ಮಾರ್ಚ್ 31 ರ ಒಳಗಾಗಿ ಬ್ಯಾಂಕುಗಳಿಗೆ ನಿಮ್ಮ ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಮಾಹಿತಿಯನ್ನು ನೀಡದಿದ್ದರೆ ಬ್ಯಾಂಕುಗಳು ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಮಾರ್ಚ್ 31 ರ ಒಳಗಾಗಿ ಬ್ಯಾಂಕುಗಳಿಗೆ ನಿಮ್ಮ ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಮಾಹಿತಿಯನ್ನು ನೀಡದಿದ್ದರೆ ಬ್ಯಾಂಕುಗಳು ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಿಂದಿಯಲ್ಲಿರುವ ಈ ಪ್ರಕಟಣೆಯಲ್ಲಿ, ‘ ಪ್ರಮುಖ ಪ್ರಕಟಣೆ: ಮಾರ್ಚ್ 31ರ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣ ವಾಪಸ್ ತೆಗೆದುಕೊಳ್ಳಿ. ಏಕೆಂದರೆ ಏಪ್ರಿಲ್ 1 ರ ಒಳಗಾಗಿ ಬ್ಯಾಂಕುಗಳಿಗೆ ನಿಮ್ಮ ಎನ್‌ಪಿಆರ್ ದಾಖಲೆ ನೀಡುವುದು ಕಡ್ಡಾಯ. ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ. ಈ ಮಾಹಿತಿಯನ್ನು ಸಾಧ್ಯವಾದಷ್ಟುಶೇರ್ ಮಾಡಿ’ ಎಂದು ಹೇಳಲಾಗಿದೆ. ನೆಟ್ಟಿಗರು ಸಾವಿರಾರು ಸಂಖ್ಯೆಯಲ್ಲಿ ಇದನ್ನು ಶೇರ್ ಮಾಡಿದ್ದಾರೆ.
undefined
#FactCheck: ಜ್ಯೋತಿರಾಜ್ ಏಂಜೆಲ್ ಫಾಲ್ಸ್ ಹತ್ತಿದ್ದು ಹೌದಾ?
ಆದರೆ ನಿಜಕ್ಕೂ ಬ್ಯಾಂಕುಗಳು ಎನ್‌ಪಿಆರ್ ದಾಖಲೆ ಕಡ್ಡಾಯ ಎಂದು ಕೇಳಿವೆಯೇ ಎಂದು ಬೂಮ್ ಲೈವ್ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಆರ್ಬಿಐ ವಕ್ತಾರರೊಬ್ಬರು ಈ ಬಗ್ಗೆ ಸ್ಪಷ್ಟೀಕರಣ ನೀಡಿ, ‘ವೈರಲ್ ಸಂದೇಶ ಸುಳ್ಳು. ಆರ್ಬಿಐ ಏಪ್ರಿಲ್ 1ರ ಒಳಗಾಗಿ ಎನ್‌ಪಿಆರ್ ದಾಖಲೆ ಕಡ್ಡಾಯವಾಗಿ ಒದಗಿಸಬೇಕು ಎಂದು ಎಲ್ಲೂ ಹೇಳಿಲ್ಲ. ಜನರು ಇಂಥ ವದಂತಿಗಳಿಗೆ ಕಿವಿಗೊಡಬಾರದು ’ ಎಂದಿದ್ದಾರೆ.
Fact Check: ದೆಹಲಿ ಸಿಎಂ ಕೇಜ್ರಿವಾಲ್ಗೆ ಆರ್ಎಸ್ಎಸ್ ಹಿನ್ನೆಲೆ!
ಹಾಗೆಯೇ ಈ ಬಗ್ಗೆ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳೂ ವರದಿ ಮಾಡಿಲ್ಲ. ಅಲ್ಲದೆ ಬೂಮ್ ಮೂರು ಬ್ಯಾಂಕುಗಳನ್ನು ಸಂಪರ್ಕಿಸಿ, ಎನ್‌ಪಿಆರ್ ದಾಖಲೆ ಕಡ್ಡಾಯವೇ ಎಂದು ಕೇಳಿದಾಗ ಯಾವುದೇ ಬ್ಯಾಂಕು ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿಲ್ಲ. ಆರ್ಬಿಐ ಮಾರ್ಗಸೂಚಿ ಪ್ರಕಾರ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ನಂತಯೇ ಎನ್‌ಪಿಆರ್ ಕೂಡ ಒಂದು ದಾಖಲೆ ಎಂದು ಹೇಳಿವೆ.
- ವೈರಲ್ ಚೆಕ್