Fact Check: ಹೋಳಿಗೆ ಚೀನಾ ಬಣ್ಣ ಬಳ​ಸ​ದಂತೆ ಪ್ರಕ​ಟ​ಣೆ!

By Kannadaprabha News  |  First Published Feb 29, 2020, 11:42 AM IST

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರ ಎರಡೂ ಕೂಡ ಮಾರ್ಚ್ 9 ರ ಹೋಳಿ ಹಬ್ಬಕ್ಕೆ ಚೀನಾ ಉತ್ಪ​ನ್ನ​ಗ​ಳನ್ನು ಬಳ​ಸ​ದಂತೆ ಸೂಚನೆ ನೀಡಿದೆ ಎಂಬ ಸಂದೇ​ಶ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 


ಸುಮಾರು 2000ಕ್ಕೂ ಹೆಚ್ಚಿನ ಜನ​ರನ್ನು ಬಲಿ ಪಡೆದ ಚೀನಾ ಮೂಲದ ಕೊರೋನಾ ವೈರಸ್‌ ಹಲವು ದೇಶ​ಗ​ಳಲ್ಲಿ ವ್ಯಾಪಿ​ಸು​ತ್ತಿ​ದೆ. ಈ ಮಾರ​ಣಾಂತಿಕ ವೈರಸ್‌ ಬಗ್ಗೆ ಪ್ರತಿ​ಯೊ​ಬ್ಬರೂ ಭಯ​ಭೀ​ತ​ರಾ​ಗಿ​ದ್ದಾರೆ. ವೈರ​ಸ್‌​ನಿಂದ ಪಾರಾ​ಗಲು ಹಲವು ದೇಶ​ಗಳು ಮುಂಜಾ​ಗ್ರತಾ ಕ್ರಮ​ಗ​ಳನ್ನು ಕೈಗೊ​ಳ್ಳು​ತ್ತಿವೆ.

Tap to resize

Latest Videos

undefined

ಈ ಹಿನ್ನೆ​ಲೆ​ಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರ ಎರಡೂ ಕೂಡ ಮಾಚ್‌ರ್‍ 9ರ ಹೋಳಿ ಹಬ್ಬಕ್ಕೆ ಚೀನಾ ಉತ್ಪ​ನ್ನ​ಗ​ಳನ್ನು ಬಳ​ಸ​ದಂತೆ ಸೂಚನೆ ನೀಡಿದೆ ಎಂಬ ಸಂದೇ​ಶ​ವೊಂದು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದೆ. ಭಾರತ ಸರ್ಕಾರ ಸುತ್ತೋಲೆ ಹೊರ​ಡಿ​ಸಿದ ಎಂಬ ಪ್ರಕ​ಟ​ಣೆ​ಯನ್ನು ಪೋಸ್ಟ್‌ ಮಾಡಿ ಹೀಗೆ ಹೇಳ​ಲಾ​ಗಿದೆ.

ಅದ​ರಲ್ಲಿ ಭಾರತ ಸರ್ಕಾ​ರದ ಸೀಲ್‌ ಕೂಡ ಇದೆ. ‘ಬಹು ಮುಖ್ಯ ಪ್ರಕ​ಟ​ಣೆ. ಇನ್ನೇನು ಕೆಲವೇ ದಿನ​ಗ​ಳಲ್ಲಿ ಹೋಳಿ ಹಬ್ಬ ಬರು​ತ್ತಿದೆ. ಭಾರ​ತದ ಪ್ರಮುಖ ಹಬ್ಬ​ಗ​ಳಲ್ಲಿ ಇದೂ ಒಂದು. ಆದರೆ ಭಾರ​ತ​ದಲ್ಲಿ ಹೋಳಿ ಹಬ್ಬ​ದಂದು ಬಳ​ಸುವ ಬಹು​ತೇಕ ಬಣ್ಣ​ಗಳು ಚೀನಾ​ದಿಂದ ಆಮ​ದಾ​ಗು​ತ್ತವೆ. ದಯ​ವಿಟ್ಟು ಯಾರೂ ಈ ಚೀನಾ ಉತ್ಪ​ನ್ನ​ಗ​ಳನ್ನು ಬಳ​ಸ​ಬಾ​ರ​ದೆಂದು ಕೋರು​ತ್ತೇವೆ’ ಎಂದಿ​ದೆ.

ಬೂಮ್‌ ಲೈವ್‌ ಸುದ್ದಿ​ಸಂಸ್ಥೆ ಈ ಪ್ರಕ​ಟ​ಣೆಯ ಹಿಂದಿನ ಸತ್ಯಾ​ಸತ್ಯ ಏನೆಂದು ಪರಿ​ಶೀ​ಲಿ​ಸಿ​ದಾಗ ಇದೊಂದು ನಕಲಿ ಪ್ರಕ​ಟಣೆ ಎಂಬುದು ಖಚಿ​ತ​ವಾ​ಗಿದೆ. ಭಾರ​ತದ ಯಾವುದೇ ಸಚಿ​ವಾ​ಲ​ಯ​ವಾ​ಗಲೀ, ವಿಶ್ವ ಆರೋಗ್ಯ ಸಂಸ್ಥೆ​ಯಾ​ಗಲೀ ಚೀನಾ ವಸ್ತು​ಗ​ಳನ್ನು ನಿಷೇ​ಧಿ​ಸಿ ಪ್ರಕ​ಟಣೆ ಹೊರ​ಡಿ​ಸಿ​ಲ್ಲ ಎಂಬುದು ಸ್ಪಷ್ಟ​ವಾ​ಗಿ​ದೆ. ಅಲ್ಲದೆ ವೈರಲ್‌ ಆಗಿ​ರುವ ಪ್ರಕ​ಟ​ಣೆ​ಯಲ್ಲಿ ಸಾಕಷ್ಟುವ್ಯಾಕ​ರಣ ದೋಷ​ಗ​ಳಿವೆ.

- ವೈರಲ್ ಚೆಕ್ 

click me!