ಇನ್ನುಮುಂದೆ ಕೊರೋನಾ ವೈರಸ್ನಿಂದ ಯಾರೂ ಮೃತಪಡುವುದಿಲ್ಲ. ಏಕೆಂದರೆ ಕೊನೆಗೂ ಇಸ್ರೇಲ್ ಮತ್ತು ಅಮೆರಿಕ ಸೇರಿ ಕೊರೋನಾ ವಿರುದ್ಧ ಲಸಿಕೆ ಕಂಡುಹಿಡಿದಿವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ವಾಷಿಂಗ್ಟನ್[ಮಾ.14]: ಜಗತ್ತಿನಾದ್ಯಂತ ಕೋವಿಡ್-19 ಅಥವಾ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಲಸಿಕೆ, ಔಷಧವೇ ಇಲ್ಲದ ಈ ವೈರಸ್ಗೆ ಜಗತ್ತಿನಾದ್ಯಂತ ಈಗಾಗಲೇ 4000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಈ ನಡುವೆ ಇನ್ನುಮುಂದೆ ಕೊರೋನಾ ವೈರಸ್ನಿಂದ ಯಾರೂ ಮೃತಪಡುವುದಿಲ್ಲ. ಏಕೆಂದರೆ ಕೊನೆಗೂ ಇಸ್ರೇಲ್ ಮತ್ತು ಅಮೆರಿಕ ಸೇರಿ ಕೊರೋನಾ ವಿರುದ್ಧ ಲಸಿಕೆ ಕಂಡುಹಿಡಿದಿವೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ಯಾನ್ ಡಿಯಾಗೋ ಎನ್ನುವ ಪ್ರಯೋಗಾಲಯದಲ್ಲಿ ಕೇವಲ 3 ಗಂಟೆಗಳಲ್ಲಿ ಈ ಲಸಿಕೆ ಕಂಡುಹಿಡಿಯಲಾಗಿದೆ ಎಂದೂ ಹೇಳಲಾಗಿದೆ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
undefined
ಆದರೆ ನಿಜಕ್ಕೂ ಕೊರೋನಾ ಮಾಹಾಮಾರಿಯ ನಿಯಂತ್ರಣಕ್ಕೆ ಲಸಿಕೆ ಸಿದ್ಧವಾಗಿದೆಯೇ ಎಂದು ಸುದ್ದಿಸಂಸ್ಥೆಯೊಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಏಕೆಂದರೆ ವೈರಲ್ ಆಗಿರುವ ಫೋಟೋ ಇಂಟರ್ನೆಟ್ನಲ್ಲಿ ಲಭ್ಯವಿರುವ ಫೋಟೋ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆದಿದೆ. ಒಂದೊಮ್ಮೆ ಈ ಕಾರ್ಯದಲ್ಲಿ ಯಶಸ್ಸು ಕಂಡರೂ ಅದು ಮನುಷ್ಯರ ಮೇಲೆ ಬಳಕೆಯಾಗಲು ಇನ್ನೂ ಕನಿಷ್ಠ 12-18 ತಿಂಗಳು ಬೇಕು ಎಂದಿದೆ.
ಅಲ್ಲದೆ ಇಸ್ರೇಲಿನ ಎಂಐಜಿಎಎಲ್ ಸಂಶೋಧನಾ ಕೇಂದ್ರ ಕೂಡ ವೈರಲ್ ಸಂದೇಶ ಸುಳ್ಳು ಎಂದು ಸ್ಪಷ್ಟನೆ ನೀಡಿದೆ. ಜೊತೆಗೆ ಕೊರೋನಾ ವಿರುದ್ಧ ಲಸಿಕೆ ಕಂಡುಹಿಡಿಯಲು ನಿರಂತರ ಶ್ರಮಿಸಲಾಗುತ್ತಿದೆ ಎಂದೂ ಹೇಳಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕಂಡಳಿ ಎಚ್ಐವಿ ವಿರುದ್ಧದ ಲಸಿಕೆಯನ್ನೇ ಕೊರೋನಾ ವಿರುದ್ಧ ಬಳಸಲು ಅನುಮತಿ ಪಡೆದಿದೆ. ಅದಿನ್ನೂ ಪರೀಕ್ಷೆಗೆ ಒಳಪಟ್ಟಿದೆ. ಅದು ಬಿಟ್ಟು ಕೊರೋನಾ ವಿರುದ್ಧ ಯಾವುದೇ ನಿರ್ದಿಷ್ಟಲಸಿಕೆಯನ್ನು ಇದುವರೆಗೂ ಅಭಿವೃದ್ಧಿಪಡಿಸಿಲ್ಲ.