ಮಿಸ್ ಯೂನಿವರ್ಸ್ ಫೈನಲಿಸ್ಟ್, ಸ್ಪರ್ಧೆ ಬೆನ್ನಲ್ಲೇ ಕೆಲಸಕ್ಕೆ ಹಾಜರಾದ ಬೆಂಗಳೂರು ಗೂಗಲ್ ಎಂಜಿನೀಯರ್

Published : Sep 15, 2026, 06:29 PM IST
Miss Universe Finalist Umanga Kumawat

ಸಾರಾಂಶ

ಮಿಸ್ ಯೂನಿವರ್ಸ್ ಇಂಡಿಯಾ ಫ್ಯಾಶನ್ ಸ್ಪರ್ಧೆಯಲ್ಲಿ ಉಮಂಗ ಕುಮಾವತ್ ಫೈನಲಿಸ್ಟ್ ಆಗಿದ್ದರು. ಆದರೆ ಸ್ಪರ್ಧೆ ನಡೆದ ಬೆನ್ನಲ್ಲೇ ಉಮಂಗ ಕುಮಾವತ್ ಬೆಂಗಳೂರಿನ ಗೂಗಲ್ ಕಚೇರಿಗೆ ಕೆಲಸಕ್ಕೆ ಮರಳಿದ್ದಾರೆ.

ಬೆಂಗಳೂರು (ಸೆ.15) ಫ್ಯಾಶನ್ ವೀಕ್, ಮಿಸ್ ಯೂನಿವರ್ಸ್ ಸ್ಪರ್ಧೆಗಳಲ್ಲಿ ಫೈನಲಿಸ್ಟ್, ವಿನ್ನರ್, ಸೇರಿದಂತೆ ಪ್ರಮುಖ ಘಟ್ಟ ತಲುಪಿದ ಸ್ಪರ್ಧಿಗಳು ಹೊಸ ಅಧ್ಯಾಯ ಆರಂಭಿಸುವ ನಿರೀಕ್ಷೆಯಲ್ಲಿರುತ್ತಾರೆ. ಮಾಡೆಲಿಂಗ್, ಫ್ಯಾಶನ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದುವರಿಯುತ್ತಾರೆ. ಆದರೆ ಉಮಂಗ ಕುಮಾವಾತ್ ಭಿನ್ನವಾಗಿದ್ದಾರೆ. ಇತ್ತೀಚೆಗೆ ನಡೆದ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಮಿಂಚಿದ್ದರು. ಆದರೆ ಈ ಸ್ಪರ್ಧೆ ನಡೆದ ಎರಡೇ ದಿನದ ಬೆನ್ನಲ್ಲೇ ಉಮಂಗ ಕುಮಾವತ್ ಕೆಲಸಕ್ಕೆ ಹಾಜರಾಗಿದ್ದಾರೆ. ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ಕ್ಲೌಡ್ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿರುವ ಉಮಂಗಾ ಇದೀಗ ಯಾವುದೇ ಬ್ರೇಕ್ ಪಡೆಯದೇ, ಹಮ್ಮು ಬಿಮ್ಮು ಇಲ್ಲದೆ ಕೆಲಸಕ್ಕೆ ಮರಳಿದ್ದಾರೆ.

ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆ

ಜೈಪುರದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆ ನಡೆದಿತ್ತು. ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಫಿನಾಲಗೆ 52 ಸ್ಪರ್ಧಿಗಳು ಆಯ್ಕೆಯಾಗಿದ್ದರು. ಈ ಪೈಕಿ ಉಮಂಗಾ ಕುಮಾವತ್ ಟಾಪ್ 20ಯಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯವಾಗಿ ಫಿನಾಲೆವರೆಗೆ ಬಂದ ಸ್ಪರ್ಧಿಗಳು ಬಳಿಕ ಮಾಡೆಲಿಂಗ್, ಫ್ಯಾಶನ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಾರೆ. ಹೀಗೆ ಹೊಸ ಇನ್ನಿಂಗ್ಸ್ ಆರಂಭಿಸಿ ಹಲವು ಯಶಸ್ಸು ಕಂಡಿದ್ದಾರೆ. ಬಾಲಿವುಡ್ ಸೇರಿದಂತೆ ಸಿನಿಮಾ ರಂಗದಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಉಮಂಗ ಕುಮಾವಾತ್ ಭಿನ್ನವಾಗಿದ್ದಾರೆ.

ಬೆಂಗಳೂರಿನ ಗೂಗಲ್ ಕ್ಲೌಡ್ ಎಂಜಿನೀಯರ್

ಉಮುಂಗ ಕುಮಾವಾತ್ ಬೆಂಗಳೂರಿನ ಗೂಗಲ್ ಕ್ಲೌಡ್ ಎಂಜಿನೀಯರ್. ಮಿಸ್ ಯೂನಿವರ್ಸ್ ಸ್ಪರ್ಧೆಗೂ ಮೊದಲು ಕ್ಲೌಡ್ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದರು. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಕೆಲವೇ ಕೆಲವು ದಿನಗಳ ರಜೆ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಳಿಕ ಉತ್ತಮ ನಿರ್ವಹಣೆ ಮೂಲಕ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. ಆದರೆ ಫೈನಲ್ ಮುಗಿದ ಬೆನ್ನಲ್ಲೇ ಉಮಂಗ ಕುಮಾವತ್ ನೇರವಾಗಿ ಕೆಲಸಕ್ಕೆ ಹಾಜರಾಗಿದ್ದಾರೆ.

ಬೆಳಗ್ಗೆ 9.30ಕ್ಕೆ ಗೂಗಲ್ ಕಚೇರಿಗೆ ಹಾಜರಾಗಿ ಕೆಲಸ ಆರಂಭಿಸುತ್ತಾರೆ. ಕಾರ್ಪೋರೇಟ್ ಲೈಫ್, ಮೀಟಿಂಗ್, ಪ್ರಾಜೆಕ್ಟ್ ಸೇರಿದಂತೆ ಹಲವು ಕೆಲಸಗಳನ್ನು ಉಮಂಗ ಕುಮಾವಾತ್ ನಿರ್ವಹಿಸುತ್ತಾರೆ. 2 ಗಂಟೆಗೆ ಸರಿಯಾಗಿ ಗೂಗಲ್ ಕೆಫೆಟೇರಿಯಾದಲ್ಲಿ ಊಟ, ಬಳಿಕ ಮತ್ತೆ ಕೆಲಸ. 5 ಗಂಟೆಗೆ ಟೀ ಬ್ರೇಕ್, 5.30ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳುತ್ತಾರೆ. ಇದು ಪ್ರತಿನಿತ್ಯ ಉಮಂಗ ಕುಮಾವತ್ ಆಫೀಸ್ ದಿನಚರಿ. ಆದರೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಎಲ್ಲವೂ ಭಿನ್ನ. ಅದು ಫ್ಯಾಶನ್ ಜಗತ್ತು. ಈ ಸ್ಪರ್ಧೆಯಲ್ಲೂ ತೀರ್ಪುಗಾರರ ಗಮನಸೆಳೆಯುವಲ್ಲಿ, ಮಚ್ಚುಗೆಗೆ ಪಾತ್ರವಾಗುವಲ್ಲಿ ಉಮಂಗ ಕುಮಾವತ್ ಪಾತ್ರರಾಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Lightweight Gold: ತೂಕದಲ್ಲಿ ಹಗುರ, ನೋಡೋಕೆ ಟ್ರೆಂಡಿಯಾಗಿದೆ ಈ ಕರಿಮಣಿ ಸರ
ಕೇವಲ 5 ಗ್ರಾಂ ಚಿನ್ನದಲ್ಲಿ ಕರಿಮಣಿ ಸರ! ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್ಸ್