
ಸ್ಯಾಂಡಲ್‌ವುಡ್ ನಿರ್ದೇಶಕರಾದ ಯೋಗರಾಜ್ ಭಟ್ (Yogaraj Bhat) ಹಾಗೂ ಅವರ ಶ್ರೀಮತಿಯವರು ನಟ-ನಿರೂಪಕ ಸೃಜನ್ ಲೋಕೇಶ್ (Srujan Lokesh) ಬಳಿ ಕಿರುತೆರೆ ಶೋ ಒಂದರಲ್ಲಿ ಮಾತುಕತೆಗೆ ಕುಳಿತಿದ್ದಾರೆ. ಆ ಮೂವರ ತಮಾಷೆ ಮಾತುಕತೆ, ಕಾಲೆಳೆದಿದ್ದು, ನಕ್ಕಿದ್ದು ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಹಳೆಯ ವಿಡಿಯೋ ಆಗಿದ್ದರೂ ನೀವು ನೋಡದೇ ಮಿಸ್ ಆಗಿದ್ದರಿಬಹುದು.. ಒಮ್ಮೆ ನೋಡಿದ್ದರೂ ಮತ್ತೊಮ್ಮೆ ನೋಡಿ ನಕ್ಕು ಹಗುರಾಗಿ..!
ಶಾಪಿಂಗ್ ಹೋಗ್ವಾಗ ನೀವು ನಮ್ಮ ಹೆಂಡ್ತಿ ಕೈ ಹಿಡ್ಕೊಂಡೇ ಹೋಗ್ತೀರಲ್ಲ.. ಅದು ಹೇಗೆ ಅಷ್ಟೊಂದು ಪ್ರೀತಿ ನಿಮ್ ಹೆಂಡ್ತಿ ಮೇಲೆ? ಅಂತ ಶೋದ ನಿರೂಪಕ ಸೃಜ್ ಲೋಕೇಶ್ ಕೇಳಿದ್ದಾರೆ. ಅದಕ್ಕೆ ನಿರ್ದೇಶಕ ಯೋಗರಾಜ್ ಭಟ್ಟರು, 'ಹಾಗೇನಿಲ್ಲ ಗುರೂ.. ಕೈ ಬಿಟ್ರೆ ಅಲ್ಲಿ ಅಂಗಡಿಗೆ ನುಗ್ಗಿಬಿಡ್ತಾಳೆ' ಅಂತ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಭಟ್ಟರ ಹೆಂಡತಿ 'ನಿಜವಾಗಿಯೂ ಇದು ತಪ್ಪು.. ಇವ್ರೇ ಅಂಗಡಿಗೆ ನುಗ್ಗೋದು.. ಹುಚ್ಚುಹುಚ್ಚಾಗಿ ಶಾಪಿಂಗ್ ಮಾಡ್ತಾರೆ.. ' ಅಂತ ಹೇಳಿದ್ದಾರೆ.
ತಮ್ಮ ಪತ್ನಿ ಮಾತಿಗೆ ಎದುರು ಉತ್ತರ ಕೊಟ್ಟ ಯೋಗರಾಜ್ ಭಟ್ಟರು 'ನೀನು ಅವೆಲ್ಲಾ ಹೇಳೋಕೆ ಹೋಗ್ಬೇಡ, ಅವ್ನೂ ಸಂಸಾರಸ್ಥ..' ಎಂದಿದ್ದಾರೆ. ಅಲ್ಲಿ ವೇದಿಕೆಯ ಕೆಳಗಡೆ ಇದ್ದೋರು ಬಿದ್ದು ಬಿದ್ದು ನಕ್ಕಿದ್ದಾರೆ. ಭಟ್ಟರ ಮಾತನ್ನು ಸಪೋರ್ಟ್ ಮಾಡುತ್ತ ನಟ-ನಿರೂಪಕ ಸೃಜನ್ ಲೋಕೇಶ್ ಅವರು 'ಹೌದು, ಆ ಅನುಭವ ನನಗಿದೆ ಬಿಡಿ.. ತುಂಬಾ ಶಾಕಿಂಗ್ ಎಕ್ಸ್‌ಪೀರಿಯನ್ಸ್ ಕೂಡ ಇದೆ..' ಎಂದಿದ್ದಾರೆ. ಅದಕ್ಕೆ ಭಟ್ಟರು, 'ಶಾಪಿಂಗ್ ಹೋಗೋದೇ ಶಾಕಿಂಗ್..' ಎಂದಿದ್ದಾರೆ. ಅದಕ್ಕೆ ಎಲ್ಲರೂ ನಕ್ಕಿದ್ದಾರೆ.
ಮುಂದುವರೆದ ಮಾತುಕತೆಯಲ್ಲಿ, ಆಂಕರ್ ಸೃಜನ್ ಅವರು 'ಲೇಡಿಸ್ ಶಾಪಿಂಗ್‌ನಲ್ಲಿ ಎಷ್ಟು ವಿಧ?' ಅಂತ ಯೋಗರಾಜ್ ಭಟ್ಟರಿಗೆಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಭಟ್ಟರು 'ಲೇಡಿಸ್ ಶಾಪಿಂಗ್‌ನಲ್ಲಿ ಎರಡೇ ವಿಧ' ಎಂದು ಹೇಳಿ ನಕ್ಕಿದ್ದಾರೆ. ತದನಂತರ ಭಟ್ಟರು 'ಒಂದು, ಈ ಕಲರ್‌ನಲ್ಲಿ ಬೇರೆ ಡಿಸೈನ್ ಇಲ್ವಾ? ಇನ್ನೊಂದು, ಈ ಡಿಸೈನ್‌ನಲ್ಲಿ ಬೇರೆ ಕಲರ್ ಇಲ್ವಾ?' ಅಂದಿದ್ದಾರೆ. ಅದಕ್ಕೆ ನಕ್ಕ ಭಟ್ಟರ ಮುದ್ದಿನ ಮಡದಿ ಕೂ ನಕ್ಕು ಅದು ಸುಳ್ಳಲ್ಲ ಭಟ್ಟರು ಹೇಳಿರುವ ಮಾತು ಎಂದು ಅದನ್ನು ಅನುಮೋದಿಸಿದ್ದಾರೆ. ಸೃಜನ್ ಅವರು ಅದಕ್ಕೆ 'ಕರೆಕ್ಟ್' ಎಂದಿದ್ದಾರೆ.
ಬಳಿಕ, ಸೃಜನ್ ಲೋಕೇಶ್ 'ನೀವು ಸಾಕಷ್ಟು ರೊಮ್ಯಾಂಟಿಕ್ ಹಾಗೂ ತರ್ಲೆ ಸಾಂಗ್‌ಗಳನ್ನು ಬರೆದಿದ್ದೀರಾ.. ಯಾವ್ಯಾವ ಸಾಂಗ್‌ನ ಬರೀಬೇಕಾದದ್ರೆ ನೀವು ನಿಮ್ಮ ಹೆಂಡ್ತಿನ ನೆನಪಿಸಿಕೊಂಡು ಬರೆದಿದ್ದೀರಾ..?' ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಭಟ್ಟರು 'ನಾ ಮನೆಗೆ ಹೋಗೋದಿಲ್ಲ.. ಬಾಗಿಲ ತೆಗೆಯೋದಿಲ್ಲ..' ಅಂತ ನಕ್ಕಿದ್ದಾರೆ. ಬಳಿಕ, ಭಟ್ಟರ ಪತ್ನಿ.. 'ರೊಮ್ಯಾಂಟಿಕ್ ಸಾಂಗ್‌ಗೆ ಯಾರನ್ನ ಜ್ಞಾಪಿಸಿಕೊಂಡು ಬರೀತೀರಾ ಅಂತ ಕೇಳಿ' ಎಂದಿದ್ದಾರೆ.
ಅದಕ್ಕೆ ಭಟ್ಟರು 'ಒಬ್ಳೂ ಕಾವ್ಯ ಕನ್ನಿಕೆ ಬರ್ತಾಳೆ ಕಣೋ ಕಣ್ಮುಂದೆ, ಅವ್ಳಿಗೆ ಮುಖ ಗಿಖ ಇಲ್ಲ..' ಎನ್ನುತ್ತಿದ್ದಂತೆ, ಸೃಜನ್ 'ಅಂದ್ರೆ, ಮುಖನೇ ಇಲ್ವಾ? ಅಂದ್ರೆ ಅಂತಂದು, ಸರಿ, ಫಿಲ್ ಇಂದ ಬ್ಲಾಂಕ್ಸ್.. ಓಕೆ ಓಕೆ' ಎಂದಿದ್ದಾರೆ. ಬಳಿಕ ಭಟ್ಟರು 'ಅವ್ಳು ಬೇಕಾದಾಗ ನಂಗೆ ಬೇಕಾದಂತೆ ಕಾಣಿಸ್ತಾಳೆ. ಐಟಂ ಸಾಂಗ್ ಬರೆಯುವಾಗ ನನಗೆ ತುಂಡುಡುಗೆ ಧರಿಸಿ ಬರ್ತಾಳೆ, ಶೃಂಗಾರದ ಸಾಂಗ್ ಬರೆಯುವಾಗ, ಪೌರಾಣಿಕ ಸಾಂಗ್ ಬರೆಯುವಾಗ ಕೂಡ ನಂಗೆ ಬೇಕಾದಂತೆ ಇರ್ತಾಳೆ.. ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..' ಎನ್ನುತ್ತಿದ್ದಂತೆ ಎಲ್ಲರೂ ನಕ್ಕಿದ್ದಾರೆ. ಇಲ್ಲಿಗೆ ಆ ವಿಡಿಯೋ ಮುಗಿದಿದೆ.. ಮುಂದೇನು ಹೇಳೋದು..?!
https://www.youtube.com/shorts/bie6l1t5Y6c?feature=share
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.