ನವವಿವಾಹಿತ ವಧು ಹಿನಾ ಖಾನ್ ಅವರ ಮೊದಲ ಲುಕ್ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೌದು, ಹಿನಾ ಖಾನ್ ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್ ಸಮ್ಮಿಟ್ 2025 (Bollywood Hungama Style Icons Summit and Awards 2025) ರಲ್ಲಿ ನೇರಳೆ ಬಣ್ಣದ ಬನಾರಸಿ ರೇಷ್ಮೆ ಸೀರೆಯನ್ನು ಧರಿಸಿ ಎಲ್ಲರ ಹೃದಯ ಗೆದ್ದರು. ಅದು ಅವರಿಗೆ ಮತ್ತಷ್ಟು ಕಳೆತಂದಿತು. ಈ ಸಂದರ್ಭದಲ್ಲಿ ಹಿನಾ 'ರಾ ಮ್ಯಾಂಗೊ' ಒರಿ ಕುಂಜಮ್ ಬನಾರಸಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದು ಅವರ ಸೌಂದರ್ಯ ಮತ್ತು ಗ್ಲಾಮರಸ್ ಸ್ಟೈಲ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಈ ಸೀರೆಯ ಬೆಲೆ ಎಷ್ಟಿರಬಹುದು ಎಂಬ ಕುತೂಹಲವಿದೆಯಾ?, ಬೆಲೆ ಕೇಳಿದ್ರೆ ಇದು ಸೀರೆಯ ಅತ್ಯುತ್ತಮ ಗುಣಮಟ್ಟ, ಉತ್ತಮ ಕಸೂತಿ ಮತ್ತು ವಿಶೇಷ ಡಿಸೈನ್ ಹೇಗಿದೆ ಎಂಬುದನ್ನು ತೋರಿಸುತ್ತದೆ. ಹಾಗಾದರೆ ಬನ್ನಿ ಈ ಬಟ್ಟೆಯ ವಿಶೇಷತೆ ಹಾಗೂ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ...
ಕ್ಲಾಸಿಕ್ ಸೀರೆ ಕೂಡ ತುಂಬಾ ಸ್ಟೈಲಿಶ್
ಈ ಬನಾರಸಿ ರೇಷ್ಮೆ ಸೀರೆಯ ಜರಿ ಮತ್ತು ಮೀನಕರಿಯ ಕಾಂಬಿನೇಶನ್ ಸಾಂಪ್ರದಾಯಿಕವಾಗಿದ್ದು, ಆಧುನಿಕ ಟಚ್ ನೀಡುತ್ತದೆ. ಇದನ್ನು ಇಂದಿನ ಫ್ಯಾಷನ್ ಜಗತ್ತಿನಲ್ಲಿ ವಿಶೇಷವಾಗಿ ಪ್ರಶಂಸಿಸಲಾಗುತ್ತದೆ. ನೇರಳೆ ಬಣ್ಣದ ಸೀರೆ ಹಿನಾಳ ಸ್ಕಿನ್ ಟೋನ್‌ಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಮತ್ತು ಇದು ಅವರ ಹೊಳಪನ್ನು ಮತ್ತಷ್ಟು ಹೆಚ್ಚಿಸಿದೆ. ಮದುವೆಯ ನಂತರ ಮೊದಲ ಬಾರಿಗೆ ಇಂತಹ ರಾಯಲ್ ಲುಕ್‌ನಲ್ಲಿ ಹಿನಾ ಕಾಣಿಸಿಕೊಂಡಿದ್ದು, ಕ್ಲಾಸಿಕ್ ಸೀರೆ ಕೂಡ ತುಂಬಾ ಸ್ಟೈಲಿಶ್ ಮತ್ತು ಟ್ರೆಂಡಿಯಾಗಿ ಕಾಣಿಸಬಹುದು ಎಂದು ತನ್ನ ಸ್ಟೈಲಿಂಗ್ ಮೂಲಕ ಸಾಬೀತುಪಡಿಸಿದರು.
ಸೀರೆಯ ಬೆಲೆ ಎಷ್ಟು?
ಈ ಸೀರೆಯ ವಿಶೇಷತೆಯು ಅದರ ವಿಶಿಷ್ಟ ನೇಯ್ಗೆ ಮತ್ತು ಸೂಕ್ಷ್ಮ ಕಸೂತಿಯಲ್ಲಿದೆ. ಬನಾರಸಿ ರೇಷ್ಮೆ ತನ್ನ ಪ್ರಾಚೀನ ಮತ್ತು ಶ್ರೀಮಂತ ಇತಿಹಾಸದಿಂದಾಗಿ ಭಾರತೀಯ ಸಾಂಪ್ರದಾಯಿಕ ಜವಳಿಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ರೇಷ್ಮೆ ಹಗುರ ಮತ್ತು ಬಾಳಿಕೆ ಬರುವಂತಹದ್ದಾಗಿದ್ದು, ಧರಿಸಲು ಆರಾಮದಾಯಕವಾಗಿರುವುದಲ್ಲದೆ, ಅದರ ಡಿಸೈನ್ ತುಂಬಾ ಸುಂದರವಾಗಿರುತ್ತದೆ. ಸೀರೆಯಲ್ಲಿ, ವಿಶೇಷವಾಗಿ ಬಾರ್ಡರ್ ಮತ್ತು ಪಲ್ಲುವಿನ ಮೇಲೆ ಜರಿ ಕಸೂತಿಯನ್ನು ಮಾಡಲಾಗಿದೆ, ಇದು ಇದಕ್ಕೆ ರಾಜಮನೆತನದ ಮತ್ತು ಭವ್ಯವಾದ ಲುಕ್ ನೀಡುತ್ತದೆ. 'ರಾ ಮ್ಯಾಂಗೊ' ನಂತಹ ಬ್ರ್ಯಾಂಡ್‌ಗಳು ಈ ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಫ್ಯಾಷನ್‌ನೊಂದಿಗೆ ಸಂಯೋಜಿಸುವ ಮೂಲಕ ಯುವ ಜನತೆಯಲ್ಲಿ ಜನಪ್ರಿಯಗೊಳಿಸುತ್ತಿವೆ. ಇಂತಹ ವಿಶಿಷ್ಟವಾದ ಅದ್ಭುತವಾದ ಸೀರೆಯ ಬೆಲೆ ಸುಮಾರು 89,500 ರೂ.
ಹೀಗಿತ್ತು ನೋಡಿ ಮೇಕಪ್
ಮದುವೆಯ ನಂತರ ಹಿನಾ ಖಾನ್ ಅವರ ಈ ಲುಕ್ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ, ಅವರು ಸೀರೆಯೊಂದಿಗೆ ಸಿಂಪಲ್ ಮತ್ತು ಸೊಗಸಾದ ಮೇಕಪ್ ಹಾಕಿದ್ದರು. ಇದರಿಂದ ಅವರ ನ್ಯಾಚುರಲ್ ಲುಕ್ ಹೈಲೆಟ್ ಆಯ್ತು. ಲೈಟ್ ಫೌಂಡೇಶನ್, ನ್ಯೂಡ್ ಲಿಪ್‌ಸ್ಟಿಕ್ ಮತ್ತು ಸಾಫ್ಟ್ ಐ ಮೇಕಪ್‌ನಿಂದ ಅವರ ಮುಖ ಫ್ರೆಶ್ ಆಗಿ ಕಾಣುತ್ತಿತ್ತು. ಇನ್ನು ಅವರ ಹೇರ್‌ಸ್ಟೈಲ್ ಫುಲ್ ಲುಕ್ ಅನ್ನು ಕಂಪ್ಲೀಟ್ ಮಾಡಿತು.
ಅಲ್ಲದೆ, ತಿಳಿ ಚಿನ್ನದ ಆಭರಣಗಳು ಅವರ ಸೀರೆಯ ರಾಯಲ್ ಸ್ಟೈಲ್ ಅನ್ನು ಮತ್ತಷ್ಟು ಹೆಚ್ಚಿಸಿದವು. ಹಿನಾ ಸರಳವಾದ ಆದರೆ ಫಾರ್ಮ್-ಫಿಟ್ಟಿಂಗ್ ಬ್ಲೌಸ್ ಅನ್ನು ಆರಿಸಿಕೊಂಡರು. ಹೆವಿ ಆಭರಣಗಳನ್ನು ತಪ್ಪಿಸಿ ಸಣ್ಣ ಕಿವಿಯೋಲೆಗಳು ಮತ್ತು ತೆಳುವಾದ ಚೈನ್ ಆರಿಸಿಕೊಂಡರು, ಅದು ಅವರನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತಿತ್ತು.
ಅಂದಹಾಗೆ ಹಿನಾ ಖಾನ್ ತನ್ನ ಬಹುಕಾಲದ ಪ್ರೇಮಿ ಮತ್ತು ಗೆಳೆಯ ರಾಕಿ ಜೈಸ್ವಾಲ್ ಅವರನ್ನು ಇದೇ ತಿಂಗಳು ಜೂನ್ 4 ರಂದು ಬುಧವಾರ ವಿವಾಹವಾದರು. ಅವರು ತಮ್ಮ ಪತಿಯೊಂದಿಗೆ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಿನಾ ಮತ್ತು ರಾಕಿ 2014 ರಿಂದ ಒಟ್ಟಿಗೆ ಇದ್ದಾರೆ ಮತ್ತು ಪ್ರತಿ ಕಷ್ಟದ ಸಮಯದಲ್ಲೂ ತನ್ನೊಂದಿಗೆ ಇದ್ದಕ್ಕಾಗಿ ಹಿನಾ ಆಗಾಗ್ಗೆ ರಾಕಿಗೆ ಮನ್ನಣೆ ನೀಡಿದ್ದಾರೆ. 2024 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಯಾವಾಗಲೂ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಅವರು ತಮ್ಮ ಗೆಳೆಯ ರಾಕಿ ಜೈಸ್ವಾಲ್‌ಗೆ ಧನ್ಯವಾದ ಅರ್ಪಿಸಿದರು. ಅವರ ಸುಮಾರು 11 ವರ್ಷಗಳ ರಿಲೇಶನ್ಶಿಪ್‌ನಲ್ಲಿದ್ದರು. ಈ ಮದುವೆ ಅವರಿಗೆ ಮಾತ್ರವಲ್ಲದೆ, ಅವರ ಅಭಿಮಾನಿಗಳಿಗೂ ಒಂದು ದೊಡ್ಡ ಸಂತೋಷದ ಸುದ್ದಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.