ದೀಪಾವಳಿ ಸಂಭ್ರಮಕ್ಕೆ ರಾಮಾವಳಿ ಬನಾರಸಿ ರೇಷ್ಮೆ ಸೀರೆ ಧರಿಸಿದ ನೀತಾ ಅಂಬಾನಿ, ಏನಿದರ ವಿಶೇಷತೆ?

Published : Nov 05, 2026, 12:32 PM IST
Nita Ambani Ramavali Banarasi Silk Saree Special

ಸಾರಾಂಶ

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನೀತಾ ಅಂಬಾನಿ ವಿಶೇಷ ರಾಮಾವಳಿ ಬನಾಸರಿ ರೇಷ್ಮೆ ಸೀರೆ ಧರಿಸಿದ್ದಾರೆ. ಶ್ರೀರಾಮನ ಶಾಸನ, ವಿಷ್ನುಪಾದ ಉಲ್ಲೇಖವಿರುವ ಈ ಸೀರೆಯಲ್ಲಿ ಚಿನ್ನದ ಝರಿ ಸೇರಿದಂತೆ ಹಲವು ಕಲಾತ್ಮಕತೆ ಈ ಸೀರೆಯಲ್ಲಿದೆ.

ಮುಂಬೈ (ನ.05) ದೀಪಾವಳಿ ಸಡಗರ ಶುರುವಾಗಿದೆ. ಹಬ್ಬದ ಸಂಭ್ರಮದಲ್ಲಿ ಹೊಸ ಬಟ್ಟೆ ಧರಿಸಿ ಹಲವು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರಿಯಲ್ಲಿ ದೀಪಾವಳಿ ಸಂಭ್ರಮ ಶುರುವಾಗಿದೆ. ರಿಲಯನ್ಸ್ ದೀಪಾವಳಿ ಉತ್ಸವದಲ್ಲಿ ನೀತಾ ಅಂಬಾನಿಯ ಸೀರೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಎಲ್ಲರ ಕೇಂದ್ರ ಬಿಂದುವಾಗಿದ್ದ ಈ ಸೀರೆ ಪೌರಾಣಿಕ ಹಿನ್ನಲೆ, ಸಾಂಸ್ಕೃತಿ ಹಿರಿಮೆಯನ್ನೊಳಗೊಂಡಿದೆ. ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಆಯೋಜಿಸಲಾದ ಉತ್ಸವದಲ್ಲಿ ನೀತಾ ಅಂಬಾನಿ ಶ್ರೀರಾಮ ಹಾಗೂ ವಿಷ್ಣು ಪಾದ ಚಿಹ್ನೆ ಒಳಗೊಂಡ ಅಪರೂಪದ ರಾಮಾವಳಿ ಬನಾರಸಿ ರೇಷ್ಮೆ ಸೀರೆ ಧರಿಸಿದ್ದಾರೆ.

ಬನಾರಸಿ ನೇಕಾರರ ಕಲಾತ್ಮಕ ಸೃಷ್ಟಿ

ನೀತಾ ಅಂಬಾನಿ ಧರಿಸಿದ ಈ ವಿಶೇಷ ಸೀರೆ ವಾರಣಸಿಯ ಸಾಂಪ್ರದಾಯಿಕ ಬನಾರಸಿ ನೇಕಾರರ ಕಲಾತ್ಮಕ ಸೃಷ್ಟಿಯಾಗಿದೆ. ಈ ಕೆಂಪು ರೇಷ್ಮೆ ಸೇರಿ ಸಾಂಸ್ಕೃತಿ ಹಾಗೂ ಆಧ್ಯಾತ್ಮಿಕ ಹಿನ್ನಲೆ ಹೊಂದಿದೆ. ಕಡ್ವಾ ತಂತ್ರಜ್ಞಾನದಲ್ಲಿ ಚಿನ್ನದ ಝರಿ ದಾರಗಳಿಂದ ಈ ಸೀರೆ ನೇಯಲಾಗಿದೆ. ಈ ಸೀರೆಯಲ್ಲಿ ಶ್ರೀರಾಮನಾಮ ಮಂತ್ರಗಳು, ಸಾಂಪ್ರದಾಯಿಕ ಹೂವಿನ ವಿನ್ಯಾಸ, ಓಂ ಚಿಹ್ನೆ, ವಿಷ್ಣುಪಾದ ವಿನ್ಯಾಸಗಳನ್ನು ಒಳಗೊಂಡಿದೆ. ನೇಕಾರ ಅಜಯ್ ಭೋಜ್ ಸಾರಥ್ಯದಲ್ಲಿ ಪರಿಣಿತ ನೇಯ್ಕಾರರು ಐದು ತಿಂಗಳ ನಿರಂತರ ಪರಿಶ್ರಮದ ಮೂಲಕ ಈ ಸೀರೆ ತಯಾರಿಸಲಾಗಿದೆ.

ಸೀರೆಗೆ ತಕ್ಕಂತೆ ಜ್ಯೂವೆಲ್ಲರಿ

ನೀತಾ ಅಂಬಾನಿ ಪ್ರತಿ ಉಡುಗೆಗೂ ಅದಕ್ಕೆ ತಕ್ಕಂತೆ ಆಭರಣ ಧರಿಸುತ್ತಾರೆ. ಇದೀಗ ಬನಾರಸಿ ರಾಮಾವಳಿ ರೇಷ್ಮೆ ಸೇರಿಗೂ ದೇವಸ್ಥಾನ ವಿನ್ಯಾಸದ ಅಪರೂಪದ ಹಾರ ಧರಿಸಿದ್ದಾರೆ. ಪೊಲ್ಕಿ ಅನ್‌ಕಟ್ ವಜ್ರ, ಹಸಿರು ಪಚ್ಚೆ ಎಮ್ರಲಾಡ್ ಹಾಗೂ ಮುತ್ತುಗಳಿಂದ ಅಲಂಕೃತಗೊಂಡ ರಾಜಸಿಕ ಹಾರ ಇದಾಗಿದೆ. ಇದಕ್ಕೆ ಹೊಂದಿಕೊಳ್ಳುವ ಜುಮುಕಿ ಹಾಗೂ ಬಂಗಾರದ ಬಳೆಗಳನ್ನು ನೀತಾ ಅಂಬಾನಿ ಧರಿಸಿದ್ದಾರೆ. ಎಂದಿನಂತೆ ಮೇಕಅಪ್ ವಿಚಾರದಲ್ಲ ನೀತಾ ಅಂಬಾನಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಕೆಂಪು ಬಿಂದಿ, ಕೂದಲಿಗೆ ಮಲ್ಲಿಗೆ ಗಜರಾದಿಂದ ನೀತಾ ಅಂಬಾನಿ ಸಂಪ್ರಾದಾಯಿಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

ರಿಲಯನ್ಸ್ ದೀಪಾವಳಿ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಕುಟುಂಬಸ್ಥರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶ್ಲೋಕಾ ಮೆಹ್ತಾ ಅಂಬಾನಿ ಧರಿಸಿದ್ದ ಜರ್ದೋಜಿ ನಕ್ಷೆಯ ನೇರಳೆ ಬಣ್ಣದ ಎಥ್ನಿಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬಾನಿ ಕುಟುಂಬದ ಪತಿಯೊಬ್ಬರ ಉಡುಗೆ ತೊಡುಗೆ ವಿಶೇಷವಾಗಿರುತ್ತದೆ. ಅದರಲ್ಲೂ ನೀತಾ ಅಂಬಾನಿ ಪ್ರತಿ ಬಾರಿ ಹೊಸ ಹೊಸ ಹಾಗೂ ಸಂಪ್ರಾದಾಯಿಕ ಸೀರೆಗಳ ಮೂಲಕ ಮಿಂಚಿದ್ದಾರೆ. ಇದೀಗ ದೀಪಾವಳಿಗ ರಾಮಾವಳಿ ರೇಷ್ಮೆ ಸೀರೆ ಮೂಲಕ ಕಾಣಿಸಿಕೊಂಡಿದ್ದಾರೆ.

ನೀತಾ ಅಂಬಾನಿ ದೀಪಾವಳಿ ಸಡಗರದ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದ್ಧೂರಿತನ ಜೊತೆ ಆಧ್ಯಾತ್ಮಿಕತೆಯ ಈ ಸೀರೆ ಎಲ್ಲರ ಮನೆ ಮಾತಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'7 ಸಾವಿರದ ಸೀರೆ ಕೊಂಡರೆ 7 ಸಾವಿರ ಬಾರಿ ಉಡ್ತೀನಾ?' ಸುಧಾ ಮೂರ್ತಿ ಅವರ ಈ ಪ್ರಶ್ನೆಯಲ್ಲಿದೆ ಜೀವನದ ದೊಡ್ಡ ಪಾಠ!
ಶ್ರೀರಾಮನಿಂದ ಹಿಡಿದು ರಾಮಾಯಣದ ಕಥೆಗಳವರೆಗೆ... ನೀತಾ ಅಂಬಾನಿ ಸೀರೆಯಲ್ಲೇ ಅರಳಿದ ದೈವಿಕ ಲೋಕ!