Fact Check| ಶಾಹೀನ್‌ ಬಾಗ್‌ ಪ್ರತಿ​ಭ​ಟನಾ ಸ್ಥಳ​ದಲ್ಲಿ ಅನೈ​ತಿಕ ಚಟು​ವ​ಟಿ​ಕೆ!

By Suvarna News  |  First Published Mar 16, 2020, 10:08 AM IST

ದೆಹಲಿಯ ಶಾಹೀನ್‌ ಬಾಗ್‌​ನಲ್ಲಿ ಪೌರತ್ವ ತಿದ್ದು​ಪಡಿ ಕಾಯ್ದೆ ಪ್ರತಿ​ಭ​ಟನೆ ನೆಪ​ದಲ್ಲಿ ಅನೈ​ತಿಕ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿದಾ​ಡು​ತ್ತಿದೆ. ಇದು ನಿಜಾನಾ? ಇಲ್ಲಿದೆ ಫ್ಯಾಕ್ಟ್ ಚೆಕ್


ನವದೆಹಲಿ[ಮಾ.16]: ದೆಹಲಿಯ ಶಾಹೀನ್‌ ಬಾಗ್‌​ನಲ್ಲಿ ಪೌರತ್ವ ತಿದ್ದು​ಪಡಿ ಕಾಯ್ದೆ ಪ್ರತಿ​ಭ​ಟನೆ ನೆಪ​ದಲ್ಲಿ ಅನೈ​ತಿಕ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿವೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿದಾ​ಡು​ತ್ತಿದೆ.

ಪೋರ್ನ್‌ ವಿಡಿಯೋ ಮತ್ತು ಆ ವಿಡಿ​ಯೋದ ಸ್ಕ್ರೀನ್‌​ಶಾಟ್‌ ಫೋಟೋ​ವನ್ನು ಪೋಸ್ಟ್‌ ಮಾಡಿ, ‘ಮಾ​ಧ್ಯ​ಮ​ಗಳು ಈ ರೀತಿಯ ಪ್ರತಿ​ಭ​ಟ​ನೆ​ಯನ್ನು ನಿಮಗೆ ತೋರಿ​ಸಲ್ಲ. ಇದು ಶಾಹೀನ್‌ ಬಾಗ್‌​ನಲ್ಲಿ ನಡೆದ ಇತ್ತೀ​ಚಿನ ಪ್ರತಿ​ಭ​ಟನೆ ’ ಎಂದು ಹಿಂದಿ​ಯಲ್ಲಿ ವಿಡಂಬ​ನಾ​ತ್ಮ​ಕ​ವಾಗಿ ಬರೆದು ಪೋಸ್ಟ್‌ ಮಾಡ​ಲಾ​ಗಿತ್ತು. ಅನಂತರ ಈ ಪೋಸ್ಟ್‌ ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ವೈರಲ್‌ ಆಗಿ​ದೆ.

Tap to resize

Latest Videos

undefined

Fact Check| ಶಾಹೀನ್‌ ಬಾಗ್‌ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!

ಆದರೆ ನಿಜಕ್ಕೂ ಇದು ಶಾಹೀನ್‌ ಬಾಗ್‌ನದ್ದೇ ಎಂದು ಸುದ್ದಿ​ಸಂಸ್ಥೆ​ಯೊಂದು ಪರಿ​ಶೀ​ಲಿ​ಸಿ​ದಾಗ ವೈರಲ್‌ ವಿಡಿ​ಯೋದ ಅಸಲಿ ಕತೆ ಬಯ​ಲಾ​ಗಿದೆ.

ಗೂಗಲ್‌ ರಿವ​ರ್ಸ್‌ ಇಮೇ​ಜ್‌​ನಲ್ಲಿ ಹುಡು​ಕ​ಹೊ​ರ​ಟಾಗ ವಿಡಿಯೋ ಎರಡು ವರ್ಷ ಹಳೆ​ಯದ್ದು, ಇದಕ್ಕೂ ಶಾಹೀನ್‌ ಬಾಗ್‌ ಪ್ರತಿ​ಭ​ಟ​ನೆಗೂ ಸಂಬಂಧ ಇಲ್ಲ ಎಂಬುದು ಖಚಿ​ತ​ವಾ​ಗಿದೆ. ಈ ವಿಡಿಯೋದ ಎರಡು ಫೋಟೋ​ಗ​ಳನ್ನು ಪೋರ್ನ್‌ ವೆಬ್‌​ಸೈ​ಟ್‌​ವೊಂದು ಮೇ 30, 2018ರಂದು ಟ್ವೀಟ್‌ ಮಾಡಿತ್ತು. ಅದ​ರಲ್ಲಿ ವಿಡಿ​ಯೋ​ದಲ್ಲಿ ಇರು​ವ​ವರು ಉಜ್ಬೇ​ಕಿ​ಸ್ತಾ​ನ​ದ​ವರು ಎಂದು ಹೇಳ​ಲಾ​ಗಿತ್ತು.

ಅಲ್ಲಿಗೆ ಈ ವಿಡಿ​ಯೋಗೂ ದೆಹ​ಲಿಯ ಶಾಹೀನ್‌ ಬಾಗ್‌​ನಲ್ಲಿ ಪೌರತ್ವ ತಿದ್ದು​ಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗ​ರಿಕ ನೋಂದಣಿ ವಿರುದ್ಧ ಪ್ರತಿ​ಭ​ಟಿ​ಸು​ತ್ತಿ​ರುವ ಪ್ರತಿ​ಭ​ಟ​ನೆಗೂ ಯಾವುದೇ ಸಂಬಂಧ ಇಲ್ಲ. ಶಾಹೀನ್‌ ಬಾಗ್‌ ಪ್ರತಿ​ಭ​ಟ​ನೆಗೆ ಮಸಿ ಬಳಿ​ಯುವ ಉದ್ದೇ​ಶ​

click me!