ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟ ಹಲವು ಫೋಟೋಗಳು ಮನಕಲಕುವಂತಿವೆ. ಉದ್ರಿಕ್ತ ಗುಂಪುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರು ಮಾಡಿದ ಹರಸಾಹನ ನಿಜಕ್ಕೂ ಕಣ್ಣಂಚಲ್ಲಿ ನೀರು ಜಿನಿಗುವಂತೆ ಮಾಡುತ್ತಿದೆ. ಇದೇ ವೇಳೆ ಮಹಿಳೆಯೊಬ್ಬರು ಮೂವರು ಮಕ್ಕಳನ್ನು ಅವುಚಿಕೊಂಡು ಕಣ್ಣೀರಿಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಹರಿದಾಡುತ್ತಿದೆ.
ಕೋಮು ದಳ್ಳುರಿಗೆ ಸಿಕ್ಕ ರಾಷ್ಟ್ರರಾಜಧಾನಿ ಕೆಲ ದಿನಗಳಿಂದ ಅಕ್ಷರಶಃ ಹೊತ್ತಿ ಉರಿದು ಸದ್ಯ ಅಲ್ಪ ಮಟ್ಟಿಗೆ ತಣ್ಣಗಾಗಿದೆ. ಈ ಕೋಮು ಹಿಂಸಾಚಾರದಲ್ಲಿ 45ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಪಟ್ಟಹಲವು ಫೋಟೋಗಳು ಮನಕಲಕುವಂತಿವೆ. ಉದ್ರಿಕ್ತ ಗುಂಪುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರು ಮಾಡಿದ ಹರಸಾಹನ ನಿಜಕ್ಕೂ ಕಣ್ಣಂಚಲ್ಲಿ ನೀರು ಜಿನಿಗುವಂತೆ ಮಾಡುತ್ತಿದೆ.
ಇದೇ ವೇಳೆ ಮಹಿಳೆಯೊಬ್ಬರು ಮೂವರು ಮಕ್ಕಳನ್ನು ಅವುಚಿಕೊಂಡು ಕಣ್ಣೀರಿಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ಹರಿದಾಡುತ್ತಿದೆ. ಇದು ನಿಜಕ್ಕೂ ದೆಹಲಿ ಹಿಂಸಾಚಾರದ ಭೀಕರತೆಯನ್ನು ಪ್ರಚುರಪಡಿಸುತ್ತಾ, ಮನಕಲುಕುವಂತಿದೆ.
undefined
ಅಕ್ಷಯ್ ರೆಡ್ಡಿ ಎಎಪಿ ತನ್ನ ಫೇಸ್ಬುಕ್ ಪೇಜ್ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿ, ‘ನನ್ನ ದೇಶಕ್ಕೆ ಪ್ರಧಾನಿ ನರೇಂದ್ರ ಏನು ಮಾಡಿದರು ಎನ್ನುವುದನ್ನು ನೆನಪಿಟ್ಟುಕೊಳ್ಳಲು ಈ ಚಿತ್ರವೊಂದು ಸಾಕು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಈ ಫೋಟೋವೀಗ ವೈರಲ್ ಆಗಿದೆ.
ದೆಹಲಿ ಹಿಂಸಾಚಾರದಲ್ಲಿ ಪುಟ್ಟ ಮಗುವಿಗೇ ಥಳಿಸಿದ ಪೊಲೀಸರು
ಆದರೆ ಇದು ನಿಜಕ್ಕೂ ದೆಹಲಿ ಗಲಭೆಗೆ ಸಂಬಂಧಿಸಿದ್ದೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಲ್ ಆಗಿರುವ ಫೋಟೋ ದೆಹಲಿಯದ್ದಲ್ಲ, ಬೇರೆ ದೇಶದ್ದು ಎನ್ನುವ ವಾಸ್ತವ ತಿಳಿದುಬಂದಿದೆ.
Fact Check: ಹಿಂದೂಗಳಿಗೆ ಮಕ್ಕಳಾಗದಂತೆ ಬಿರಿಯಾನಿಯಲ್ಲಿ ಮಾತ್ರೆ
ರಿವರ್ಸ್ ಇಮೇಜ್ನಲ್ಲಿ ಪರಿಶೀಲಿಸಿದಾಗ ಇದು ಸಿರಿಯಾ ಯುದ್ಧದ ಸಂದರ್ಭದದ್ದು, ಅಂದರೆ 6 ವರ್ಷಹಿಂದಿನ ಫೋಟೋ ಎಂಬುದು ಸ್ಪಷ್ಟವಾಗಿದೆ. ಗೆಟ್ಟಿಇಮೇಜ್ನಲ್ಲಿ ಇದೇ ಫೋಟೋ ಲಭ್ಯವಿದ್ದು, ‘ಮೇ 14, 2014ರ ಸಿರಿಯಾ ಸಂಘರ್ಷದಲ್ಲಿ ಬಾಂಬ್ ದಾಳಿ ವೇಳೆ ಮನೆ ಕಳೆದುಕೊಂಡ ಮಹಿಳೆ ಮಕ್ಕಳನ್ನು ಅವುಚಿಕೊಂಡು ಕುಳಿತಿರುವುದು’ ಎಂದು ಅಡಿಟಿಪ್ಪಣಿ ಬರೆಯಲಾಗಿದೆ. ಹಾಗಾಗಿ ವೈರಲ್ ಆಗಿರುವ ಈ ಫೋಟೋ ದೆಹಲಿಯದ್ದಲ್ಲ ಎಂಬುದು ಸ್ಪಷ್ಟ.
- ವೈರಲ್ ಚೆಕ್