ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಪ್ರೇಮಕಥೆ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಈ ಬಾರಿ ಎಲ್ಲರ ಕಣ್ಣು ನೆಟ್ಟಿರುವುದು ರಶ್ಮಿಕಾ ಅವರ ಬೆರಳಿನಲ್ಲಿ ಕಂಗೊಳಿಸುತ್ತಿರುವ ಮೂರು ವಿಶೇಷ ಉಂಗುರಗಳ ಮೇಲೆ! ಖ್ಯಾತ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 9ರಲ್ಲಿ ಭಾಗವಹಿಸಿದ್ದ ಈ ಜೋಡಿ ತಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದು, ಈ ವೇಳೆ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರ ಕೈಯಲ್ಲಿದ್ದ ಉಂಗುರಗಳನ್ನು ಪರಿಚಯಿಸಿದ್ದಾರೆ. ಇದರಲ್ಲಿ 100 ವರ್ಷ ಹಳೆಯ ವಿಂಟೇಜ್ ವಜ್ರ, ದಕ್ಷಿಣ ಭಾರತದ ಸಂಸ್ಕೃತಿಯ ವಿನ್ಯಾಸ ಹಾಗೂ ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಐಷಾರಾಮಿ ‘ಟಿಫಾನಿ’ (Tiffany) ಬ್ರ್ಯಾಂಡ್ ರಿಂಗ್ ಸೇರಿದೆ.
ರಶ್ಮಿಕಾ ಅವರ ಬೆರಳಿನ ಮೇಲ್ಭಾಗದಲ್ಲಿರುವ ಮೊದಲ ಉಂಗುರ ಅತ್ಯಂತ ಪುರಾತನವಾದದ್ದು. ಆಭರಣ ಸಂಸ್ಥೆ 'ಟ್ರಂಪೆಟ್ ಆಂಡ್ ಹಾರ್ನ್' ಪ್ರಕಾರ, ಇದು 1900ರ ದಶಕದ ಆರಂಭದಲ್ಲಿ ವಿನ್ಯಾಸಗೊಳಿಸಲಾದ ವಿಂಟೇಜ್ ಉಂಗುರವಾಗಿದೆ. ಇದರ ಮಧ್ಯದಲ್ಲಿ ಹಳೆಯ ಪದ್ಧತಿಯಂತೆ ಕೆತ್ತಲಾದ ವಿಶಿಷ್ಟ ವಜ್ರವಿದ್ದು, ಇದು ಉಂಗುರಕ್ಕೆ ಅಪರೂಪದ ಐತಿಹಾಸಿಕ ಮೆರುಗು ನೀಡಿದೆ.
ಇದರ ಕೆಳಗೆ ರಶ್ಮಿಕಾ ಧರಿಸಿರುವ ಚಿನ್ನದ ಉಂಗುರ ದಕ್ಷಿಣ ಭಾರತೀಯ ಸಂಸ್ಕೃತಿಯನ್ನು ಸಾರುತ್ತದೆ. ಈ ಸರಳವಾದ ಉಂಗುರವು ಹಾವಿನ ಹೆಡೆಯ (ಸರ್ಪ) ಆಕಾರದಲ್ಲಿದ್ದು, ನಮ್ಮ ಸಂಪ್ರದಾಯದಲ್ಲಿ ಇದು ಅದೃಷ್ಟ, ಸೌಭಾಗ್ಯ ಮತ್ತು ರಕ್ಷಣೆಯ ಸಂಕೇತವೆಂದು ನಂಬಲಾಗುತ್ತದೆ.
ಮೂರನೆಯ ಉಂಗುರ ಜಾಗತಿಕ ಖ್ಯಾತಿಯ ಐಷಾರಾಮಿ ಆಭರಣ ಬ್ರ್ಯಾಂಡ್ 'ಟಿಫಾನಿ'ಯ (Tiffany & Co.) ‘ಸಿಕ್ಸ್ಟೀನ್ ಸ್ಟೋನ್’ ಕಲೆಕ್ಷನ್ಗೆ ಸೇರಿದ್ದಾಗಿದೆ. 1959ರಲ್ಲಿ ಖ್ಯಾತ ವಿನ್ಯಾಸಕ ಜೀನ್ ಶ್ಲಂಬರ್ಗರ್ ರೂಪಿಸಿದ ಈ ವಿಶೇಷ ಡಿಸೈನ್ನಲ್ಲಿ ದುಂಡಗಿನ ವಜ್ರಗಳು ಹಾಗೂ ಚಿನ್ನದ 'X' ಆಕಾರದ ಚಿಹ್ನೆಗಳಿವೆ. ಇದು ಇಬ್ಬರ ನಡುವಿನ ಪ್ರೀತಿ ಮತ್ತು ಶಾಶ್ವತ ಬಾಂಧವ್ಯವನ್ನು ಸಂಕೇತಿಸುತ್ತದೆ. ಪ್ಲಾಟಿನಂ, ಹಳದಿ ಚಿನ್ನ ಹಾಗೂ ಉತ್ಕೃಷ್ಟ ವಜ್ರಗಳಿಂದ ಸಿದ್ಧಗೊಂಡಿರುವ ಈ ಉಂಗುರದ ಒಟ್ಟು ಮೌಲ್ಯ ಬರೋಬ್ಬರಿ 30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ ಪುರಾತನ ಇತಿಹಾಸ, ಭಾರತೀಯ ಸಂಪ್ರದಾಯ ಮತ್ತು ಜಾಗತಿಕ ಐಷಾರಾಮಿ ಶೈಲಿಯನ್ನು ಒಟ್ಟಿಗೆ ಮೈಗೂಡಿಸಿಕೊಂಡಿರುವ ರಶ್ಮಿಕಾ-ವಿಜಯ್ ಜೋಡಿಯ ಈ ಉಂಗುರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಹೌದು. ಕೇವಲ ರಶ್ಮಿಕಾ ಮಾತ್ರವಲ್ಲದೆ, ನಟ ವಿಜಯ್ ದೇವರಕೊಂಡ ಅವರ ಕೈಯಲ್ಲೂ ಇದೇ 'ಟಿಫಾನಿ' ಬ್ರ್ಯಾಂಡ್ನ ಮ್ಯಾಚಿಂಗ್ ಉಂಗುರ ಕಂಡುಬಂದಿದೆ. ಇಬ್ಬರೂ ಒಂದೇ ರೀತಿಯ ವಿನ್ಯಾಸದ ಆಭರಣ ಧರಿಸಿರುವುದು ಈ ಜೋಡಿಯ ಅನ್ಯೋನ್ಯತೆ ಹಾಗೂ 'ಕಪಲ್ ಗೋಲ್ಸ್'ಗೆ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕೇವಲ ಪಾಶ್ಚಿಮಾತ್ಯ ಐಷಾರಾಮಿ ಬ್ರ್ಯಾಂಡ್ಗಳ ಮೊರೆ ಹೋಗುತ್ತಾರೆ. ಆದರೆ ರಶ್ಮಿಕಾ ಅವರು ಜಾಗತಿಕ ಬ್ರ್ಯಾಂಡ್ ‘ಟಿಫಾನಿ’ ಜೊತೆಗೆ ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯನ್ನು ಸಾರುವ 'ಸರ್ಪ ಮಾದರಿಯ' ಚಿನ್ನದ ಉಂಗುರವನ್ನು ಧರಿಸಿರುವುದು ಅವರ ಸಂಪ್ರದಾಯ ಪ್ರೇಮವನ್ನು ಎತ್ತಿಹಿಡಿದಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಾಗತಿಕ ಫ್ಯಾಷನ್ ಜಗತ್ತಿನಲ್ಲಿ ಸಖತ್ ಟ್ರೆಂಡಿಂಗ್ನಲ್ಲಿರುವ 'ರಿಂಗ್ ಸ್ಟ್ಯಾಕಿಂಗ್' (Ring Stacking) ಶೈಲಿಯನ್ನು ರಶ್ಮಿಕಾ ಅನುಸರಿಸಿದ್ದಾರೆ. ನಿಶ್ಚಿತಾರ್ಥದ ರಿಂಗ್, ಸಂಪ್ರದಾಯದ ರಿಂಗ್ ಹಾಗೂ ಮದುವೆಯ ಬ್ಯಾಂಡ್—ಹೀಗೆ ಮೂರನ್ನೂ ಒಂದೇ ಬೆರಳಿನಲ್ಲಿ ಒಟ್ಟಿಗೆ ಧರಿಸಿ ಹೊಸ ಫ್ಯಾಷನ್ ಸ್ಟೇಟ್ಮೆಂಟ್ ಸೃಷ್ಟಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.