ಏರ್‌ ಇಂಡಿಯಾದಿಂದ ಮರೆಯಾಗಲಿದೆ ಸೀರೆ ಟ್ರೆಂಡ್‌, ಗಗನಸಖಿಯರಿಗೆ ಡಿಸೈನರ್‌ ಡ್ರೆಸ್‌!

By Santosh Naik  |  First Published Sep 27, 2023, 1:31 PM IST

ಕಳೆದ 60 ವರ್ಷಗಳಿಂದ ಏರ್‌ ಇಂಡಿಯಾದ ಗಗನಸಖಿಯರು ಸಾಂಪ್ರದಾಯಿಕವಾಗಿ ಸೀರೆ ಧರಿಸಿ ವಿಮಾನದ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು. ಈಗ ಏರ್‌ ಇಂಡಿಯಾ ಮತ್ತೆ ಟಾಟಾ ತೆಕ್ಕೆಗೆ ಬಂದ ಬಳಿಕ ಸೀರೆ ಟ್ರೆಂಡ್‌ ಬದಲಾಗುವ ಸಾಧ್ಯತೆ ದಟ್ಟವಾಗಿದೆ.
 


ನವದೆಹಲಿ (ಸೆ.27): ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಹಾಗೂ ಆಧುನಿಕತೆಗೆ ತೆರೆದುಕೊಂಡಿದ್ದರೂ, ಏರ್‌ ಇಂಡಿಯಾ ಮಾತ್ರ ತನ್ನ ಗಗನಸಖಿಯರಿಗೆ ಮಾಡರ್ನ್‌ ಡ್ರೆಸ್‌ಗಳ ಬದಲು ಸಾಂಪ್ರದಾಯಿಕ ಸೀರೆಯ ಸಮವಸ್ತ್ರವನ್ನೇ ಮುಂದುವರಿಸಿತ್ತು.  ಆದರೆ, ಈಗ ಏರ್‌ ಇಂಡಿಯಾ ಮರಳಿ ಟಾಟಾ ಸನ್ಸ್‌ ತೆಕ್ಕೆಗೆ ಸೇರ್ಪಡೆಗೊಂಡಿದೆ. ಇದರ ಬೆನ್ನಲ್ಲಿಯೇ ಗಗನಸಖಿಯರ ಸೀರೆ ಟ್ರೆಂಡ್‌ ಬದಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಹೊಸ ಯುಗಕ್ಕೆ ಅನುಗುಣವಾಗಿ ಹೊಸ ರೀತಿಯ ಸಮವಸ್ತ್ರಗಳನ್ನು ಏರ್‌ ಇಂಡಿಯಾ ತನ್ನ ಗಗನಸಖಿಯರಿಗೆ ಪರಿಚಯಿಸಲಿದೆ ಎಂದು ವರದಿಯಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಏರ್ ಇಂಡಿಯಾ ತಮ್ಮ ಮಹಿಳಾ ಸಿಬ್ಬಂದಿಯ ಸಮವಸ್ತ್ರವನನ್ನು ಬದಲಾಯಿಸುವ ನಿಟ್ಟಿನಲ್ಲಿಗಮನ ನೀಡುತ್ತಿದೆ.  ಸಾಂಪ್ರದಾಯಿಕವಾಗಿ, ಏರ್‌ಲೈನ್‌ನ ಫ್ಲೈಟ್ ಅಟೆಂಡೆಂಟ್‌ಗಳು ಆರು ದಶಕಗಳಿಂದ ಸೀರೆ ಧರಿಸಿಕೊಂಡೇ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಮುಂದಿನ ನವೆಂಬರ್‌ ವೇಳೆಗೆ ದೀರ್ಘಕಾಲದ ಈ ಟ್ರೆಂಡ್‌ ಬದಲಾಗಬಹುದು ಎಂದು ನಿರೀಕ್ಷೆ ಮಾಡಲಾಗಿದ್ದು, ಆಧುನಿಕ ರೀತಿಯ ಸಮವಸ್ತ್ರಗಳು ಇವುಗಳ ಬದಲು ಬರಲಿದೆ ಎನ್ನಲಾಗಿದೆ.

ಮಹಿಳಾ ಸಿಬ್ಬಂದಿಗಳಿಗೆ ಡಿಸೈನರ್‌ ಚೂಡಿದಾರ್‌ಗಳು ಹಾಗೂ ಪುರುಷ ಸಿಬ್ಬಂದಿಗೆ ಡಿಸೈನರ್‌ ಸೂಟ್‌ಗಳನ್ನು ಕಂಪನಿ ವಿನ್ಯಾಸ ಮಾಡುತ್ತಿದೆ. ವರದಿಗಳ ಪ್ರಕಾರ ಪ್ರಖ್ಯಾತ ಫ್ಯಾಶನ್‌ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಈ ಹೊಸ ಸಮವಸ್ತ್ರಗಳನ್ನು ವಿನ್ಯಾಸ ಮಾಡಲಿದ್ದಾರೆ. ಆದರೆ, ಯಾವುದೇ ವಿಚಾರವನ್ನು ಬಹಿರಂಗಪಡಿಸದೇ ಇರುವ ಒಪ್ಪಂದ ಏರ್‌ ಇಂಡಿಯಾ ಹಾಗೂ ಮನೀಶ್‌ ಮಲ್ಹೋತ್ರಾ ನಡುವೆ ಆಗಿರುವ ಕಾರಣ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಹಲವು ಆಯ್ಕೆಗಳ ಪೈಕಿ ಮಹಿಳಾ ಸಿಬ್ಬಂದಿಗೆ ಚೂಡಿದಾರ್‌ಗಳು ಪ್ರಮುಖ ಆಯ್ಕೆ ಆಗಿರುತ್ತದೆ. ಪುರುಷ ಸಿಬ್ಬಂದಿಗೆ ಸೂಟ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಈ ವಿಚಾರವನ್ನು ಬಲ್ಲ ಮೂಲಗಳು ತಿಳಿಸಿವೆ. ಇನ್ನು ಮುಂದೆ ಏರ್‌ ಇಂಡಿಯಾದ ಯಾವುದೇ ಮಹಿಳಾ ಸಿಬ್ಬಂದಿಗೆ ಸಮವಸ್ತ್ರವಾಗಿ ಸೀರೆ ಇರೋದಿಲ್ಲ. ಇದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ. ವಿವಿಧ ಆಯ್ಕೆಗಳನ್ನು ಏರ್‌ಲೈನ್‌ಗೆ ನೀಡಲಾಯಿತು, ಇದರಲ್ಲಿ ಸೀರೆಗಳಂತೆ ಕಾಣುವ ಆದರೆ ಸಾಂಪ್ರದಾಯಿಕವಾದವುಗಳಂತೆ ಧರಿಸದಿರುವ ಸಿದ್ಧ-ಉಡುಪು ಸೀರೆಗಳನ್ನು ಒಳಗೊಂಡಿತ್ತು. ಆದಾಗ್ಯೂ, ಆಡಳಿತವು ಅವುಗಳನ್ನು ಅಂತಿಮಗೊಳಿಸಿಲ್ಲ' ಎಂದು ತಿಳಿಸಿದ್ದಾರೆ. ಏರ್ ಇಂಡಿಯಾದ ಸಿಗ್ನೇಚರ್ ಶೈಲಿಯನ್ನು ಪ್ರತಿಬಿಂಬಿಸುವ ಹೊಸ ಸಮವಸ್ತ್ರಗಳು ಗಾಢ ಕೆಂಪು ಮತ್ತು ಚಿನ್ನದ ಬಣ್ಣಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.ಇನ್ನು ಏರ್‌ ಇಂಡಿಯಾ ಜೊತೆ ವಿಲೀನ ಪ್ರಕ್ರಿಯೆ ಪೂರ್ಣಗೊಂದ ಬಳಿಕ, ವಿಸ್ತಾರ ಏರ್‌ಲೈನ್ಸ್‌ ಕೂಡ ಈ ಸಮವಸ್ತ್ರವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

Latest Videos

undefined

ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್, ಹೊಸ ಏರ್‌ಬಸ್ ಎ350 ವಿಮಾನವು ಬಂದ ನಂತರ ಏರ್‌ಲೈನ್‌ನ ಹೊಸ ನೋಟವನ್ನು ಅನಾವರಣಗೊಳಿಸಲಾಗುವುದು, ಇದು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ. ಆದರೆ, ಏರ್‌ ಇಂಡಿಯಾದ ಯಾವುದೇ ಸಿಬ್ಬಂದಿ ಈ ಬದಲಾವಣೆಯನ್ನು ದೃಢೀಕರಣ ಮಾಡಿಲ್ಲ.

ಏರ್‌ ಇಂಡಿಯಾದಲ್ಲಿ ಮತ್ತೆ ಎಡವಟ್ಟು, ಇಡ್ಲಿ-ಸಾಂಬಾರ್ ಜೊತೆ ಸಿಕ್ಕಿದ್ದೇನು ನೋಡಿ!

ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿಗೆ ಸೀರೆಯನ್ನು ಪರಿಚಯಿಸಿದ್ದ ಜೆಆರ್‌ಡಿ ಟಾಟಾ. 1962ರಲ್ಲಿ ಅವರು, ಸ್ಕರ್ಟ್‌, ಜಾಕೆಟ್‌ ಹಾಗೂ ಹ್ಯಾಟ್‌ನ ಬದಲು ಸಾಂಪ್ರದಾಯಿಕ ಸೀರೆಯನ್ನು ಗಗನಸಖಿಯರಿಗೆ ಪರಿಚಯಿಸಿದ್ದರು. ಅಂದಿನಿಂದ ಏರ್‌ ಇಂಡಿಯಾ ಇದೇ ಟ್ರೆಂಡ್‌ ಅನ್ನು ಮುಂದುವರಿಸಿಕೊಂಡು ಹೋಗಿದ್ದರು.

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌ ಬ್ಲಾಸ್ಟ್‌, ವಿಮಾನ ತುರ್ತು ಭೂಸ್ಪರ್ಶ

ಏರ್‌ ಇಂಡಿಯಾ ಈ ಸೀರೆಗಳನ್ನು ಆರಂಭದಲ್ಲಿ ಬಿನ್ನಿ ಮಿಲ್ಸ್‌ನಿಂದ ಖರೀದಿ ಮಾಡುತ್ತಿತ್ತು. ಇಂದಿಗೂ, ಏರ್ ಇಂಡಿಯಾದ ಫ್ಲೈಟ್ ಅಟೆಂಡೆಂಟ್‌ಗಳು ಸಾಂಪ್ರದಾಯಿಕ ಸೀರೆ ಅಥವಾ ಅದೇ ಬಣ್ಣದ ಪ್ಯಾಂಟ್‌ಗಳೊಂದಿಗೆ ಟ್ಯೂನಿಕ್ ಅನ್ನು ಧರಿಸುವ ಆಯ್ಕೆಯನ್ನು ಹೊಂದಿದ್ದಾರೆ.

click me!