
ಬೆಂಗಳೂರು: ಹಿಂದಿಯ ಬ್ಲಾಕ್'ಬಸ್ಟರ್ 'ಕ್ವೀನ್' ಸಿನಿಮಾದ ಕನ್ನಡ ರೀಮೇಕ್ ರಮೇಶ್ ಅರವಿಂದ್ ನಿರ್ದೇಶನದಲ್ಲಿ ಸೆಟ್ಟೇರಿದೆ. ಆದರೆ, ‘ಕ್ವೀನ್'ನ ಕನ್ನಡ ರೀಮೇಕ್ ಚಿತ್ರವನ್ನು ಮೊದಲು ನಿರ್ದೇಶಿಸಬೇಕಾಗಿದ್ದು ಯೋಗರಾಜ್ ಭಟ್! ಹೌದು, ಈ ಚಿತ್ರ ರೀಮೇಕ್ ಮಾಡೋಣ ಅಂತ ನಟಿ ಪಾರೂಲ್ ಯಾದವ್ ಮೊದಲು ಸೀದಾ ಹೋಗಿದ್ದು ಯೋಗರಾಜ್ ಭಟ್'ರ ಬಳಿ. "ಕ್ವೀನ್ ಸಿನಿಮಾ ನೋಡಿ, ಅದರ ರೈಟ್ಸ್ ನನಗೆ ಗೊತ್ತಿರುವವರ ಬಳಿಯೇ ಇದೆ. ಮುಖ್ಯ ಪಾತ್ರ ನಾನು ಮಾಡುತ್ತೇನೆ. ಅದಕ್ಕಾಗಿ ತುಂಬಾ ತಯಾರಿ ಕೂಡ ಮಾಡಿಕೊಂಡಿದ್ದೇನೆ. ಕನ್ನಡದಲ್ಲಿ ನೀವು ನಿರ್ದೇಶನ ಮಾಡಿ ಕೊಡಿ" ಅಂತ ಕೇಳಿದರಂತೆ ಪಾರೂಲ್. ಆದರೆ ‘ಕ್ವೀನ್' ರೀಮೇಕ್ ಮಾಡಿದರೆ ರಮೇಶ್ ಅರವಿಂದ್ ಅವರೇ ನಿರ್ದೇಶನಕ್ಕೆ ಸೂಕ್ತ ಅಂತ ಯೋಗರಾಜ್ ಭಟ್ ಹೇಳಿ, ರಮೇಶ್ ಅವರ ಸಂಪರ್ಕ ಮಾಡಿಕೊಟ್ಟರಂತೆ ಭಟ್ಟರು. ಇದನ್ನು ಸ್ವತಃ ಪಾರೂಲ್ ಯಾದವ್ ಅವರೇ ಹೇಳಿಕೊಂಡಿದ್ದಾರೆ. ತಾವೇ ರಮೇಶ್ ಅವರಿಗೆ ಫೋನ್ ಮಾಡಿ, ರಮೇಶ್ ಮತ್ತು ಪಾರೂಲ್ ಯಾದವ್ ನಡುವೆ ಮೊದಲ ಮಾತುಕತೆ ಮಾಡಿಸಿದ್ದರ ಪರಿಣಾಮ ಇದೀಗ ಬಟರ್'ಫ್ಲೈ ಹೆಸರಲ್ಲಿ ಚಿತ್ರ ಸೆಟ್ಟೇರಿದೆ. ಹಾಗಂತ ರೀಮೇಕ್ ಅನ್ನುವ ಕಾರಣಕ್ಕೆ ಭಟ್ಟರು ಈ ಚಿತ್ರವನ್ನು ನಿರಾಕರಿಸಿದರಾ ಎನ್ನುವ ಬಗ್ಗೆ ಕೇಳುವುದಕ್ಕೆ ಭಟ್ಟರು ಸಂಪರ್ಕಕ್ಕೆ ಸಿಕ್ಕಿಲ್ಲ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.