ದುರ್ಬುದ್ಧಿ...KGF ಸಿನಿಮಾ ಲೀಕ್.. ಒಳ್ಳೆ ಚಿತ್ರಕ್ಕೆ ತಪ್ಪದ ಪೈರಸಿ ಕಾಟ

Published : Dec 23, 2018, 04:14 PM ISTUpdated : Dec 23, 2018, 04:36 PM IST
ದುರ್ಬುದ್ಧಿ...KGF ಸಿನಿಮಾ ಲೀಕ್.. ಒಳ್ಳೆ ಚಿತ್ರಕ್ಕೆ ತಪ್ಪದ ಪೈರಸಿ ಕಾಟ

ಸಾರಾಂಶ

ಇಡೀ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿ ಮುಂದೆ ಸಾಗುತ್ತಿರುವ ರಾಕಿಂಗ್‌ ಸ್ಟಾರ್ ತರ್ಶ ಅಭಿನಯದ ಕೆಜಿಎಫ್ ಚಿತ್ರ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಆದರೆ ಕಿಡಿಗೇಡಿಗಳ ಕೈವಾಡದಿಂದ ಆನ್‌ ಲೈನ್‌ನಲ್ಲಿ ಲೀಕ್ ಆಗಿದೆ.

ಬೆಂಗಳೂರು[ಡಿ.23] ಹೊಸ ಇತಿಹಾಸಕ್ಕೆ ಕಾರಣವಾದ KGFನ ಹಿಂದಿ ಮತ್ತು ತೆಲುಗು ಅವತರಿಣಿಕೆಗಳು ಲೀಕ್ ಆಗಿವೆ. 

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಲೀಕ್ ಆಗಿದೆ. ಕಿಡಿಗೇಡಿಗಳು ಈ ಸಿನಿಮಾದಲ್ಲಿಯೂ ತಮ್ಮ ದುರ್ಬುದ್ಧಿ ತೋರಿಸಿದ್ದಾರೆ.

KGF ಸಿನಿಮಾ ಹೇಗಿದೆ? ಚಿತ್ರ ವಿಮರ್ಶೆ

 ಬಿಡುಗಡೆಯಾದ ದಿನವೇ ಥಿಯೇಟರ್ ನಲ್ಲಿ ಕಿಡಿಗೇಡಿಗಳು ಚಿತ್ರವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ. ಮೂವೀಜ್ ರೂಲ್ಸ್ ಎಂಬ ಮೂವಿ ವೆಬ್ ಸೈಟ್ ನಲ್ಲಿ ಕೆಜಿಎಫ್ ಚಿತ್ರದ ಪೂರ್ತಿ ವಿಡಿಯೋ ಲಿಂಕ್ ಅಪ್ಲೋಡ್ ಆಗಿದೆ.

ಕೆಜಿಎಫ್ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದ್ದ ತೆಲುಗಿನ ಅಂತರಿಕ್ಷಂ ಮತ್ತು ಪಡೀ ಪಡೀ ಲೇಚೆ ಮನಸು ಚಿತ್ರಗಳೂ ಕೂಡ ಲೀಕ್ ಆಗಿವೆ. ತಮಿಳಿನಲ್ಲಿ ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರಿ-2 ಕೂಡ ಲೀಕ್ ಆಗಿದ್ದು ತಂತ್ರಜ್ಞಾನವನ್ನು ಪೈರಸಿಗಾಗಿ ಬಳಸಿಕೊಳ್ಳುತ್ತಿರಿವುದು ಮಾತ್ರ ಸಿನಿಮಾ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!