
ಟೀಂ ಇಂಡಿಯಾದ ಆಟಗಾರ ಯುವಿಒ ತನ್ನ ಬ್ಯಾಚುಲರ್ ಲೈಫ್'ಗೆ ಗುಡ್ ಬಾಯ್ ಹೇಳಿ ಹೇಜಲ್ ಕೀಚ್'ಳೊಂದಿಗೆ ಹಸೆಮಣೆ ಏರಿದ್ದಾರೆ. ಈ ಮಧ್ಯೆ ಮೊನ್ನೆ ನಡೆದ ಯುವರಾಜ್ ಸಿಂಗ್ 'ಸಂಗೀತ್' ಕಾರ್ಯಕ್ರಮದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಅಂತದ್ದೇನು ವಿಶೇಷ ಅನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಯುವಿ ಟೀಂ ಇಂಡಿಯಾದ ಬೆಸ್ಟ್ ಆಟಗಾರ ಈತನ ಮದುವೆಯ ಹಿಂದಿನ ದಿನದ 'ಸಂಗೀತ್' ಕಾರ್ಯಕ್ರಮಕ್ಕೆ ತಂಡದ ಾಟಗಾರರು ಹಾಜರಾಗಿದ್ದು, ವಿರಾಟ್ ಕೊಹ್ಲಿಯೂ ಆಗಮಿಸಿದ್ದರು. ಈ ವೇಳೆ ಮಸ್ತಿ ಮೂಡ್'ನಲ್ಲಿದ್ದ ವಿರಾಟ್ ಯುವಿಯೊಂದಿಗೆ ಸೇರಿ ಹಾಡಿಗೆ ಸ್ಟೆಪ್ಸ್ ಹಾಕಿ ಎಲ್ಲರಿಗೂ ಮನರಂಜನೆ ನೀಡಿದ್ದಾರೆ. ಭಾಂಗ್ರಾ ಡ್ಯಾನ್ಸ್ ಮಾಡುತ್ತಿದ್ದ ವಿರಾಟ್'ನನ್ನು ಕಂಡು ಅಲ್ಲಿದ್ದವರೆಲ್ಲಾ ಅಚ್ಚರಿ ಪಟ್ಟಿದ್ದಾರೆ.
ಸದ್ಯ ವಿರಾಟ್ ಹಾಗೂ ಯುವಿಯ ಡ್ಯಾನ್ಸ್ ಸಾಮಾಜಿಕ ಜಾಲಾತಾನಗಳಲ್ಲಿ ವೈರಲ್ ಆಗುತ್ತಿದ್ದು ವೀಕ್ಷಕರ ಮನಗೆದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.