ಪ್ರತಿ ತಿಂಗಳು ಕೂದಲಿಗೆ 29 ಸಾವಿರ ಖರ್ಚು ಮಾಡ್ತಾಳೆ ಮಹಿಳೆ ! ಕಾರಣ ಇಲ್ಲಿದೆ

Published : Aug 18, 2026, 05:42 PM IST
hair care

ಸಾರಾಂಶ

ಕೂದಲಿಗೆ ಎಣ್ಣೆ ಹಚ್ಚಿ, ಬಣ್ಣ ಹಚ್ಚಿ ಆರೈಕೆ ಮಾಡೋದು ಸುಲಭದ ಕೆಲ್ಸವಲ್ಲ. ಅದಕ್ಕೆ ಎರಡು – ಮೂರು ಗಂಟೆ ಮೀಸಲಿಡ್ಬೇಕು. ಆದ್ರೆ ಈ ಮಹಿಳೆ ತನ್ನ ಕೂದಲ ಆರೈಕೆಗೆ 29 ಸಾವಿರ ತಿಂಗಳಿಗೆ ಖರ್ಚು ಮಾಡ್ತಿದ್ದಾಳೆ. ಯಾಕೆ ಗೊತ್ತಾ?

ಫಾಸ್ಟ್ ಲೈಫ್ ಸ್ಟೈಲ್ ನಲ್ಲಿ ಜನರಿಗೆ ಸಮಯ ಬಹಳ ಮುಖ್ಯ. ಸಮಯ ಉಳಿಸಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಮನೆ ಕೆಲ್ಸ, ಅಡುಗೆ ಕೆಲ್ಸಕ್ಕೆ ಜನರನ್ನು ಇಟ್ಕೊಂಡು ತಮ್ಮ ಕೆಲ್ಸಕ್ಕೆ ಹೆಚ್ಚಿನ ಸಮಯ ನೀಡ್ತಿರುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಅತಿ ಶ್ರೀಮಂತರ ಜೀವನದಲ್ಲಿ, ಸಮಯ, ಹಣಕ್ಕಿಂತ ಹೆಚ್ಚು ಮೌಲ್ಯಯುತ ಎಂಬುದನ್ನು ಈ ಮಹಿಳೆ ಸಾಭೀತುಪಡಿಸಿದ್ದಾಳೆ.

ಹೇರ್ ಕೇರ್ ಗೆ 29 ಸಾವಿರ

ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಲಾಸ್ ಏಂಜಲೀಸ್ ಮೂಲದ 30 ವರ್ಷದ ವಕೀಲೆ ಮತ್ತು ಬ್ಯುಸಿನೆಸ್ ಕಾರ್ಯನಿರ್ವಾಹಕಿ ಮ್ಯಾಡಿ ಜಾನ್ಸನ್ ತಮ್ಮ ಹೇರ್ ಕೇರ್ ಗೆ ಪ್ರತಿ ತಿಂಗಳು 29 ಸಾವಿರ ರೂಪಾಯಿ ಖರ್ಚು ಮಾಡ್ತಿದ್ದಾರೆ. ಅವರು ಈ ಮೂಲಕ ಕೂದಲಲ್ಲ, ಸಮಯವನ್ನು ಖರೀದಿ ಮಾಡ್ತಿದ್ದಾರೆ. ಕಳೆದ ಆಗಸ್ಟ್ನಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಸಲೂನ್ ಬ್ಲೋಔಟ್ ಅನ್ನು ತಮಗೆ ಉಡುಗೊರೆಯಾಗಿ ನೀಡಿದ್ದರು. ಆ ಟೈಮ್ ನಲ್ಲಿ ಮ್ಯಾಡಿಗೆ ಸಿಕ್ಕಾಪಟ್ಟೆ ಕೆಲ್ಸ ಇತ್ತು. ಆಫೀಸ್ ಕೆಲ್ಸ, ಫಿಟ್ನೆಸ್, ಮದುವೆ ತಯಾರಿ, ಮನೆ ಕೆಲ್ಸ ಹಾಗೂ ಕುಟುಂಬದ ಜೊತೆ ಟೈಮ್ ಕಳೆಯೋದ್ರಲ್ಲಿ ಬ್ಯುಸಿಯಾಗಿದ್ದ ಅವರಿಗೆ ಟೈಮ್ ಸಿಗ್ತಿರಲಿಲ್ಲ.

ಆರಂಭದಲ್ಲಿ, ಅವರು ತಮ್ಮ ಹೇರ್ ಕೇರ್ ಗೆ ಒಬ್ಬರನ್ನು ನೇಮಿಸಿಕೊಳ್ಳುವ ಪ್ರಯೋಗ ಮಾಡಿದ್ರು. ನಂತ್ರ ಅದೇ ದಿನಚರಿ ಆಯ್ತು. ಅವರು ಸುಮಾರು ಪ್ರತಿ ಐದು ದಿನಗಳಿಗೊಮ್ಮೆ ಸಲೂನ್ಗೆ ಭೇಟಿ ನೀಡುತ್ತಾರೆ. ಪ್ರತಿ ತಿಂಗಳು ತಮ್ಮ ಕೂದಲಿಗೆ 29 ಸಾವಿರಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ. ಮ್ಯಾಡಿ ಪ್ರಕಾರ, ಬ್ಲೋಔಟ್ ಸುಮಾರು 45 ನಿಮಿಷದಿಂದ ಒಂದು ಗಂಟೆಯವರೆಗೆ ಕೂದಲ ಆರೈಕೆ ಮಾಡುತ್ತದೆ. ಮನೆಯಲ್ಲಿಅದೇ ರೀತಿ ಮಾಡಿದರೆ, ಕೂದಲು ಕ್ಲೀನಿಂಗ್, ಡ್ರೈ, ಸ್ಟೈಲ್ ಗೆ ಎರಡು ಗಂಟೆ ಬೇಕು.

ಸಲೂನ್ ಗೆ ನೀಡುವ ಈ ಹಣವನ್ನು ಸಮಯದ ಉಳಿತಾಯವೆಂದು ನೋಡುತ್ತಾಳೆ. ನಾನು ಮೂಲತಃ ನನ್ನ ಸಮಯವನ್ನು ಮರಳಿ ಖರೀದಿಸುತ್ತಿದ್ದೇನೆ ಎಂದು ಮ್ಯಾಡಿ ಹೇಳಿದ್ದಾಳೆ. ಕೂದಲ ಸೌಂದರ್ಯ ಇಲ್ಲಿ ಬಹಳ ಮುಖ್ಯ. ವೃತ್ತಿಪರರು ನನ್ನ ಕೂದಲಿಗೆ ಸ್ಟೈಲ್ ನೀಡೋದು ಆಫೀಸ್ ನಲ್ಲಿ ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಮ್ಯಾಡಿ ನಂಬುತ್ತಾರೆ.

ಮ್ಯಾಡಿ ತನ್ನ ಬ್ಲೋಔಟ್ ಸುತ್ತ ತನ್ನ ವರ್ಕ್ ಔಟ್ ನಿಗದಿಪಡಿಸುತ್ತಾಳೆ. ತೀವ್ರವಾದ ಕಾರ್ಡಿಯೋ, ಹಾಟ್ ಯೋಗ ಅಥವಾ ಹೆವಿ ಲೆಗ್ ವರ್ಕೌಟ್ಗಳನ್ನು ಮಾಡಬೇಕಾದರೆ, ಸಲೂನ್ ಅಪಾಯಿಂಟ್ಮೆಂಟ್ ಸುತ್ತ ಪ್ಲಾನ್ ಮಾಡ್ತಾರೆ. ಬೆವರುವ ವ್ಯಾಯಾಮದ ನಂತರ ಕೂದಲಿಗೆ ಹಾನಿಯಾಗದಂತೆ ತಡೆಯುವುದು ಮತ್ತು ಬ್ಲೋಔಟ್ ಹೆಚ್ಚು ಕಾಲ ಇರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

$99 ರಿಂದ ಪ್ರಾರಂಭವಾದದ್ದು $300 ಕ್ಕಿಂತ ಏರಿಕೆ

ಮ್ಯಾಡಿ ಪ್ರಾರಂಭಿಸಿದಾಗ ಸಲೂನ್ ಸದಸ್ಯತ್ವವು ತಿಂಗಳಿಗೆ $99 ವೆಚ್ಚವಾಯಿತು. ಅದರಲ್ಲಿ ಎರಡು ಬ್ಲೋಔಟ್ಗಳು ಸೇರಿವೆ. ಆದರೆ ಆವರ್ತನ ಹೆಚ್ಚಾದಂತೆ, ಮಾಸಿಕ ವೆಚ್ಚಗಳು ಹೆಚ್ಚಾದವು. ನಂತರ, ತೆರಿಗೆಗಳು ಮತ್ತು ಸಲಹೆಗಳ ಮೊದಲು ಬಿಲ್ ಸುಮಾರು $315 ತಲುಪಿತು. ನಂತರ 12 ಬ್ಲೋಔಟ್ಗಳ ಪ್ಯಾಕೇಜ್ $565 ಗೆ ಖರೀದಿಸಿದ್ದರು.

ಬ್ಲೋಔಟ್ ಸಮಯದಲ್ಲಿ ಸಮಯ ವ್ಯರ್ಥವಾಗುವುದಿಲ್ಲ ಎಂದು ಮ್ಯಾಡಿ ಹೇಳುತ್ತಾರೆ. ಅವರು ಈ ಟೈಮ್ ನಲ್ಲಿ ಇಮೇಲ್ಗಳಿಗೆ ಉತ್ತರಿಸಲು, ವೀಡಿಯೊಗಳನ್ನು ಸಂಪಾದಿಸಲು ಮತ್ತು ತನ್ನ ವೇಳಾಪಟ್ಟಿಯನ್ನು ಪ್ಲಾನ್ ಮಾಡಲು ಬಳಸ್ತಾರೆ. ತಮ್ಮ ಕೂದಲು ಒದ್ದೆಯಾಗದಂತೆ ತಡೆಯಲು ಮ್ಯಾಡಿ ಸ್ನಾನ ಮಾಡುವಾಗ ಶವರ್ ಕ್ಯಾಪ್ ಧರಿಸುತ್ತಾರೆ. ಅಗತ್ಯವಿದ್ದಾಗ ಒಣ ಶಾಂಪೂ ಬಳಸುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಲೆಗೆ ಮೆಹಂದಿ ಹಚ್ಚಿದ ಮೇಲೆ ಈ ಕೆಲ್ಸ ಮಾಡಿಲ್ಲ ಅಂದ್ರೆ ಕೂದಲುದುರೋದು ಗ್ಯಾರಂಟಿ
Gold Bracelet: 10 ಗ್ರಾಂ ಒಳಗೆ ಸಿಗುವ ಟ್ರೆಂಡಿ ಚಿನ್ನದ ಬ್ರೇಸ್ಲೆಟ್‌ಗಳಿವು!