Fact Check: ಕಚ್ಚಾ ಬಾದಾಮ್‌ ಗಾಯಕ ಭುವನ್ ಬಡ್ಯಾಕರ್‌ಗೆ ರೈಲ್ವೆಯಲ್ಲಿ ಮ್ಯಾನೇಜರ್‌ ಕೆಲಸ?

By Suvarna NewsFirst Published May 20, 2022, 7:17 PM IST
Highlights

ಕಡಲೆಕಾಯಿ ಮಾರುತ್ತಿದ್ದ ಆತನಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮ್ಯಾನೇಜರ್‌ ಹುದ್ದೆ (Indian Railways) ನೀಡಲಾಗಿದೆ ಎನ್ನುವ ಸುದ್ದಿ ಓಡಾಡುತ್ತಿದೆ

Fact Check: ಪಶ್ಚಿಮ ಬಂಗಾಳದ ಗಾಯಕ ಬುಬನ್‌ ಬದ್ಯಾಕರ್‌ನ ‘ಕಚ್ಚಾ ಬಾದಾಮ್‌’ (Bhuban Badyakar) ಹಾಡು ರಾತ್ರೋರಾತ್ರಿ ವಿಶ್ವವಿಖ್ಯಾತಿ ಗಳಿಸಿತ್ತು. ಕಡಲೆಕಾಯಿ ಮಾರುತ್ತಿದ್ದ ಆತನಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮ್ಯಾನೇಜರ್‌ ಹುದ್ದೆ (Indian Railways) ನೀಡಲಾಗಿದೆ ಎನ್ನುವ ಸುದ್ದಿ ಓಡಾಡುತ್ತಿದೆ. ಅದರ ಜೊತೆ ಇರುವ ವಿಡಿಯೋದಲ್ಲಿ ಬುಬನ್‌ ವಾಕಿಟಾಕಿ ಹಿಡಿದು ರೈಲಿನ ಬೋಗಿಯೊಂದರಲ್ಲಿ ನಿಂತಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಬಿಳಿ ಸಮವಸ್ತ್ರ ಧರಿಸಿದ್ದಾರೆ.

ಆದರೆ ವಿಡಿಯೋ ಅಸಲಿಯತ್ತನ್ನು ಪರೀಕ್ಷಿಸಿದಾಗ ಸಿಕ್ಕ ಮಾಹಿತಿಯೇ ಬೇರೆಯಾಗಿದೆ. ವಿಡಿಯೋದಲ್ಲಿ ಇರುವುದು ಬುಬನ್‌ ಅಲ್ಲ, ಅವರನ್ನು ಹೋಲುವ ರೈಲ್ವೆ ಇಲಾಖೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ವ್ಯಕ್ತಿ. ಬುಬನ್‌ ಅವರನ್ನು ರೈಲ್ವೆ ಇಲಾಖೆಯು ಕೆಲಸಕ್ಕೆ ನೇಮಿಸಿಕೊಂಡಿಲ್ಲ. ಅಲ್ಲದೆ ಈ ವಿಡಿಯೋವನ್ನು ‘ಡೈಲಿ ಟ್ರಾವೆಲ್‌ ಹ್ಯಾಕ್‌’ (Daily Travel Hack) ಎನ್ನುವ ವ್ಲಾಗ್‌ ನಡೆಸುವ ಬಿಹಾರ ಮೂಲದ ಧನಂಜಯ್‌ ಕುಮಾರ್‌ ಅವರು ಚಿತ್ರೀಕರಿಸಿದ್ದಾರೆ. 

 

 

ಅವರೇ ಸ್ಪಷ್ಟೀಕರಣ ನೀಡಿರುವಂತೆ ‘ವಿಡಿಯೋದಲ್ಲಿ ಇರುವುದು ಬುಬನ್‌ ಅಲ್ಲ. ಅವರನ್ನು ಹೋಲುವ ವ್ಯಕ್ತಿ. ಈ ವಿಡಿಯೋವನ್ನು ಅಗರ್ತಲ-ಆನಂದ್‌ ವಿಹಾರ್‌ ತೇಜಸ್‌ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಚಿತ್ರೀಕರಿಸಲಾಗಿದೆ’ ಎಂದಿದ್ದಾರೆ. ಈ ಮೂಲಕ ಬುಬನ್‌ ರೈಲ್ವೆ ಇಲಾಖೆಯ ನೌಕರರಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರಾಗಿ ರಘುರಾಮ್ ರಾಜನ್ ನೇಮಕ?

ಇದನ್ನೂ ಓದಿ: ವಾರಾಣಸಿಯ ನಂದಿ ವಿಗ್ರಹ ಎನ್ನಲಾದ ವೈರಲ್‌ ಫೋಟೋ ಮಹಾರಾಷ್ಟ್ರದ್ದು

click me!