Fact Check: ವಾರಾಣಸಿಯ ನಂದಿ ವಿಗ್ರಹ ಎನ್ನಲಾದ ವೈರಲ್‌ ಫೋಟೋ ಮಹಾರಾಷ್ಟ್ರದ್ದು

By Suvarna News  |  First Published May 20, 2022, 5:00 PM IST

Fact Check: ಚಿತ್ರದಲ್ಲಿವೊಂದರಲ್ಲಿ ಗ್ಯಾನವಾಪಿ ಮಸೀದಿ ಚಿತ್ರ  ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿರುವ ನಂದಿ ವಿಗ್ರಹ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


Fact Check:ಕಾಶಿ ವಿಶ್ವನಾಥ ಮಂದಿರದ (Kashi Vishwanath) ಕೆಲ ಭಾಗ ಬೀಳಿಸಿ ಮುಘಲ್‌ ದೊರೆ ಔರಂಗಜೇಬ್‌ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯ (Gyanvapi Masjid) ಸಮೀಕ್ಷಾ ವರದಿಯನ್ನು ಕೋರ್ಟ್ ಕಮಿಷನರ್‌ಗಳು ಗುರುವಾರ ವಾರಾಣಸಿ ಸಿವಿಲ್‌ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸಲ್ಲಿಸಲಾಗಿದೆ ಎನ್ನಲಾದ ವರದಿಯನ್ನು ಕೆಲವು ವಕೀಲರು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಮಸೀದಿಯು ಈ ಹಿಂದೆ ಹಿಂದೂ ದೇಗುಲವಾಗಿತ್ತು ಎಂಬುದನ್ನು ದೃಢೀಕರಿಸುವ ಸಂಗತಿಗಳಿವೆ ಎಂಬ ಅಂಶಗಳು ವರದಿಯಲ್ಲಿವೆ.

ಈ ನಡುವೆ ಗ್ಯಾನವಾಪಿ  ಮಸೀದಿಯ ಎನ್ನಲಾದ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತಿವೆ. ಹೀಗೆ ಚಿತ್ರದಲ್ಲಿವೊಂದರಲ್ಲಿ ಗ್ಯಾನವಾಪಿ ಮಸೀದಿ ಚಿತ್ರ  ಹಾಗೂ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿರುವ ನಂದಿ ವಿಗ್ರಹ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Tap to resize

Latest Videos

ಆದರೆ ಈ ಹೇಳಿಕೆಯು ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿರುವ ಶಿವನ 'ವಾಹನ' ನಂದಿ ವಿಗ್ರಹದ ವೈರಲ್ ಚಿತ್ರವು ಮಹಾರಾಷ್ಟ್ರದ ಸತಾರಾದ ವೈನಲ್ಲಿರುವ ಕಾಶಿ ವಿಶ್ವೇಶ್ವರ ದೇವಸ್ಥಾನದ ಚಿತ್ರ ಎಂದು ತಿಳಿದುಬಂದಿದೆ.

Claim: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಫೋಟೋ ಜತೆಗೆ,  "ಸಂಭ್ರಮಿಸಿ!! ಜೈ ಭೋಲೆನಾಥ್!!ಜೈ ಹಿಂದೂ ರಾಷ್ಟ್ರ!! ಎಂದು ಬರೆಯಲಾಗಿದೆ.  ಫೋಟೊ ಕೊಲಾಜ್‌ನಲ್ಲಿನ ಪಠ್ಯದಲ್ಲಿ "ಕಾಶಿ ವಿಶ್ವನಾಥ ದೇವಾಲಯದಲ್ಲಿ ನಂದಿಯ ದೀರ್ಘ ಕಾಯುವಿಕೆ ಮುಗಿದಿದೆ" ಎಂದು ಬರೆಯಲಾಗಿದೆ. ಇದೇ ಮಾದರಿಯಲ್ಲಿ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗಿವೆ

Fact Check: ವೈರಲ್ ಆಗಿರುವ ಚಿತ್ರವನ್ನು ಕ್ರಾಪ್ ಮಾಡುವ ಮೂಲಕ ಮತ್ತು ಕೊಲಾಜ್ನಿಂದ ನಂದಿ ವಿಗ್ರಹದ ಚಿತ್ರವನ್ನು ಬೇರ್ಪಡಿಸಿ ನಂದಿ ವಿಗ್ರಹದ ಚಿತ್ರದ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಅಲಾಮಿ ಸ್ಟಾಕ್ ಇಮೇಜಸ್ (Alamy stock images) ವೆಬ್‌ಸೈಟ್‌ನಲ್ಲಿ ನಂದಿಯ ನಿಖರವಾದ ಅದೇ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ.  ಆ ಚಿತ್ರದ ಶೀರ್ಷಿಕೆಯಲ್ಲಿ "ಮಹಾರಾಷ್ಟ್ರದ ಸತಾರದ ವೈ, ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿರುವ ನಂದಿ ಪ್ರತಿಮೆ" ಎಂದು ಬರೆಯಲಾಗಿದೆ. 

ಅಲ್ಲದೇ GO TRAVEL TREK ವೆಬ್ಸೈಟ್‌ನಲ್ಲೂ ಮಹಾರಾಷ್ಟ್ರದ ಈ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿರುವ ಪ್ರತಿಮೆ ಬಗ್ಗೆ ಉಲ್ಲೇಖ ಕಾಣಬಹುದು. ಇಲ್ಲಿಯೂ ಇದೇ ನಂದಿ ವಿಗ್ರಹದ ಚಿತ್ರ ಗಮನಿಸಬಹುದಾಗಿದೆ. "ಸಮೀಪದ ವಿಶ್ವೇಶ್ವರ ದೇವಾಲಯವು ತನ್ನ ಭವ್ಯತೆ ಮತ್ತು ಸುಂದರವಾದ ಕಲ್ಲಿನ ಕೆಲಸಕ್ಕೆ ಹೆಸರುವಾಸಿಯಾಗಿದೆ. ದೊಡ್ಡ ಅಂಗಳದಲ್ಲಿ ಹರಡಿರುವ ಮುಖ್ಯ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ, ಹೊರಗಿನ ದ್ವಾರವು ನಂದಿಯ ಬೃಹತ್ ಕಲ್ಲಿನ ವಿಗ್ರಹದಿಂದ ರಕ್ಷಿಸಲ್ಪಟ್ಟಿದೆ" ಎಂದು ಹೇಳಲಾಗಿದೆ.

ಇನ್ನು ಈ ವೈರಲ್‌ ಚಿತ್ರದ ಬಗ್ಗೆ ಸುವರ್ಣ ನ್ಯೂಸ್.ಕಾಮ್, ಪ್ರಸಿದ್ಧ ಫ್ಯಾಕ್ಟ್ ಜಾಲತಾಣ ವಿಶ್ವಾಸ್ ನ್ಯೂಸ್ ಮೂಲಕ ಕೇದಾರ್ ಗೋಖಲೆ ಅವರನ್ನು ಸಂಪರ್ಕಿಸಿದ್ದು,  ಇವರ ಕುಟುಂಬ ಸದಸ್ಯರು ಕಾಶಿ ವಿಶ್ವೇಶ್ವರ ದೇವಸ್ಥಾನ, ವೈ, ಸತಾರ್‌ನಲ್ಲಿ ಟ್ರಸ್ಟಿಗಳಾಗಿ ಸ್ಥಾನವನ್ನು ಹೊಂದಿದ್ದಾರೆ. ಈ ವೈರಲ್‌ ಚಿತ್ರದ ಬಗ್ಗೆ ಅವರನ್ನು ಕೇಳಿದಾಗ ಇದು ವಾಯ್‌ನಲ್ಲಿರುವ ದೇವಾಲಯದ ಆವರಣದಲ್ಲಿರುವ ನಂದಿ ವಿಗ್ರಹ ಎಂದು ಖಚಿತಪಡಿಸಿದ್ದಾರೆ.

ಆದ್ದರಿಂದ ನಂದಿ ವಿಗ್ರಹವು ಜ್ಞಾನವಾಪಿ ಮಸೀದಿಯ ಮುಂಭಾಗದಲ್ಲಿರುವ ವಾರಣಾಸಿಯದ್ದಲ್ಲ, ಆದರೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯದ್ದು ಎಂಬುದು ಫ್ಯಾಕ್ಟ್‌ ಚೆಕ್‌ನಲ್ಲಿ ಖಚಿತವಾಗಿದೆ. 

ಹೀಗಾಗಿ ವಾರಣಾಸಿಯ ಜ್ಞಾನವಾಪಿ ಮಸೀದಿಯ ಮುಂಭಾಗದಲ್ಲಿರುವ ನಂದಿ ವಿಗ್ರಹ ಎಂದು ಹೇಳಲಾಗಿರುವ ವೈರಲ್ ಚಿತ್ರವು ಸತಾರಾದ ವಾಯ್‌ನ ಕಾಶಿ ವಿಶ್ವೇಶ್ವರ ಮಂದಿರದ್ದಾಗ್ಗಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ವೈರಲಾಗಿರುವ ಪೋಸ್ಟ್‌ಗಳು ತಪ್ಪುದಾರಿಗೆಳೆಯುವಂತಿವೆ.

ಇದನ್ನೂ ಓದಿ: ಕಾಂಗ್ರೆಸ್ ಚಿಂತನ ಶಿಬಿರದ ಮೇಲ್ಛಾವಣಿಗೆ ಪಾಕಿಸ್ತಾನ ಧ್ವಜದ ಬಣ್ಣ, ಕಾರ್ಪೆಟ್‌ ಮಾತ್ರ ಕೇಸರಿ?

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರಾಗಿ ರಘುರಾಮ್ ರಾಜನ್ ನೇಮಕವಾಗಿಲ್ಲ: ವೈರಲ್‌ ಮೆಸೇಜ್‌ ಸುಳ್ಳು!

click me!