Fact Check: ಹಿಂದೂ​ಗ​ಳಿಗೆ ಮಕ್ಕ​ಳಾ​ಗ​ದಂತೆ ಬಿರಿ​ಯಾ​ನಿ​ಯಲ್ಲಿ ಮಾತ್ರೆ?

By Kannadaprabha News  |  First Published Mar 4, 2020, 12:26 PM IST

ತಮಿ​ಳು​ನಾ​ಡಿನ ಕೊಯಿಮತ್ತೂರ್‌ನಲ್ಲಿ​ರುವ ಹೋಟೆ​ಲ್‌​ನಲ್ಲಿ ಹಿಂದು​ಗ​ಳಿಗೆ ಮಕ್ಕ​ಳಾಗದಂತೆ ಊಟ​ದ​ಲ್ಲಿ ಮಾತ್ರೆ ಹಾಕಿ ನೀಡ​ಲಾ​ಗು​ತ್ತಿದೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ. ನಿಜನಾ ಈ ಸುದ್ದಿ? 


ತಮಿ​ಳು​ನಾ​ಡಿನ ಕೊಯಿಮತ್ತೂರ್‌ನಲ್ಲಿ​ರುವ ಹೋಟೆ​ಲ್‌​ನಲ್ಲಿ ಹಿಂದು​ಗ​ಳಿಗೆ ಮಕ್ಕ​ಳಾಗದಂತೆ ಊಟ​ದ​ಲ್ಲಿ ಮಾತ್ರೆ ಹಾಕಿ ನೀಡ​ಲಾ​ಗು​ತ್ತಿದೆ ಎನ್ನುವ ಸಂದೇಶ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಹರಿ​ದಾ​ಡು​ತ್ತಿದೆ.

ವ್ಯಕ್ತಿ​ಯೊ​ಬ್ಬರು ಬಿರಿಯನಿ ಬಡಿ​ಸು​ತ್ತಿ​ರುವ ಫೋಟೋ, ಇನ್ನೊಂದೆಡೆ ಮಾತ್ರೆ​ಗಳ ರಾಶಿ ಇರುವ ಫೋಟೋ​ವನ್ನು ಪೋಸ್ಟ್‌ ಮಾಡಿ, ‘ಮುಸ್ಲಿ​ಮ​ರು ಮತ್ತು ಹಿಂದು​ಗ​ಳಿಗೆ ಇಲ್ಲಿ ಪ್ರತ್ಯೇ​ಕ​ವಾಗಿ ಬಿರಿ​ಯಾನಿ ತಯಾ​ರಿ​ಸ​ಲಾ​ಗು​ತ್ತದೆ. ಹಿಂದು​ಗ​ಳಿಗೆ ನೀಡುವ ಬಿರಿಯಾ​ನಿಗೆ ಶಕ್ತಿ​ಹೀ​ನ​ರ​ನ್ನಾ​ಗಿ​ಸುವ ಟ್ಯಾಬ್ಲೆ​ಟ್‌ ಬೆರೆ​ಸ​ಲಾ​ಗು​ತ್ತಿದೆ.

Tap to resize

Latest Videos

undefined

ಕೊಯಿ​ಮ​ತ್ತೂ​ರಿನ ಮಾಷಾ ಅಲ್ಲಾ ಆಫ್‌ ರೆಹ್ಮಾನ್‌ ಬಿಸ್ಮಿಲ್ಲಾ ಎಂಬು​ವ​ವರು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ​ಬಿ​ದ್ದಿ​ದ್ದಾ​ರೆ. ನಿಮ್ಮ ಊರಿ​ನಲ್ಲೂ ಹೀಗೆ ಮಾಡುವ ಸಾಧ್ಯತೆ ಇದೆ ಎಚ್ಚ​ರ​ದಿಂದಿರಿ’ ಎಂದು ಆರ್‌ಡಿ ಸಿಂಗ್‌ ಎನ್ನುವ ಟ್ವೀಟರ್‌ ಖಾತೆ​ಯಲ್ಲಿ ಮೊದ​ಲಿಗೆ ಇದ​ನ್ನು ಪೋಸ್ಟ್‌ ಮಾಡ​ಲಾ​ಗಿ​ತ್ತು. ಅದೀಗ ಫೇಸ್‌​ಬುಕ್‌, ವಾಟ್ಸ್‌​ಆ್ಯ​ಪ್‌​ನಲ್ಲೂ ವೈರಲ್‌ ಆಗಿದೆ.

Fact Check: 3 ಮಕ್ಕ​ಳ​ನ್ನು ಅವುಚಿ ಕೂತ ಮಹಿಳೆ ಚಿತ್ರ ದೆಹ​ಲಿ​ಯ​ದ್ದಾ?

ಆದರೆ ಬೂಮ್‌ಲೈವ್‌ ಸುದ್ದಿ​ಸಂಸ್ಥೆ ಈ ಸುದ್ದಿಯ ಸತ್ಯಾ​ಸತ್ಯಾ ಪರಿ​ಶೀ​ಲಿ​ಸಿ​ದಾಗ ಇದೊಂದು ಸುಳ್ಳು​ಸುದ್ದಿ ಎಂಬುದು ಖಚಿ​ತ​ವಾ​ಗಿದೆ. ಬಿರಿ​ಯಾನಿ ಬಡಿ​ಸು​ತ್ತಿ​ರುವ ವ್ಯಕ್ತಿಯ ಚಿತ್ರವು ಯುಟ್ಯೂ​ಬ್‌​ನಲ್ಲಿ ಜೂನ್‌ 30, 2016ರಲ್ಲಿ ಅಪ್‌​ಲೋಡ್‌ ಮಾಡ​ಲಾ​ಗಿದೆ. ಅದ​ರಲ್ಲಿ ‘ಮು​ಸ್ಲಿ​ಮರ ಹಬ್ಬ​ಕ್ಕಾಗಿ ದಮ್‌ ಬಿರಿ​ಯಾನಿ ರೆಡಿ​ಯಾ​ಗು​ತ್ತಿದೆ​’ ಎಂದು ಒಕ್ಕಣೆ ಬರೆ​ಯ​ಲಾ​ಗಿದೆ.

ಇನ್ನು ಮಾತ್ರೆ​ಗ​ಳಿ​ರುವ ಫೋಟೋವು ಡೈಲಿ ಮಿರರ್‌ ಶ್ರೀಲಂಕಾ ವೆಬ್‌​ಸೈ​ಟ್‌​ನಲ್ಲಿ ಲೇಖ​ನ​ವೊಂದ​ರಲ್ಲಿ ಪ್ರಕ​ಟ​ವಾ​ಗಿದ್ದು ಕಂಡು​ಬಂದಿದೆ. ಅದ​ರಲ್ಲಿ ಅಕ್ರ​ಮ​ವಾಗಿ ಡ್ರಗ್ಸ್‌ ಸಾಗಿ​ಸು​ತ್ತಿದ್ದ ತಂದೆ, ಮಗ​ನನ್ನು ಶ್ರೀಲಂಕಾ ಪೊಲೀ​ಸರು ಬಂಧಿ​ಸಿ​ದ್ದಾರೆ ಎಂದು ಬರೆ​ಯ​ಲಾ​ಗಿದೆ. ಇಷ್ಟೇ ಅಲ್ಲದೆ, ಕೊಯಿ​ಮ​ತ್ತೂರು ಸಿಟಿ ಪೊಲೀಸ್‌ ಕೂಡ ವೈರಲ್‌ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿ​ದ್ದಾರೆ. ಅಲ್ಲಿಗೆ ಅಂತ​ರ್ಜಾ​ಲ​ದಲ್ಲಿ ಲಭ್ಯ​ವಿ​ರುವ ಫೋಟೋ​ವನ್ನು ಎಡಿಟ್‌ ಮಾಡಿ ಹೀಗೆ ಸುಳ್ಳು​ಸುದ್ದಿ ಹಬ್ಬಿ​ಸ​ಲಾ​ಗುತ್ತಿದೆ ಎಂಬುದು ಸ್ಪಷ್ಟ.

-ವೈರಲ್ ಚೆಕ್ 

click me!