ಶುಕ್ರವಾರದಿಂದ 3 ದಿನಗಳ ಕಾಲ ರಾಜಸ್ಥಾನದ ಉದಯಪುರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿನ ನವಸಂಕಲ್ಪ ಚಿಂತನ ಶಿಬಿರ ಭಾನುವಾರ ಸಂಜೆ ಅಂತ್ಯಗೊಂಡಿದೆ
Fact Check: ಸರಣಿ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ಇವುಗಳಿಂದ ಹೊರ ಬರುವುದಕ್ಕಾಗಿ ಸ್ಪಷ್ಟ ಮಾರ್ಗದರ್ಶಿಗಳನ್ನು ರೂಪಿಸಲು ಶುಕ್ರವಾರದಿಂದ 3 ದಿನಗಳ ಕಾಲ ರಾಜಸ್ಥಾನದ (Rajasthan) ಉದಯಪುರದಲ್ಲಿ ಹಮ್ಮಿಕೊಂಡಿದ್ದ ನವಸಂಕಲ್ಪ ಚಿಂತನ ಶಿಬಿರ (Congress Chintan Shivir) ಭಾನುವಾರ (ಮೇ 15) ಸಂಜೆ ಅಂತ್ಯಗೊಂಡಿತು. ಈ ವೇಳೆ ಪಕ್ಷಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದ ಸಭೆ ಕೈಗೊಂಡಿದೆ.ಇನ್ನು ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳದಲ್ಲಿ ಬಣ್ಣಗಳ ಆಯ್ಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಪಕ್ಷವನ್ನು ಟೀಕಿಸಿದ್ದಾರೆ.
ಸಭೆಯನ್ನು ಆಯೋಜಿಸಿದ್ದ ಟೆಂಟ್‌ನ ಮೇಲ್ಛಾವಣಿಯು ಹಸಿರು ಮತ್ತು ಬಿಳಿ - ಪಾಕಿಸ್ತಾನದ ರಾಷ್ಟ್ರೀಯ ಧ್ವಜವನ್ನು ಹೋಲುತ್ತದೆ ಆದರೆ ನೆಲದ ಮೇಲಿನ ಕಾರ್ಪೆಟ್ ಮಾತ್ರ ಕೇಸರಿ ಬಣ್ಣದಾಗ್ಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ವೈರಲ್ ಮೇಸೆಜ್ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದುಬಂದಿದೆ. ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದಲ್ಲಿದ್ದ ಟೆಂಟ್‌ನ ಮೇಲ್ಛಾವಣಿಯು ಭಾರತದ ರಾಷ್ಟ್ರಧ್ವಜದ ಎಲ್ಲಾ ಮೂರು ಬಣ್ಣಗಳನ್ನು ಒಳಗೊಂಡಿತ್ತು ಎಂದು ತಿಳಿದುಬಂದಿದೆ.
Claim: "ಮೇಲೆ ಪಾಕಿಸ್ತಾನದ ಧ್ವಜದ ಎರಡೂ ಬಣ್ಣಗಳು ಮತ್ತು ನೆಲದ ಮೇಲೆ ಕೇಸರಿ! ಇದು ರಾಜಸ್ಥಾನದ ಉದಯಪುರದಲ್ಲಿರುವ ಕಾಂಗ್ರೆಸ್ ಪಕ್ಷದ ಚಿಂತನ್ ಶಿಬಿರದ ಚಿತ್ರವಾಗಿದೆ," ಎಂದು ನೆಟ್ಟಿಗ್ಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ರೀತಿ ಸಾಕಷ್ಟು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಇಂಥಹ ಪೋಸ್ಟ್‌ಗಳನ್ನು ನೀವು ಮತ್ತು ನೋಡಬಹುದು
Fact Check: ಕಾಂಗ್ರೆಸ್ಸಿನ ನವಸಂಕಲ್ಪ ಚಿಂತನ ಶಿಬಿರವನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕರು ಕೂಡ ಭಾಗವಹಿಸಿದ್ದರು. ಈ ಬಗ್ಗೆ ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಾರ್ಯಕ್ರಮದ ಸ್ಥಳದಿಂದ ಸಾಕಷ್ಟು ಪೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮೇ 15 ರಂದು ಟ್ವೀಟ್ ಮಾಡಲಾದ ಚಿತ್ರದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಭೆಯಲ್ಲಿ ಭಾಗವಹಿಸಿದವರು ಸ್ವಾಗತಿಸಿರುವುದನ್ನು ಕಾಣಬಹುದಾಗಿದೆ ಮತ್ತು ಅವರು ನಿಂತಿರುವ ಕಾರ್ಪೆಟ್ ಕೆಂಪು ಬಣ್ಣದ ಶೇಡ್ ಹೊಂದಿರುವುದನ್ನು ಕಾಣಬಹುದಾಗಿದೆ.
नव संकल्प, नव विकल्प।
देश की राजनीति में नई शुरुआत हो चुकी है-
संघर्षपथ से विजयपथ का सफर तय करेंगे, देशवासियों से जुड़े हर मुद्दे पर सड़क से संसद तक लड़ाई लड़ेंगे। pic.twitter.com/sHJQfZsYcP
ಅಂತೆಯೇ, ಇತರ ಟ್ವೀಟ್‌ಗಳನ್ನು ಪರೀಶಿಲಿಸಿದಾಗ, ಅದರಲ್ಲಿ ಕೇಸರಿ ಬಣ್ಣದ ಬಟ್ಟೆಯನ್ನು ಸ್ಥಳದ ಚಾವಣಿಯ ಮೇಲೆ ಬಿಳಿ ಮತ್ತು ಹಸಿರು ಬಣ್ಣಗಳ ಜೊತೆಗೆ ಕಾಣಬಹುದು.
United, reformed, rejuvenated, and stronger; the Congress has a Nav Sankalp.
Visuals from Shri 's valedictory address at the concluding session of the . pic.twitter.com/abOzU7BQYE
ಇನ್ನು ಪಕ್ಷದ ಅಧಿಕೃತ ಖಾತೆಯಿಂದ ಹಂಚಿಕೊಂಡ ಈ ಚಿತ್ರದಲ್ಲಿ ಟೆಂಟಿನ ಮೇಲ್ಛಾವಣಿಯಲ್ಲಿ ಕೇಸರಿ, ಹಸಿರು ಹಾಗೂ ಬಿಳಿ ಬಣ್ಣಗಳಿರುವುದನ್ನು ಗಮನಿಸಬಹುದಾಗಿದೆ.
ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಂದೇಶವು ಜನರನ್ನು ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಕೇಸರಿ ಬಣ್ಣದ ಕಾರ್ಪೆಟ್ ಹಾಗೂ ಮೇಲ್ಛಾವಣಿಯಲ್ಲಿ ಪಾಕಿಸ್ತಾನದ ಧ್ವಜದ ಬಣ್ಣಗಳನ್ನು ಬಳಸಲಾಗಿಲ್ಲ ಎಂದು ಫ್ಯಾಕ್ಟ್ ಚೆಕ್‌ನಲ್ಲಿ ದೃಡಪಟ್ಟಿದೆ.