
ಬೆಂಗಳೂರು (ನ.09): ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿ ಎಲ್ಲರ ಮನೆ ಮಾತಾಗಿತ್ತು. 1500 ಕಂತುಗಳನ್ನು ಪೂರೈಸಿದ ಯಶಸ್ವಿ ಧಾರಾವಾಹಿ. ಇದೀಗ ಇದೆ ಧಾರಾವಾಹಿ ಮತ್ತೆ ನಿಮ್ಮ ಮುಂದೆ ಬರಲು ಸಜ್ಜಾಗಿದೆ. ಅರೇ! ಮತ್ತೆ ಬರ್ತಾ ಇದೆಯಾ ಎಂದು ಹುಬ್ಬೇರಿಸಬೇಡಿ.
ಹೌದು ಮತ್ತೆ ಬರುತ್ತಿರುವುದು ಅಮೃತವರ್ಷಿಣಿ ಧಾರಾವಾಹಿಯೇನೋ ಹೌದು. ಆದರೆ ಇದು ಅದೇ ಹಳೆಯ ಅಮೃತವರ್ಷಿಯಲ್ಲ. ಟೈಟಲ್ ಮಾತ್ರ ಅಮೃತವರ್ಷಿಣಿ. ಆದರೆ ಕಥೆ ಬೇರೆ. ಈ ಧಾರಾವಾಹಿಗೆ ಚೇತನ್ ವಸಿಷ್ಟ ಕತೆ- ಚಿತ್ರಕತೆ ಬರೆದಿದ್ದಾರೆ.
ಅವಳಿ ಸಹೋದರಿಯರ ನಡುವಿನ ಸಮಧುರ ಬಾಂಧವ್ಯವನ್ನು ಸಾರುವ ಭಾವನಾತ್ಮಕ ಕತೆಯನ್ನು ಈ ಧಾರಾವಾಹಿ ಹೇಳಲಿದೆ. ರಚಿತಾ ಗೌಡ, ಮೋಹನ್ ರಾಜ್, ಜ್ಯೋತಿ, ಅಮೃತ ರಾವ್, ನಂದಿನಿ ವಿಠ್ಠಲ್, ಬೇಬಿ ದ್ಯುತಿ, ಅಕ್ಷತಾ ದೇಶಪಾಂಡೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಇದೇ ನವೆಂಬರ್ 12 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.