
ಹೈದರಾಬಾದ್(ಮೇ.31) ಮಿಸ್ ವರ್ಲ್ಡ್ 2025 ಸ್ಪರ್ಧೆ ಭಾರಿ ಕುತೂಹಲ ಕೆರಳಿಸಿತ್ತು. ಕಾರಣ ಅಂತಿಮ ಸುತ್ತಿನಲ್ಲಿ ಭಾರತದ ಸುಂದರಿ ನಂದಿನ ಗುಪ್ತಾ ಕೂಡ ಕಾಣಿಸಿಕೊಂಡಿದ್ದರು. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮತ್ತೆ ಭಾರತ ಕಿರೀಟ ಧರಿಸಲಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬಂದಿತ್ತು. 6 ಬಾರಿ ವಿಶ್ವ ಸುಂದರಿ ಕಿರೀಟ ಗೆದ್ದಿರುವ ಭಾರತಕ್ಕೆ ಇದೀಗ ಮಿಸ್ ವರ್ಲ್ಡ್ ಮಿಸ್ ಆಗಿದೆ. ನಂದಿನಿ ಗುಪ್ತಾ ಹಿಂದಿಕ್ಕಿ ಥಾಯ್ಲೆಂಡ್‌ನ ಸುಂದರಿ ಓಪಲ್ ಸುಚಾತಾ ವಿಶ್ವ ಸುಂದರಿ ಕೀರಿಟ ಮುಡಿಗೇರಿಸಿದ್ದಾರೆ. ಈ ಮಿಸ್ ವರ್ಲ್ಡ್ ಕಿರೀಟ ಏಷ್ಯಾ ಖಂಡಕ್ಕೆ ಸೇರಿದೆ.
ಫೈನಲ್ ನಾಲ್ಕರಲ್ಲಿ ಮಾರ್ಟಿನಿಕ್ (ಅರೆಲ್ಲೆ ಜಾವೊಚಿಮ್), ಇಥಿಯೋಪಿಯಾ (ಹಸ್ಸೆಟ್ ಡೀರೆಜೆ ಅಡ್ಮಸ್ಸು), ಪೋಲೆಂಡ್ (ಮಜಾ ಲಾಡ್ಜಾ), ಮತ್ತು ಥೈಲ್ಯಾಂಡ್ (ಓಪಲ್ ಸುಚಾತಾ ಚೌಂಗ್ ಶ್ರೀ)ನಡುವೆ ತೀವ್ರ ಪೈಪೋಟಿ ನಡೆದಿತ್ತು. ಇವರಲ್ಲಿ ಮಿಸ್ ಥೈಲ್ಯಾಂಡ್ ಓಪಲ್ ಸುಚಾತಾ ಅವರನ್ನು ಅಂತಿಮ ವಿಜೇತರೆಂದು ಘೋಷಿಸಲಾಯಿತು.
ಇತಿಹಾಸ ಸೃಷ್ಟಿಸಿದ ಓಪಲ್ ಸುಚಾತಾ
ಥೈಲ್ಯಾಂಡ್ ಸುಂದರಿ ಓಪಲ್ ಸುಚಾತಾ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಇಥಿಯೋಪಿಯಾದ ಹಸ್ಸೆಟ್ ಡೀರೆಜೆ, ಎರಡನೇ ರನ್ನರ್ ಅಪ್ ಆಗಿ ಪೋಲೆಂಡ್‌ನ ಮಜಾ ಲಾಡ್ಜಾ, ಮತ್ತು ಮೂರನೇ ರನ್ನರ್ ಅಪ್ ಆಗಿ ಮಾರ್ಟಿನಿಕ್‌ನ ಅರೆಲ್ಲೆ ಜಾವೊಚಿಮ್ ಆಯ್ಕೆಯಾದರು. ಓಪಲ್ ಸುಚಾತಾ ಅವರಿಗೆ 21 ವರ್ಷ. ಈ ಯುವ ಸುಂದರಿ ಹೊಸ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದ್ದಕ್ಕಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ನಿರಾಸೆ ಮೂಡಿಸಿದ ನಂದಿನಿ ಗುಪ್ತಾ
ಮಿಸ್ ಇಂಡಿಯಾ ನಂದಿನಿ ಗುಪ್ತಾ ಟಾಪ್ 20ಕ್ಕೆ ಬಂದ್ರು. ಏಷ್ಯಾ - ಓಷಿಯಾನಾ ಖಂಡದಿಂದ ನಂದಿನಿ ಗುಪ್ತಾ ಟಾಪ್ 5ರಲ್ಲಿ ಒಬ್ಬರಾದ್ರು. ಏಷ್ಯಾ- ಓಷಿಯಾನಾದಿಂದ ಮೊದಲು ಆಸ್ಟ್ರೇಲಿಯಾದ ಜಾಸ್ಮಿನ್ ಸ್ಟ್ರಿಂಗರ್ ಟಾಪ್ 20ಕ್ಕೆ ಬಂದ್ರು. ಆಮೇಲೆ ಭಾರತದಿಂದ ನಂದಿನಿ ಗುಪ್ತಾ ಹೆಸರು ಹೇಳಿದಾಗ ಅಲ್ಲಿ ಜನ ಚಪ್ಪಾಳೆ ತಟ್ಟಿದ್ರು. ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ಅತಿಥಿಗಳು ಕೂಡ ನಂದಿನಿ ಗುಪ್ತಾ ಟಾಪ್ 20ಕ್ಕೆ ಬಂದಿದ್ದಕ್ಕೆ ಚಪ್ಪಾಳೆ ತಟ್ಟಿ ಶ್ಲಾಘಿಸಿದ್ರು. ಆದ್ರೆ ಟಾಪ್ 8ರಲ್ಲಿ ಭಾರತಕ್ಕೆ ನಿರಾಸೆ ಆಯ್ತು. ಏಷ್ಯಾ- ಓಷಿಯಾನಾದಿಂದ ಟಾಪ್ 2ರಲ್ಲಿ ಫಿಲಿಪ್ಪೀನ್ಸ್, ಥೈಲ್ಯಾಂಡ್ ದೇಶದ ಸುಂದರಿಯರು ಗೆದ್ದು ಟಾಪ್ 8ಕ್ಕೆ ಬಂದ್ರು. ಟಾಪ್ 8ರಲ್ಲಿ ಪ್ರತಿ ಖಂಡದಿಂದ ಇಬ್ಬಿಬ್ಬರನ್ನ ಆಯ್ಕೆ ಮಾಡ್ತಾರೆ. ಹೀಗಾಗಿ ನಂದಿನಿ ಗುಪ್ತಾಗೆ ನಿರಾಸೆ ಆಯ್ತು.ಒಟ್ಟಾರೆ ಮಿಸ್ ವರ್ಲ್ಡ್ 2025ರಲ್ಲಿ ನಂದಿನಿ ಗುಪ್ತಾ ಪ್ರಯಾಣ ಮುಗೀತು.
ಮೂರು ಸಲ ಮಿಸ್ ವರ್ಲ್ಡ್‌ಗೆ ಆತಿಥ್ಯ ವಹಿಸಿದ ಭಾರತ
ಮಿಸ್ ವರ್ಲ್ಡ್ ಸ್ಪರ್ಧೆಗೆ ಭಾರತ ಮೂರು ಸಲ ಆತಿಥ್ಯ ವಹಿಸಿದೆ. 1951ರಲ್ಲಿ ಲಂಡನ್‌ನಲ್ಲಿ ಸ್ಪರ್ಧೆ ಶುರುವಾದಾಗ 1996ರಲ್ಲಿ 46ನೇ ಸ್ಪರ್ಧೆ ನಮ್ಮ ದೇಶದ ಬೆಂಗಳೂರಿನಲ್ಲಿ ನಡೆಯಿತು. ಆಮೇಲೆ 71ನೇ ಸ್ಪರ್ಧೆ ಮುಂಬೈನಲ್ಲಿ, 72ನೇ ಸ್ಪರ್ಧೆ ಈಗ ಹೈದರಾಬಾದ್‌ನಲ್ಲಿ ನಡೀತಿದೆ. ಆದ್ರೆ ಇಲ್ಲಿಯವರೆಗೆ ಮೂರು ಸಲ ಆತಿಥ್ಯ ವಹಿಸಿದ ನಮ್ಮ ದೇಶ ದಾಖಲೆಯ 6 ಸಲ ಮಿಸ್ ವರ್ಲ್ಡ್ ಕಿರೀಟ ಗೆದ್ದಿದೆ.
ಮಿಸ್ ವರ್ಲ್ಡ್ ಕಪ್ ಗೆದ್ದ ಭಾರತೀಯ ತಾರೆಯರು ಯಾರು?
ಭಾರತ ಇಲ್ಲಿಯವರೆಗೆ ಆರು ಸಲ ವಿಶ್ವ ಸುಂದರಿ ಕಿರೀಟ ಗೆದ್ದಿದೆ. 1966ರಲ್ಲಿ ನಮ್ಮ ದೇಶದಿಂದ ಮಿಸ್ ವರ್ಲ್ಡ್ ಕಿರೀಟವನ್ನ ರೀಟಾ ಫಾರಿಯಾ ಮೊದಲ ಸಲ ಗೆದ್ದರು. ಆಮೇಲೆ 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತಾ ಮುಖಿ, 2000 ರಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಛಿಲ್ಲರ್ ನಮ್ಮ ದೇಶದ ಪರವಾಗಿ ಮಿಸ್ ವರ್ಲ್ಡ್ ಕಿರೀಟ ಗೆದ್ದು ಭಾರತದ ಹೆಸರು ಹೆಚ್ಚಿಸಿದ್ರು. ನಮ್ಮ ದೇಶದ ಹಾಗೆ ವೆನೆಜುವೆಲಾ ಕೂಡ ಆರು ಸಲ ಈ ಕಿರೀಟ ಗೆದ್ದಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸುಂದರಿಯರು ತಮ್ಮ ದೇಶವನ್ನ ಪ್ರತಿನಿಧಿಸುತ್ತಾರೆ. ಹೀಗೆ ನಮ್ಮ ದೇಶ ಆರು ಸಲ, ವೆನೆಜುವೆಲಾ ಆರು ಸಲ ವಿಶ್ವ ಸುಂದರಿ ಕಿರೀಟ ಗೆದ್ದಿವೆ. ಆದ್ರೆ ಈ ಸಲ ನಮ್ಮ ದೇಶದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂದಿನಿ ಗುಪ್ತಾ.. 2023ರಲ್ಲಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದಿದ್ರು. ಮಿಸ್ ಇಂಡಿಯಾ 2025ರಲ್ಲಿ ಮಾತ್ರ ಟಾಪ್ 20ರವರೆಗೆ ಬಂದ್ರು. ಇವರು ರಾಜಸ್ಥಾನದ ಕೋಟಾದ 21 ವರ್ಷದ ಯುವತಿ. ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಮಾಡಿದ್ದಾರೆ. ಈ ಸಲ ನಂದಿನಿ ಗುಪ್ತಾ ಈ ಸ್ಪರ್ಧೆಯಲ್ಲಿ ಗೆದ್ದಿದ್ರೆ ವಿಶ್ವ ದಾಖಲೆ ಆಗುತ್ತಿತ್ತು. ಆದ್ರೆ ಅವರು ಸೋತಿದ್ದರಿಂದ ಭಾರತದ ಆಸೆ ಈಡೇರಲಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.