Fact Check: ಸ್ಮೃತಿ ಇರಾನಿ ಓದುತ್ತಿರುವುದು ಪ್ರಧಾನಿ ಮೋದಿ ಕುರಿತ ಪುಸ್ತಕ ರಾಹುಲ್ ಗಾಂಧಿಯದ್ದಲ್ಲ

By Manjunath Nayak  |  First Published Nov 3, 2022, 1:49 PM IST

Smriti Irani Reading Rahul Gandhi Book Fact Check: ಮುಖಪುಟದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೋಟೋ ಇರುವ ಪುಸ್ತಕವೊಂದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಓದುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. 


ನವದೆಹಲಿ (ನ. 03): ಮುಖಪುಟದಲ್ಲಿ (Cover Page) ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೋಟೋ ಇರುವ ಪುಸ್ತಕವೊಂದನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಓದುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಪುಸ್ತಕದ ಶೀರ್ಷಿಕೆಯಲ್ಲಿ ' Rahul Gandhi's Day-to-Day Schedule 2022 – 2023' (ರಾಹುಲ್ ಗಾಂಧಿಯವರ ದೈನಂದಿನ ವೇಳಾಪಟ್ಟಿ 2022 - 2023) ಎಂದು ಬರೆಯಲಾಗಿದೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಚಿತ್ರವು ಎಡಿಟ್‌ ಮಾಡಿರುವುದು ಪತ್ತೆಯಾಗಿದೆ. 

ಸ್ಮೃತಿ ಇರಾನಿ ವೇರಿಫೈಡ್‌ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮೂಲ ಫೋಟೋದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಜೀವನವನ್ನು ಆಧರಿಸಿದ 'Modi@20: Dreams meet Delivery' (ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ) ಎಂಬ ಶೀರ್ಷಿಕೆಯ ಪುಸ್ತಕವನ್ನು ಓದುತ್ತಿದ್ದಾರೆ. 18 ಸೆಪ್ಟೆಂಬರ್ 2022 ರಂದು ಪುಸ್ತಕದ ಹಿಂದಿ ಆವೃತ್ತಿಯ ಬಿಡುಗಡೆ ಕಾರ್ಯಕ್ರಮಕ್ಕಾಗಿ ಬಿಹಾರದ ಪಾಟ್ನಾದಲ್ಲಿದ್ದಾಗ ಅವರು ಈ ಫೋಟೋವನ್ನು ಹಂಚಿಕೊಂಡಿದ್ದರು.

Tap to resize

Latest Videos

undefined

Cliam: ಕೇಂದ್ರ ಸಚಿವೆ ಸ್ಮೃತಿ ಇರಾನಿ  'Rahul Gandhi's Day-to-Day Schedule 2022 – 2023' ಎಂಬ ಪುಸ್ತಕವನ್ನು ಓದುತ್ತಿದ್ದಾರೆ. 

Fact Check: ಈ ಫೋಟೋದ ಸತ್ಯಾಸತ್ಯತೆ ಪರೀಶಿಲಿಸಲು ವೈರಲ್‌ ಫೋಟೋದ‌ ಗೂಗಲ್‌ ರಿವರ್ಸ್ ಇಮೇಜ್ ಸರ್ಚ್‌ ನಡೆಸಿದಾಗ  18 ಸೆಪ್ಟೆಂಬರ್ 2022 ರಂದು ಸ್ಮೃತಿ ಇರಾನಿ ಅವರ ವೇರಿಫೈಡ್‌ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಟ್ವೀಟ್‌ ಪತ್ತೆಯಾಯಿತು.  ಸ್ಮೃತಿ ಇರಾನಿ ಓದುತ್ತಿರುವ  ಪುಸ್ತಕದ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇದ್ದು  ಶೀರ್ಷಿಕೆಯಲ್ಲಿ 'Modi@20' ಎಂದು ಬರೆಯಲಾಗಿದೆ. 

'Modi@20: Dreams Meet Delivery' ಮೋದಿಯವರ ಸಾರ್ವಜನಿಕ ಜೀವನದ ಕುರಿತಾದ ಪುಸ್ತಕವಾಗಿದೆ.  ಮೇ 2022 ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಕೇಂದ್ರ ಸಚಿವ ಅಮಿತ್ ಶಾ ಮತ್ತು ಎಸ್ ಜೈಶಂಕರ್ ಮತ್ತು ಲೇಖಕರಾದ ಅಮಿಶ್ ತ್ರಿಪಾಠಿ ಮತ್ತು ಸುಧಾ ಮೂರ್ತಿ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಬರೆದಿದ್ದಾರೆ. ಈ ಪುಸ್ತಕವು ಇ-ಕಾಮರ್ಸ್‌ ವೆಬ್‌ಸೈಟ್‌  ಮತ್ತು ನಲ್ಲಿ ಕೂಡ ಲಭ್ಯವಿದೆ. 

ಸೆಪ್ಟೆಂಬರ್ 18 ರಂದು ಬಿಹಾರದ ಪಾಟ್ನಾದಲ್ಲಿ ಈ ಪುಸ್ತಕದ ಹಿಂದಿ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ಬಿಹಾರ ಉಸ್ತುವಾರಿ ವಿನೋದ್ ತಾವ್ಡೆ ಅವರೊಂದಿಗೆ  ಸ್ಮೃತಿ ಇರಾನಿ ಪಾಲ್ಗೊಂಡಿದ್ದರು. ಈ ಕುರಿತು ಖುದ್ದು ಸ್ಮೃತಿ ಇರಾನಿ ಟ್ವೀಟ್‌ ಮಾಡಿದ್ದು ಮಾಧ್ಯಮಗಳು ಕೂಡ ವರದಿ ಮಾಡಿವೆ.

Conclusion: ಸ್ಮೃತಿ ಇರಾನಿ ಪ್ರಧಾನಿ ಮೋದಿ ಸಾರ್ವಜನಿಕ ಜೀವನದ ಕುರಿತ ಪುಸ್ತಕವನ್ನು ಓದುತ್ತಿದ್ದಾರೆ. ಇದೇ ಫೋಟೋವನ್ನು ಎಡಿಟ್‌ ಮಾಡಿ ಇರಾನಿ, ರಾಹುಲ್ ಗಾಂಧಿ ದೈನಂದಿನ ವೇಳಾಪಟ್ಟಿ 2022 - 2023 ಕುರಿತ ಪುಸ್ತಕವನ್ನು ಓದುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ. 

Fact Check: ಪ್ರಧಾನಿ ಮೋದಿ ಕೈ ತೊಳೆಯುತ್ತಿರುವ ಫೋಟೋ ಶೌಚಾಲಯದ್ದಲ್ಲ, ಗುರುದ್ವಾರ ಪ್ರವೇಶದ್ವಾರದ್ದು

click me!