ಜನರು ಮೋಸ ಮಾಡೋಕೆ ತಮ್ಮದೆ ಮಾರ್ಗ ಹುಡುಕ್ತಾರೆ. ಅನೇಕ ನಾಟಕವಾಡಿ ಹಣ ವಸೂಲಿ ಮಾಡ್ತಾರೆ. ನಮಗೆ ಅವರು ನಾಟಕವಾಡ್ತಿದ್ದಾರೆ ಎನ್ನುವ ಸಣ್ಣ ಸುಳಿವೂ ಸಿಕ್ಕಿರೋದಿಲ್ಲ. ಚೀನಾದಲ್ಲೂ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿ ಹಣ ಮಾಡಿದ ತಂಡವೊಂದು ಸದ್ದು ಮಾಡಿದೆ.
ಜಗತ್ತಿನಲ್ಲಿ ಮೋಸಗಾರರು ಮತ್ತು ವಂಚಕರ ಕೊರತೆಯಿಲ್ಲ. ಈಗಿನ ದಿನಗಳಲ್ಲಿ ನಾನಾ ರೀತಿಯಲ್ಲಿ ಜನರು ವಂಚನೆ ಮಾಡ್ತಾರೆ. ತಮ್ಮ ವೃತ್ತಿಯಲ್ಲಿ ಯಾವುದು ತಪ್ಪು, ಯಾವುದು ಸರಿ ಎನ್ನುವ ಮಾಹಿತಿ ಜನರಿಗಿರುತ್ತದೆ. ಈ ಬುದ್ಧಿವಂತಿಕೆ ಬಳಸಿಕೊಂಡು ಬೇರೆಯವರಿಗೆ ಮೋಸ ಮಾಡ್ತಾರೆ. ಈಗ ಚೀನಾದ ಬ್ಯೂಟಿಪಾರ್ಲರ್ ಒಂದು ಇದೇ ವಿಷ್ಯದಲ್ಲಿ ಸುದ್ದಿ ಮಾಡಿದೆ.
ಮಧ್ಯ ಚೀನಾ (China ) ದ ಹುಬೈ ಪ್ರಾಂತ್ಯದ ಯಿಚಾಂಗ್‌ನಲ್ಲಿ ಘಟನೆ ನಡೆದಿದೆ. ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಜನರಿಗೆ ಯಾವ ಬ್ಯೂಟಿ (Beauty) ಪ್ರಾಡೆಕ್ಟ್ ಹೇಗೆ ಕೆಲಸ ಮಾಡುತ್ತೆ ಎನ್ನುವ ಜ್ಞಾನವಿರುತ್ತದೆ. ಹಾಗೆಯೇ ಕೆಲ ಬ್ಯೂಟಿ ಪ್ರಾಡೆಕ್ಟ್ ಎಲ್ಲರ ಚರ್ಮಕ್ಕೆ ಆಗೋದಿಲ್ಲ. ಅಲರ್ಜಿ ಸೇರಿದಂತೆ ಚರ್ಮದ ಸಮಸ್ಯೆಯುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು, ಬ್ಯೂಟಿ ಕ್ಲಿನಿಕ್ (Clinic) ವಿರುದ್ಧ ಇಲ್ಲವೆ ಕಂಪನಿ ವಿರುದ್ಧ ದೂರು ನೀಡಬಹುದು. ಕೋರ್ಟ್ ನಲ್ಲಿ ಇದು ಸಾಭೀತಾದ್ರೆ ಕಂಪನಿ ಅಥವಾ ಬ್ಯೂಟಿ ಕ್ಲಿನಿಕ್ ಪೀಡಿತರಿಗೆ ಪರಿಹಾರ ರೂಪದಲ್ಲಿ ಹಣ ನೀಡಬೇಕಾಗುತ್ತದೆ. ಯಿಚಾಂಗ್ ನಲ್ಲಿರುವ ಬ್ಯೂಟಿ ಕ್ಲಿನಿಕ್‌ನ ಮಾಲೀಕರಾದ ಕ್ವಿಯಾನ್ ಮತ್ತು ಕ್ಸು ಗೆ ಈ ವಿಷ್ಯ ಗೊತ್ತಿತ್ತು. ಅವರ ಕ್ಲಿನಿಕ್ ಗೆ ಗ್ರಾಹಕರು ಬರ್ತಿರಲಿಲ್ಲ. ಇದ್ರಿಂದಾಗಿ ಅವರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ನಷ್ಟವನ್ನು ತುಂಬಿಕೊಳ್ಳಲು ಮೋಸದ ದಾರಿ ಹಿಡಿದ್ರು.
undefined
ಸೈಕಲ್ ಚಕ್ರ ತಯಾರಿಸ್ತಿದ್ದ ಸಣ್ಣ ಕಂಪೆನಿಯ ಯುವಕ ಬಿಲಿಯನೇರ್ ಅಂಬಾನಿ ಕುಟುಂಬದ ಅಳಿಯ!
ಹೀಗೆ ಮೋಸ ಮಾಡಿದ್ದ ಕ್ವಿಯಾನ್ – ಕ್ಸು : ಯಾವುದೇ ಸೌಂದರ್ಯವರ್ಧಕ ವಿಧಾನವು ಚರ್ಮ ಅಥವಾ ಮುಖಕ್ಕೆ ಹಾನಿಯನ್ನುಂಟುಮಾಡಿದರೆ, ಕ್ಲೈಂಟ್ ಪ್ರಕರಣವನ್ನು ದಾಖಲಿಸುವುದಾಗಿ ಬೆದರಿಸಿದ್ರೆ ಬ್ಯೂಟಿ ಕ್ಲಿನಿಕ್ ಪರಿಹಾರವನ್ನು ನೀಡುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಸಾಮಾನ್ಯವಾಗಿ ಕೋರ್ಟ್ ಗೆ ಹೋಗುವ ಬದಲು ನಮ್ಮ ನಮ್ಮಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಂಪನಿ, ಬ್ಯೂಟಿ ಕ್ಲಿನಿಕ್ ಮುಂದಾಗುತ್ತೆ ಎನ್ನುವ ಜ್ಞಾನ ಅವರಿಗಿತ್ತು. ಹಾಗಾಗಿ ಅವರು ಒಂಭತ್ತು ಜನರ ತಂಡವನ್ನು ಮೊದಲು ಸಿದ್ಧಪಡಿಸಿದ್ರು. ಎಲ್ಲರಿಗೂ ತರಬೇತಿ ನೀಡಿದ್ರು. ಇವರ ಗುಂಪಿನ ಜನರು ಮೊದಲು ಬ್ಯೂಟಿ ಕ್ಲಿನಿಕ್ ಗಳಿಂದ ಆನ್ಲೈನ್ ಅಪಾಯಿಂಟ್ಮೆಂಟ್ ಪಡೆಯುತ್ತಿದ್ದರು. ಹೈಲುರಾನಿಕ್ ಆಸಿಡ್ ಚುಚ್ಚುಮದ್ದುಗಾಗಿ ಅಪಾಯಿಂಟ್ಮೆಂಟ್ ಪಡೆಯಲಾಗ್ತಿತ್ತು. ಈ ಚುಚ್ಚುಮದ್ದು ಸುಕ್ಕುಗಳನ್ನು ತಡೆಯುವುದಲ್ಲದೆ ನಿಮ್ಮ ಮೈ ಬಣ್ಣಕ್ಕೆ ಹೊಳಪು ನೀಡುತ್ತದೆ. ಆನ್ಲೈನ್ ಅಪಾಯಿಂಟ್ಮೆಂಟ್ ಸಿಕ್ಕ ನಂತ್ರ ಅಲ್ಲಿಗೆ ಹೋಗ್ತಿದ್ದ ಇವರು ಯಾರಿಗೂ ತಿಳಿಯದೆ ಮೈಡ್ರಿಯಾಟಿಕ್ ಕಣ್ಣಿನ ಹನಿಗಳನ್ನು ಕಣ್ಣಿಗೆ ಹಾಕಿಕೊಳ್ತಿದ್ದರು. ನಂತ್ರ ಕಣ್ಣು ಉರಿ, ಕಣ್ಣು ಕಾಣ್ತಿಲ್ಲ ಎಂದು ನಾಟಕ ಮಾಡ್ತಿದ್ದರು. ಮೈಡ್ರಿಯಾಟಿಕ್ ಐ ಡ್ರಾಪ್ ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸುವ ಕೆಲಸ ಮಾಡುತ್ತದೆ.
ಏರ್ ಇಂಡಿಯಾ ಗಗನಸಖಿ, ಪೈಲೆಟ್‌ಗೆ ಮನೀಶ್ ಮಲ್ಹೋತ್ರಾ ಕೈಚಳದ ಹೊಸ ಸಮವಸ್ತ್ರ!
ಇದಾದ್ಮೇಲೆ ಮನೆಗೆ ಹೋಗ್ತಿದ್ದ ಅವರು ಕ್ಲಿನಿಕ್ ಮಾಲೀಕರಿಗೆ ಕರೆ ಮಾಡಿ, ಕಣ್ಣು ಕಾಣ್ತಿಲ್ಲ, ದೂರು ನೀಡುತ್ತೇವೆ ಎಂದು ಬೆದರಿಸುತ್ತಿದ್ದರು. ಪೊಲೀಸ್, ಕೋರ್ಟ್ ಬಯಕ್ಕೆ ಅನೇಕ ಕ್ಲಿನಿಕ್ ಮಾಲಿಕರು, ಹಣ ನೀಡಿ ಗ್ರಾಹಕರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದರು. ಅನೇಕರು 4.7 ಲಕ್ಷದಿಂದ 11 ಲಕ್ಷದವರೆಗೆ ಹಣ ನೀಡಿದ್ದಾರೆ.
ಆಗಸ್ಟ್ 2022ರಿಂದ ನವೆಂಬರ್ 2022 ರವರೆಗೆ ಸುಮಾರು 20 ಬ್ಯೂಟಿ ಕ್ಲಿನಿಕ್‌ಗಳಿಗೆ ಮೋಸ ಮಾಡಿದ ಇವರ ಗ್ಯಾಂಗ್ ಸುಮಾರು 1.15 ಕೋಟಿ ರೂಪಾಯಿ ವಂಚಿಸಿದೆ. ಬಂದ ಹಣವನ್ನು ಗ್ಯಾಂಗ್ ನ ಎಲ್ಲ ಸದಸ್ಯರು ಹಂಚಿಕೊಳ್ತಿದ್ದರು. ಕ್ವಿಯಾನ್ – ಕ್ಸು ಈ ಹಣವನ್ನು ಸಾಲ ತೀರಿಸಲು ಬಳಸಿಕೊಂಡಿದ್ದರು.
ಕೊನೆಗೂ ಸಿಕ್ಕಿಬಿದ್ದ ಖದೀಮರು : ಕೊನೆಗೂ ಈ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಕೋರ್ಟ್ ಒಂಬತ್ತು ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ. 2,000 ರಿಂದ 50,000 ಯುವಾನ್ ವರೆಗಿನ ದಂಡ ವಸೂಲಿ ಮಾಡಿದೆ.