
ಬೆಂಗಳೂರು(ಜೂನ್ 06): ಸ್ಯಾಂಡಲವುಡ್'ನಲ್ಲಿ ಮುದ್ದಾದ ಜೋಡಿ ಎಂದೇ ಹೆಸರಾಗಿದ್ದ 'ಕಿರಿಕ್ ಪಾರ್ಟಿ'ಯ ಜನಪ್ರಿಯ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಈಗ ನಿಜ ಜೀವನದಲ್ಲೂ ಜೋಡಿಯಾಗಲ್ಲಿದ್ದಾರೆ. ಹಲವು ದಿನಗಳಿಂದ ಗಾಳಿ ಸುದ್ದಿಯಾಗಿ ಹರಿದಾಡುತ್ತಿದ್ದ ಇದು ಈಗ ಪಕ್ಕಾ ಆಗಿದೆ. ಹೌದು, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ನಿಶ್ಚಿತಾರ್ಥ ನೆರವೇರುವುದು ಖಚಿತವಾಗಿದೆ. ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿರುವ ರಕ್ಷಿತ್ ಶೆಟ್ಟಿಯವರೇ ಸ್ವತಃ ಈ ವಿಚಾರವನ್ನು ಸುವರ್ಣನ್ಯೂಸ್'ಗೆ ದೃಢಪಡಿಸಿದ್ದಾರೆ.
ಕಿರಿಕ್ ಪಾರ್ಟಿ ಹೀರೋಯಿನ್ ರಶ್ಮಿಕಾ ಮಂದಣ್ಣ ತಮ್ಮ ಫೇಸ್ಬುಕ್'ನಲ್ಲಿ ಈ ಬಗ್ಗೆ ಬರೆಯುವ ಮೂಲಕ ರಕ್ಷಿತ್ ಶೆಟ್ಟಿ ಬರ್ತ್'ಡೇಗೆ ಸುಂದರ ಗಿಪ್ಟ್ ನೀಡಿದ್ದಾರೆ. "...ನಮ್ಮ ಪುಟ್ಟ ಪ್ಯಾಮಿಲಿಗೆ ಸ್ವಾಗತ" ಅಂದು ಹೇಳುವ ಮೂಲಕ ರಶ್ಮಿಕಾ ತನ್ನ ಪ್ರೀತಿಯ ಅಮಂತ್ರಣವನ್ನ ನಲ್ಲನಿಗೆ ನೀಡಿದ್ದಾರೆ.
ರಕ್ಷಿತ್ ಮತ್ತು ರಶ್ಮಿಕಾ ಅವರ ಎರಡೂ ಕುಟುಂದವರೂ ಈ ಮದುವೆಗೆ ತಥಾಸ್ತು ಎಂದಿದ್ದಾರೆ. ಜುಲೈ 3ರಂದು ಕೊಡಗಿನ ಕುಶಾಲನಗರದಲ್ಲಿ ಈ ಸುಂದರ ಜೋಡಿಯ ಎಂಗೇಜ್‍ಮೆಂಟ್ ನಡೆಯಲು ನಿಗದಿಯಾಗಿದೆ. 33 ವರ್ಷದ ರಕ್ಷಿತ್ ಮತ್ತು 21 ವರ್ಷದ ರಶ್ಮಿಕಾ ನವಜೀವನಕ್ಕೆ ಕಾಲಿಡುವ ಗಳಿಗೆ ಸಮೀಪಕ್ಕೆ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.