
ಬೊಲ್ಡ್, ಅಡಲ್ಟ್ ವಿಡಿಯೋ ಮೂಲಕ ಕಾಲಿವುಡ್‌ನಲ್ಲಿ ಹೆಸರು ಮಾಡಿರುವ ಸ್ವಾತಿ ನಾಯ್ಡು, ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಮೇಲೂ ಅಡಲ್ಟ್ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತೇನೆಂದು ಹೇಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.
ಇಂಥ ಬೋಲ್ಡ್ ನಟಿಯನ್ನು ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದು ಸಂದರ್ಶಿಸಿತ್ತು. ಕನ್ಯತ್ವದ ಬಗ್ಗೆ ಪ್ರಶ್ನಿಸಿದಾಗ ಎಂಥವರೂ ಕೆಲ ಕ್ಷಣ ದಂಗಾಗುತ್ತಾರೆ. ಆದರೆ ಸ್ವಾತಿ ಬೊಲ್ಡ್ ಆಗಿಯೇ ಉತ್ತರಿಸಿದ್ದಾರೆ. ಪತಿಯ ಪಾವಿತ್ರ್ಯತೆ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಕುತೂಹಲವಾಗಿ ಉತ್ತರಿಸಿದ್ದಾರೆ. ಹೇಗೆ?
ಈ ಸಿರಿವಂತನ ಅಳಿಯನಾಗುವ ಭಾಗ್ಯ ಯಾರಿಗೆ ಒಲಿಯಿತೋ?
'ನಿಮ್ಮ ಪತಿ ವರ್ಜಿನ್ನಾ?' ಆಕಡೆಯಿಂದ ಹರಿದು ಬಂದಿತ್ತು, ಪ್ರಶ್ನೆ.
‘No way, ಛಾನ್ಸೇ ಇಲ್ಲ... ನನ್ನ ಗಂಡ ವರ್ಜಿನ್ ಅಲ್ಲ. ಮದುವೆಗೂ ಮುನ್ನವೇ ಅವರಿಗೆ ಹಲವಾರು ಸಂಬಂಧಗಳಿದ್ದವು...’ ಎಂದರು. ಅಷ್ಟೇ ಅಲ್ಲ ಮತ್ತೊಂದು ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ. 'ವರ್ಜಿನಿಟಿ ಬಗ್ಗೆ ಗಂಡಸರು ಮಾತನಾಡಿದರೆ ಅದನ್ನು ನಂಬುವುದು ಕಷ್ಟ. ನಂಬಲೂ ಬಾರದು. ಅವರು ಹೇಳುವುದೆಲ್ಲವೂ ಬಹುತೇಕ ಸುಳ್ಳು. ಅಷ್ಟಕ್ಕೂ ಅವರಿಗೆ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಬರುವುದೇ ಇಲ್ಲ,’ಎಂದಿದ್ದಾರೆ!
ಮದುವೆಯ ಗುಟ್ಟು ಬಿಚ್ಚಿಟ್ಟ ನಿಖಿಲ್
ಮದುವೆಗೂ ಮುನ್ನ 8 ತಿಂಗಳು ಸ್ವಾತಿ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದರು. ಈ ಮದುವೆಯನ್ನು ಸ್ವಾತಿ ಪೋಷಕರು ಇನ್ನೂ ಒಪ್ಪಿಯೇ ಇಲ್ವಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.