
ಬೇಸಿಗೆಯಲ್ಲಿ ಟ್ಯಾನಿಂಗ್ (tanning) ಆಗೋದು ಹೆಚ್ಚು. ಕೈನ ಅರ್ಧ ಭಾಗ ಕಪ್ಪಾಗಿದ್ರೆ ಮತ್ತರ್ಧ ಭಾಗ ಬೆಳ್ಳಗಿರುತ್ತದೆ. ಚಪ್ಪಲಿ ಕವರ್ ಮಾಡಿದ ಭಾಗ ಬೆಳ್ಳಗಿದ್ರೆ ಉಳಿದ ಭಾಗ ಕಪ್ಪಾಗಿರುತ್ತದೆ. ಕತ್ತು, ಮುಖ ಕೂಡ ಕಪ್ಪಾಗೋದನ್ನು ಕಾಣ್ಬಹುದು. ಸೌಂದರ್ಯಕ್ಕೆ ಇನ್ನೊಂದು ಹೆಸರಾಗಿರೋ ಹುಡುಗಿಯರು, ಟ್ಯಾನ್ ತೆಗೆಯೋಕೆ ಸಾಕಷ್ಟು ಕಸರತ್ತು ಮಾಡ್ತಾರೆ. ಒಂದಿಷ್ಟು ಬ್ಯೂಟಿ ಪ್ರಾಡಕ್ಟ್ ಮೊರೆ ಹೋಗ್ತಾರೆ. ಆದ್ರೆ ಹುಡುಗ್ರು ಈ ವಿಷ್ಯದಲ್ಲಿ ಡೋಟ್ ಕೇರ್. ಹೆಚ್ಚು ಟೈಂ ಬಿಸಿಲಿನಲ್ಲಿ ಇರೋ ಅವರು ಬೇಗ ಟ್ಯಾನ್ ಕೂಡ ಆಗ್ತಾರೆ. ಆದ್ರೆ ಈ ಟ್ಯಾನ್ ತೆಗೆಯೋಕೆ ಅವರು ಸಲೂನ್ಗೆ ಹೋಗೋದು ಬಹಳ ಅಪರೂಪ.
ಸೋಶಿಯಲ್ ಮೀಡಿಯಾ, ಯುಟ್ಯೂಬ್ (Youtube) ನಲ್ಲಿ ಈ ಟ್ಯಾನ್ ತೆಗೆದು ಹಾಕಲು ಅನೇಕ ಟಿಪ್ಸ್ ನೀಡಲಾಗುತ್ತೆ. ಅದನ್ನು ಹುಡುಗಿಯರು ಚಾಚುತಪ್ಪದೆ ಪಾಲಿಸ್ಬಹುದು, ಆದ್ರೆ ಹುಡುಗರಿಗೆ ಅಷ್ಟೆಲ್ಲ ಮಾಡುವ ತಾಳ್ಮೆ ಇಲ್ಲ. ಹಾಗೆ ಎಲ್ಲವು ವರ್ಕ್ ಔಟ್ ಆಗೋದಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ಯಾನ್ ತೆಗೆದುಹಾಕುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವೇ ನಿಮಿಷದಲ್ಲಿ ಟ್ಯಾನ್ ತೆಗೆದು ಹಾಕುವ ಈ ಟಿಪ್ಸ್ ಒಂದು ದಿನದಲ್ಲಿ 7 ಕೋಟಿಗೂ ಹೆಚ್ಚು ವೀವ್ಸ್ ಪಡೆದಿದೆ. ಹುಡುಗ್ರು ಆರಾಮವಾಗಿ ಇದನ್ನು ಟ್ರೈ ಮಾಡ್ಬಹುದು. ಕಡಿಮೆ ವಸ್ತುಗಳನ್ನು ಬಳಸಿ, ಅತಿ ಕಡಿಮೆ ಟೈಂನಲ್ಲಿ ಟ್ಯಾನ್ ತೆಗೆಯಲಾಗಿದೆ. ಆದ್ರೆ ಇದು ಎಷ್ಟು ವರ್ಕ್ ಔಟ್ ಆಗುತ್ತೆ ಹೇಳೋದು ಕಷ್ಟ.
look_art_saloon ಹೆಸರಿನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಸಲೂನ್ ವ್ಯಕ್ತಿ, ಟ್ಯಾನ್ ತೆಗೆಯುವ ಮಿಶ್ರಣ ತಯಾರಿಸಿ ಅದನ್ನು ಕೈಗೆ ಹಚ್ಚಿ, ಕೆಲವೇ ಕ್ಷಣಗಳಲ್ಲಿ ಕೈ ಬೆಳ್ಳಗೆ ಮಾಡಿದ್ದಾನೆ.
ಟ್ಯಾನ್ ತೆಗೆಯೋಕೆ ಬಳಸಿದ ವಸ್ತುಗಳು ಯಾವುವು? : ½ ನಿಂಬೆಹಣ್ಣು, 1 ಟೀಸ್ಪೂನ್ ಶಾಂಪೂ , 1 ಟೀಸ್ಪೂನ್ ಟೂತ್ಪೇಸ್ಟ್ , 1 ಟೀಚಮಚ ಈನೋ ಬಳಸಲಾಗಿದೆ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಟ್ಯಾನ್ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ಕ್ಲೀನ್ ಮಾಡಲಾಗಿದೆ. ಕಪ್ಪಗಿದ್ದ ಕೈ ಬೆಳ್ಳಗಾಗಿರೋದನ್ನು ನೀವು ಕಾಣ್ಬಹುದು.
ಸೋಶಿಯಲ್ ಮೀಡಿಯಾ ಕಮೆಂಟ್ : ಒಂದೇ ದಿನದಲ್ಲಿ ಈ ಟ್ಯಾನ್ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್ ಪಡೆದಿದೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಹುತೇಕ ಎಲ್ಲರೂ ಈ ಟಿಪ್ಸ್ ವಿರುದ್ಧವೇ ಮಾತನಾಡಿದ್ದಾರೆ. ಈ ಮಿಶ್ರಣ, ಟ್ಯಾನ್ ತೆಗೆಯೋದಿಲ್ಲ ಎಂಬುದು ಬಹುತೇಕ ಅಭಿಪ್ರಾಯವಾಗಿದೆ. ಕೆಲವರು ತಾವು ಇದನ್ನು ಪ್ರಯೋಗ ಮಾಡಿದ್ದು, ಟ್ಯಾನ್ ತೆಗೆಯೋಕೆ ಇದು ಹೆಲ್ಪ್ ಮಾಡುತ್ತೆ ಎಂದಿದ್ದಾರೆ.
ಯಾವ ಎಚ್ಚರಿಗೆ ತೆಗೆದುಕೊಳ್ಬೇಕು? : ಪೇಸ್ಟ್, ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಈನೋ ಚರ್ಮದ ಮೇಲಿನ ಮೆಲನಿನ್ ಅನ್ನು ಆಕ್ಸಿಡೀಕರಿಸುತ್ತದೆ. ಆರಂಭದಲ್ಲಿ ಕೈ ಬೆಳ್ಳಗೆ ಕಂಡ್ರೂ ಸ್ವಲ್ಪ ಸಮಯದ ನಂತ್ರ ಚರ್ಮದ ಟೋನ್ ಹಿಂದಿನದಕ್ಕಿಂತ ಹೆಚ್ಚು ಕಪ್ಪಾಗುವ ಸಾಧ್ಯತೆ ಇದೆ. ಅಲ್ಲದೆ ಈ ಪೇಸ್ಟ್ ಬಳಕೆ ನಂತ್ರ ಚರ್ಮ ಮತ್ತಷ್ಟು ಸೂಕ್ಷ್ಮವಾಗುವ ಸಾಧ್ಯತೆ ಇದೆ. ಎಲ್ಲರ ಚರ್ಮಕ್ಕೂ ಇದು ಹೊಂದುವುದಿಲ್ಲ. ಹಾಗಾಗಿ ಆರಂಭದಲ್ಲಿ ಸಣ್ಣ ಭಾಗಕ್ಕೆ ಪ್ರಯೋಗ ಮಾಡಿ. ಇದು ಸಕ್ಸಸ್ ಆದ್ರೆ ಮಾತ್ರ ನೀವು ಇಡೀ ಕೈ ಅಥವಾ ಕುತ್ತಿಗೆಗೆ ಬಳಕೆ ಮಾಡಿ. ಯಾವುದೇ ಸಣ್ಣ ಸಮಸ್ಯೆ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.