ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಕುಟುಂಬ ಯಾವಾಗಲೂ ಸುದ್ದಿಯಾಗುತ್ತಿರುತ್ತದೆ. ಅದರಲ್ಲೂ ನೀತಾ ಅಂಬಾನಿ (Nita Ambani) ಲೈಫ್‌ಸ್ಟೈಲ್ (Lifestyle) ಸದಾ ಚರ್ಚೆಯಾಗುತ್ತಲೇ ಇರುತ್ತದೆ. ಅವರು ಧರಿಸೋ ಬೆಲೆಬಾಳುವ ಸೀರೆ, ಚಪ್ಪಲಿ, ಆಭರಣಗಳು ವೈರಲ್ (Viral) ಆಗುತ್ತವೆ. ಸದ್ಯ ಸುದ್ದಿಯಾಗಿರೋದು ನೀತಾ ಅಂಬಾನಿ ಬಳಸ್ತಿರೋ ಕಾಸ್ಟ್ಲೀ ಮೊಬೈಲ್ (Costly Mobile). ಅದ್ರ ಬೆಲೆ ಎಷ್ಟು ಗೊತ್ತಾ ?
ಮುಕೇಶ್ ಅಂಬಾನಿ (Mukesh Ambani), ಭಾರತದ ಮತ್ತು ಇಡೀ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಅಗ್ರ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ ಅವರಂತೆಯೇ ಪತ್ನಿ ನೀತಾ ಅಂಬಾನಿ (Nita Ambani) ಕೂಡಾ ಅತ್ಯಂತ ಯಶಸ್ವಿ ಉದ್ಯಮಿ. ಅವರು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮಾಲೀಕರಾಗಿದ್ದಾರೆ. ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಮಾಲೀಕರಾಗಿದ್ದಾರೆ. ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ಗೆ (Lifestyle0 ನೀತಾ ಅಂಬಾನಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಹಲವು ಬಾರಿ ನೀತಾ ಅಂಬಾನಿ ತಾವು ಧರಿಸಿದ ಕಾಸ್ಟ್ಲೀ (Costly) ಸೀರೆ, ಇಯರಿಂಗ್ಸ್, ನೆಕ್ಲೇಸ್, ಚಪ್ಪಲಿ ಮೊದಲಾವುಗಳಿಂದ ಸುದ್ದಿಯಾಗಿದ್ದರು. ನೀತಾ ಅಂಬಾನಿ ಬಳಸುವ ಒಂದೊಂದು ವಸ್ತು ಸಹ ಬಹಳ ಕಾಸ್ಟ್ಲೀಯಾಗಿರುತ್ತದೆ.
ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮತ್ತು ಮಗಳು. ನೀತಾ ಅಂಬಾನಿ ಲೋಕೋಪಕಾರಕ್ಕೆ ಹೆಸರುವಾಸಿಯಾಗಿದ್ದಾರೆ. ಮಾತ್ರವಲ್ಲದೆ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ಉದ್ಯಮಿಯೂ ಹೌದು.
ವಿಶ್ವದ ಅತ್ಯಂತ ದುಬಾರಿ ಕಾರಿನ ಓನರ್ ನೀತಾ ಅಂಬಾನಿ ಡ್ರೈವರ್ ಸ್ಯಾಲರಿ ಎಷ್ಟು?
ಐಷಾರಾಮಿ ಜೀವನಶೈಲಿಗೆ ಹೆಸರುವಾಸಿದ ನೀತಾ ಅಂಬಾನಿ
ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಉದಾಹರಣೆಗೆ, ಮುಂಬೈನಲ್ಲಿರುವ ಆಂಟಿಲ್ಲಾ ಎಂಬ ಅವರ ಮನೆ ವಿಶ್ವದ ಅತ್ಯಂತ ದುಬಾರಿಯಾಗಿದೆ. ಆದ್ದರಿಂದ, ಬ್ರಾಂಡ್ ಬ್ಯಾಗ್‌ಗಳು, ಬೂಟುಗಳು ಮತ್ತು ಕೈಗಡಿಯಾರಗಳು ನಿಸ್ಸಂಶಯವಾಗಿ ಪಟ್ಟಿಗೆ ಬರುತ್ತವೆ,.ಆದರೆ ಅವರು ಯಾವ ಗ್ಯಾಜೆಟ್‌ಗಳನ್ನು ಇಷ್ಟಪಡುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ನೀತಾ ಅಂಬಾನಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ನೀತಾ ಅಂಬಾನಿ ಬಳಸ್ತಿರೋ ಮೊಬೈಲ್ ಬೆಲೆ ಎಷ್ಟು ಗೊತ್ತಾ ?
ಸದ್ಯ ಟ್ರೆಂಡಿಂಗ್‌ನಲ್ಲಿರೋ ವಿಷ್ಯ ನೀತಾ ಅಂಬಾನಿ ಬಳಸ್ತಿರೋ ಕಾಸ್ಟ್ಲೀ ಮೊಬೈಲ್ ಬಗ್ಗೆ. ಬಹುಶಃ ನೀತಾ ಅಂಬಾನಿ ಫೋನ್ ಹೇಗಿರಬಹುದು ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಯಾಕೆಂದರೆ ನೀತಾ ಅಂಬಾನಿ ಬಳಸುವ ಎಲ್ಲಾ ವಸ್ತುಗಳೂ ಐಷಾರಾಮಿಯಾಗಿರುತ್ತವೆ. ಹಾಗೆಯೇ ಈ ಮೊಬೈಲ್ ಸಹ ಕಂಪ್ಲೀಟ್ ರಿಚ್ ಲುಕ್‌ನಿಂದ ಕೂಡಿದೆ. ಈ ಮೊಬೈಲ್ ನಾವು ನೀವು ಬಳಸುವ ಮೊಬೈಲ್‌ನಂತಿಲ್ಲ. ನೋಡಲು ಸಂಪೂರ್ಣ ಭಿನ್ನವಾಗಿದ್ದು, ಮೊಬೈಲ್ ಸುತ್ತಲೂ ಚಿನ್ನ, ವಜ್ರಗಳನ್ನು ಜೋಡಿಸಲಾಗಿದೆ.
ಅಂಬಾನಿ ಪತ್ನಿಗೆ 57..! ನೀತಾ ಬ್ಯೂಟಿ ಸೀಕ್ರೇಟ್ ಏನು..?
ಜನಸಾಮಾನ್ಯರು ಮೊಬೈಲ್‌ಗೆ ಎಷ್ಟು ದುಡ್ಡು ಕೊಡುತ್ತಾರೆ. ಬಹುಶಃ ಸಾವಿರಗಳಲ್ಲಿ. ಐಫೋನ್ ಪ್ರಿಯರು ಲಕ್ಷಗಟ್ಟಲೆ ಪಾವತಿಸುತ್ತಾರೆ. ಆದರೆ ನೀತಾ ಅಂಬಾನಿಯ ಕೈಯಲ್ಲಿರುವ ಮೊಬೈಲ್ ಬೆಲೆ ಕೋಟಿಯಲ್ಲಿದೆ. ಅದೂ ಒಂದೋ, ಎರಡೋ ಕೋಟಿಯೇನಲ್ಲ. ಭರ್ತಿ 311 ಕೋಟಿ ರೂ. ಈ ಫೋನ್ 2014ರಲ್ಲಿ ಬಿಡುಗಡೆಯಾದ ಐಫೋನ್‌ನ ಮಾದರಿಯಾಗಿದೆ. ವರದಿಯೊಂದರ ಪ್ರಕಾರ, ನೀತಾ ಅಂಬಾನಿ, Falcon Supernova iPhone 6 Pink Diamond ಅನ್ನು ಬಳಸುತ್ತಾರೆ. ಸಾಧನದ ಬೆಲೆ $48.5 ಮಿಲಿಯನ್, ಅಂದರೆ ಸರಿಸುಮಾರು 311 ಕೋಟಿ ರೂ. ನಿಸ್ಸಂಶಯವಾಗಿ, ಇದು ವಿಶೇಷವಾಗಿ ರಚಿಸಲಾದ, ಸೀಮಿತ ಆವೃತ್ತಿಯ ಮಾದರಿಯಾಗಿದೆ.
24-ಕ್ಯಾರೆಟ್ ಚಿನ್ನ, ವಜ್ರದಿಂದ ಮಾಡಿರುವ ಮೊಬೈಲ್
ವಾಸ್ತವವಾಗಿ, ಇಷ್ಟು ದುಬಾರಿ ಬೆಲೆಯ ಹಿಂದೆ ಕೆಲವು ಅದ್ಭುತ ವೈಶಿಷ್ಟ್ಯಗಳಿವೆ. ಮೊದಲನೆಯದಾಗಿ, ಈ ಫೋನ್ ಸಂಪೂರ್ಣ 24-ಕ್ಯಾರೆಟ್ ಚಿನ್ನದಿಂದ ಮಾಡಲ್ಪಟ್ಟಿದೆ. ಮೊಬೈಲ್‌ನಲ್ಲಿ ಗುಲಾಬಿ ಚಿನ್ನವನ್ನೂ ಬೆರೆಸಿ ಬಳಸಲಾಗಿದೆ. ಮತ್ತು ಅದರ ಹಿಂದೆ ಗುಲಾಬಿ ಬಣ್ಣದ ವಜ್ರವನ್ನು ಸಹ ಜೋಡಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಇದರ ಸುರಕ್ಷತೆಯೂ ಅತ್ಯುತ್ತಮವಾಗಿದೆ. ಇದು ಎಷ್ಟು ಸುರಕ್ಷಿತವಾಗಿದೆ ಎಂದರೆ ನೀತಾ ಅಂಬಾನಿಯನ್ನು ಹೊರತುಪಡಿಸಿ ಯಾರೂ ಮೊಬೈಲ್‌ನ್ನು ಓಪನ್ ಮಾಡಲು ಸಾಧ್ಯವಿಲ್ಲ.
ಅಷ್ಟೇ ಅಲ್ಲ. ಮೋಬೈಲ್‌ನಲ್ಲಿ ಹಿಂಭಾಗದಲ್ಲಿ ಬೃಹತ್ ಪಿಂಕ್ ಡೈಮಂಡ್ ಇದೆ ಮತ್ತು ಫೋನ್ ಅನ್ನು ಹ್ಯಾಕಿಂಗ್‌ನಿಂದ ರಕ್ಷಿಸಲಾಗಿದೆ. ಇದನ್ನು ಯಾರೂ ಸುಲಭವಾಗಿ ಹ್ಯಾಕ್ ಮಾಡದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ವರದಿಯಾಗಿದೆ.