Fact Check: 'ಕೇರಳ ಹಿಂದೂ ಮಹಿಳೆ ಐಸಿಸ್‌ ಸೇರ್ಪಡೆ' ವೈರಲ್ ವಿಡಿಯೋ The Kerala Story ಚಿತ್ರದ ಟೀಸರ್ನದ್ದು

By Manjunath NayakFirst Published Nov 7, 2022, 2:28 PM IST
Highlights

Kerala woman joined ISIS Fact Check: ಕೇರಳದಲ್ಲಿ ಹಿಂದೂ ಮಹಿಳೆಯೊಬ್ಬರು ಇಸ್ಲಾಂಗೆ ಮತಾಂತರವಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನವದೆಹಲಿ (ನ. 07): ಕೇರಳದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್‌ ಆಗಿದೆ. ಕೆಲವು ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋದಲ್ಲಿರುವ ಮಹಿಳೆ ತನ್ನ ಹೆಸರನ್ನು ಶಾಲಿನಿ ಉನ್ನಿಕೃಷ್ಣನ್‌ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಹಲವರು, ಹಿಂದೂ ಧರ್ಮವನ್ನು ತೊರೆದು ಹೋದ ಕಾರಣದಿಂದ ಈ ರೀತಿಯಾಗಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಕೇರಳ ಮಹಿಳೆಯರನ್ನು ಅಪಹರಿಸಿ ಐಸಿಸ್‌ಗೆ (ISIS) ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಆದರೆ ಈ ವಿಡಿಯೋ  ಮುಂಬರುವ ಮಲೆಯಾಳಂ ಸಿನಿಮಾವಾದ ‘ದ ಕೇರಳ ಸ್ಟೋರಿ’ಯ (The Kerala Story) ವಿಡಿಯೋ ತುಣುಕು ಎಂಬುದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. ನಿಜವಾದ ವಿಡಿಯೋದಲ್ಲಿ ಮಹಿಳೆಯ ಹಿಂಭಾಗದಲ್ಲಿ ಕಪ್ಪು ಬೋರ್ಡ್‌ ಇದ್ದು ಅದರಲ್ಲಿ ಕೇರಳ ಸ್ಟೋರಿ ಎಂದು ಬರೆಯಲಾಗಿದೆ. ಈ ವಿಡಿಯೋವನ್ನೇ ಎಡಿಟ್‌ ಮಾಡಿ ಆಕೆ ಯಾವುದೋ ಪ್ರದೇಶದಲ್ಲಿ ನಿಂತು ಮಾತನಾಡುತ್ತಿರುವಂತೆ ಮಾಡಲಾಗಿದೆ. ಹಾಗಾಗಿ ಕೇರಳದ ಹಿಂದೂ ಮಹಿಳೆ ಐಸಿಸ್‌ಗೆ ಸೇರ್ಪಡೆಯಾಗಿದ್ದಾಳೆ  ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ವಿಡಿಯೋ ದಾರಿ ತಪ್ಪಿಸುತ್ತಿದೆ. 

Claim: ISIS ಭಯೋತ್ಪಾದಕಳಾಗಿ ಅಫ್ಘಾನಿಸ್ತಾನದ ಜೈಲಿನಲ್ಲಿರುವ ಕೇರಳದ ಹಿಂದೂ ಮಹಿಳೆ

Fact Check: ವೈರಲ್ ವೀಡಿಯೊದ ಕೊನೆಯಲ್ಲಿ 'The Kerala Story' ಎಂದು  ಬರೆಯಲಾಗಿದೆ.  ಸಾಮಾಜಿಕ ಮಾಧ್ಯಮದಲ್ಲಿ ಹಲವರು  #TheKeralaStory ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಇದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಅನೇಕರು ಈ ವಿಡಿಯೋ ಮುಂಬರುವ ಚಲನಚಿತ್ರದ್ದು ಎಂದು ಹೇಳಿಕೊಂಡಿದ್ದಾರೆ. ವೈರಲ್ ವೀಡಿಯೊ ಕುರಿತು ನಾವು ಇನ್ನಷ್ಟು ತನಿಖೆ ನಡೆಸಿದಾಗ ಹಲವು ಮಾಧ್ಯಮ ವರದಿಗಳನ್ನು ಕಂಡುಕೊಂಡಿದ್ದೇವೆ. ನವೆಂಬರ್ 3ರಂದು ಪ್ರಕಟವಾದ ಏಷ್ಯಾನೆಟ್‌ ನ್ಯೂಸೆಬಲ್ (‌ Asianet Newsable) ವರದಿಯಲ್ಲಿ  "ಕೇರಳ ರಾಜ್ಯದಲ್ಲಿ 32,000 ಮಹಿಳೆಯರ ನಾಪತ್ತೆಯ ಹಿಂದಿನ ಘಟನೆಗಳನ್ನು ಬಹಿರಂಗಪಡಿಸುವ, ಅಮೃತ ಲಾಲ್ ಶಾ ನಿರ್ಮಾಣದ  "ದಿ ಕೇರಳ ಸ್ಟೋರಿ" ಬಿಡುಗಡೆಗೆ ಸಿದ್ಧವಾಗುತ್ತಿದೆ" ಎಂದು ಹೇಳಲಾಗಿದೆ. ಮುಂದಿನ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ವರದಿ ಹೇಳಿದೆ.

ಇನ್ನು ನಟಿ ಅದಾ ಶರ್ಮಾ (Adah Sharma) ಚಿತ್ರದಲ್ಲಿ ನಟಿಸಿದ್ದು ಸ್ವತಃ ಅವರು ಟ್ವೀಟರ್‌ನಲ್ಲಿ 1 ನಿಮಿಷ 11 ಸೆಕೆಂಡ್‌ಗಳ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಚಲನಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ವಿಪುಲ್ ಅಮೃತಲಾಲ್ ಷಾ ಸನ್‌ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ವೀಡಿಯೊದ ಕೊನೆಯಲ್ಲಿ "Coming Soon" ಎಂದೂ ಹೇಳಲಾಗಿದೆ. 

 

Heart breaking and gut wrenching stories of 32000 females in Kerala! pic.twitter.com/M6oROuGGSu

— Adah Sharma (@adah_sharma)

ಇನ್ನು ಚಿತ್ರದ ಟೀಸರನ್ನು ಸನ್‌ಶೈನ್ ಪಿಕ್ಚರ್ಸ್‌ (Sunshine Pictures) ಯೂಟ್ಯೂಬ್ ಚಾನೆಲ್‌ನಲ್ಲಿ ನವೆಂಬರ್ 3 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದ ಕ್ಯಾಪ್ಶನ್‌ನಲ್ಲಿ “Heartbreaking and gut-wrenching stories of 32000 females in Kerala! Coming Soon! (ಕೇರಳದ 32,000 ಹೆಣ್ಣುಮಕ್ಕಳ ಹೃದಯ ವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು! ಶೀಘ್ರದಲ್ಲೇ ಬರಲಿದೆ!) ” ಎಂದು ಬರೆಯಲಾಗಿದೆ. 

Conclusion: ಸಿನಿಮಾದ ಟೀಸರ್‌ನಲ್ಲಿ  ಹೇಳಿರುವಂತೆ  ಕೇರಳದ 32,000 ಮಹಿಳೆಯರನ್ನು ಭಯೋತ್ಪಾದಕ ಸಂಘಟನೆ ಕಳ್ಳಸಾಗಣೆ ಮಾಡಿರುವ ಬಗ್ಗೆಯೂ  ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಇನ್ನೂ ಈ ಬಗ್ಗೆ ದೂರು ಕೂಡ ದಾಖಲಾಗಿದೆ ಎಂದು ಏಷ್ಯಾನೆಟ್‌ ನ್ಯೂಸ್‌ ಮಲಯಾಲಂ (Asianet News Malayalam) ವರದಿ ತಿಳಿಸಿದೆ. ಆದರೆ ಈ ಹೇಳಿಕೆ ಫ್ಯಾಕ್ಟ್‌ಚೆಕ್‌ನ ಕೇಂದ್ರಬಿಂದುವಲ್ಲ. ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಈ ವಿಡಿಯೋ ಹಂಚಿಕೊಂಡಿದ್ದು ಬೆರಳೆಣಿಕೆಯಷ್ಟು ನೆಟ್ಟಿಗರು ಚಿತ್ರದ ಟೀಸರನ್ನು ನೈಜ ಘಟನೆ ಎಂದು ಹಂಚಿಕೊಂಡಿದ್ದಾರೆ. ಹೀಗಾಗಿ ತಪ್ಪು ಮಾಹಿತಿಯೊಂದಿಗೆ ಕೆಲವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

Fact Check: ಪ್ರಧಾನಿ ಮೋದಿ ಕೈ ತೊಳೆಯುತ್ತಿರುವ ಫೋಟೋ ಶೌಚಾಲಯದ್ದಲ್ಲ, ಗುರುದ್ವಾರ ಪ್ರವೇಶದ್ವಾರದ್ದು

click me!