂತಿಯಿಂದಿದ್ದಾಗ ನಾವು ಆತ್ಮವನ್ನು ಅರ್ಥಮಾಡಿಕೊಳ್ಳಬಲ್ಲೆವು. ಈ ಸಂದರ್ಭದಲ್ಲಿ ನಮ್ಮೆಲ್ಲ ಇಂದ್ರಿಯಗಳೂ ಒಟ್ಟಾಗಿ ಕೆಲಸ ಮಾಡುತ್ತವೆ. ಭೌತಿಕವಾಗಿ ಈ ಹಂತಕ್ಕೆ ನೀವು ಹೋದರೆ ಸಿಗುವ ಅನುಭೂತಿಯನ್ನು ಹೋಲಿಸಲು ಬೇರೇನೂ ಸಿಗಲಾರದು. 

7. ಜ್ಞಾನೋದಯವು ಎಚ್ಚರಿಸುತ್ತದೆ.

ಶಿವಕರ್ಮದ ಈ ನಿಯಮಗಳು ನಿಮ್ಮನ್ನು ಜ್ಞಾನೋದಯದತ್ತ ಕರೆದೊಯ್ಯುತ್ತವೆ. ಇದು ಮನುಷ್ಯನ ಅತಿ ಎತ್ತರದ ರೂಪ. ಈ ಹಂತದಲ್ಲಿ ಮಾತ್ರ ನೀವು ಪ್ರಕೃತಿ ಹಾಗೂ ಪುರುಷನನ್ನು ಸರಿಯಾಗಿ ಗ್ರಹಿಸಬಲ್ಲಿರಿ. 

click me!