
ಬೆಂಗಳೂರು (ನ. 09): ಅದ್ಭುತ ಕಂಠಸಿರಿಯಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಇನ್ನು ಮುಂದೆ ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ.
ಇದುವರೆಗೂ ಪ್ರತಿ ಶನಿವಾರ- ಭಾನುವಾರ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದ್ದ ಸರಿಗಮಪ ಇನ್ಮುಂದೆ 8 ಗಂಟೆಗೆ ಪ್ರಸಾರವಾಗಲಿದೆ. ಪ್ರತಿವಾರ ಏನಾದರೊಂದು ವಿಶೇಷ ಸುತ್ತನ್ನು ಒಳಗೊಂಡಿರುವ ಈ ಶೋ ಈ ಬಾರಿ ಡುಯೆಟ್ ರೌಂಡ್ ಹೊಂದಿದೆ. ಇಬ್ಬರು ಸ್ಪರ್ಧಿಗಳು ಡ್ಯುಯೆಟ್ ಸಾಂಗ್ ಹಾಡಲಿದ್ದಾರೆ.
ಗಾಯಕರಾದ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಗೀತ ಮಾಂತ್ರಿಕ ಹಂಸಲೇಖ ಸಾರಥ್ಯ ವಹಿಸಿದ್ದಾರೆ. ಕಳೆದ ಸೀಸನ್ ನಲ್ಲಿ ಕಾಣೆಯಾಗಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಆಗಮಿಸಿದ್ದಾರೆ. ರಾಜೇಶ್ ಕೃಷ್ಣನ್ ಆಗಮನ ಇನ್ನಷ್ಟು ಕಳೆ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.