ರಾವಣನಾಗಲು ಯಶ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಬಿಚ್ಚಿಟ್ರು ಆ ರಹಸ್ಯ!

Published : Nov 11, 2026, 09:38 PM IST
Saniya Sardhariya

ಸಾರಾಂಶ

'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರಕ್ಕಾಗಿ ಯಶ್ ಧರಿಸಿದ್ದ ಕೆಲವು ಕಾಸ್ಟ್ಯೂಮ್‌ಗಳ ತೂಕ ಬರೋಬ್ಬರಿ 33 ಕೆಜಿ ಇತ್ತಂತೆ. ರಾವಣನ ಕಿರೀಟದ ತೂಕ 1.8 ಕೆಜಿ ಎಂದು ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಬಹಿರಂಗಪಡಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಅವರ ಲುಕ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ರಾವಣನ ಪಾತ್ರಕ್ಕೆ ತಕ್ಕಂತೆ ಅವರ ಗೆಟಪ್, ಆಭರಣಗಳು ಮತ್ತು ವೇಷಭೂಷಣಗಳನ್ನು ಅತ್ಯಂತ ಅದ್ಧೂರಿಯಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಲುಕ್‌ನ ಹಿಂದಿರುವ ಪರಿಶ್ರಮ ಎಷ್ಟು ದೊಡ್ಡದು ಗೊತ್ತಾ? ಯಶ್ ಧರಿಸಿದ್ದ ಕೆಲವು ಕಾಸ್ಟ್ಯೂಮ್‌ಗಳ ತೂಕ ಬರೋಬ್ಬರಿ 33 ಕೆಜಿ ತಲುಪಿತ್ತಂತೆ!

ಯಶ್ ಕಾಸ್ಟ್ಯೂಮ್ ತೂಕ ಬರೋಬ್ಬರಿ 33 ಕೆಜಿ!

'ರಾಮಾಯಣ' ಸಿನಿಮಾದಲ್ಲಿ ಯಶ್ ಅವರ ರಾವಣನ ಪಾತ್ರಕ್ಕೆ ವಿಶೇಷ ರೀತಿಯ ವೇಷಭೂಷಣಗಳನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ಚಿತ್ರದ ಕಾಸ್ಟ್ಯೂಮ್ ಸ್ಟೈಲಿಸ್ಟ್ ಮತ್ತು ಡಿಸೈನರ್ ಸಾನಿಯಾ ಸರ್ದಾರಿಯಾ ಅವರು 'ಇಂಡಿಯಾ ಟುಡೇ' ಜೊತೆಗಿನ ವಿಶೇಷ ಸಂದರ್ಶನದಲ್ಲಿ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅವರ ಪ್ರಕಾರ, ಯಶ್ ಧರಿಸುತ್ತಿದ್ದ ಬಹುತೇಕ ಕಾಸ್ಟ್ಯೂಮ್‌ಗಳು ಹಾಗೂ ಅದಕ್ಕೆ ಹೊಂದಿಕೆಯಾಗುವ ಭಾರೀ ಆಭರಣಗಳ ತೂಕ ಸುಮಾರು 16ರಿಂದ 20 ಕೆಜಿಯಷ್ಟಿತ್ತು. ಆದರೆ ಲಂಕೆಯ ರಾವಣನ ಲುಕ್, ವಿವಾಹದ ದೃಶ್ಯಗಳು ಹಾಗೂ ಶೂರ್ಪನಖಿಯ ವಿವಾಹದ ಸನ್ನಿವೇಶಗಳಿಗಾಗಿ ವಿನ್ಯಾಸಗೊಳಿಸಿದ್ದ ಕೆಲವು ವಿಶೇಷ ವೇಷಭೂಷಣಗಳ ತೂಕ ಬರೋಬ್ಬರಿ 30ರಿಂದ 33 ಕೆಜಿಯವರೆಗೆ ಇತ್ತಂತೆ.

ರಾವಣನ ಕಿರೀಟವೊಂದರ ತೂಕವೇ 1.8 ಕೆಜಿ!

ಕಾಸ್ಟ್ಯೂಮ್‌ಗಳ ತೂಕ ಮಾತ್ರವಲ್ಲ, ಯಶ್ ಧರಿಸುತ್ತಿದ್ದ ರಾವಣನ ಕಿರೀಟವೂ ಸಾಕಷ್ಟು ಭಾರವಾಗಿತ್ತಂತೆ. ಆ ಕಿರೀಟದ ತೂಕ ಸುಮಾರು 1.8 ಕೆಜಿ ಎಂದು ಸಾನಿಯಾ ಬಹಿರಂಗಪಡಿಸಿದ್ದಾರೆ. ಕಿರೀಟದ ತೂಕವನ್ನು ಕಡಿಮೆ ಮಾಡಲು ವಿನ್ಯಾಸ ತಂಡ ಹಲವು ಬಾರಿ ಪ್ರಯತ್ನಿಸಿದರೂ, ಅದರ ವಿನ್ಯಾಸ ಮತ್ತು ಅದ್ಧೂರಿತನವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿತ್ತು.

ಭಾರೀ ಕಾಸ್ಟ್ಯೂಮ್‌ಗಳು, ಸೂಕ್ಷ್ಮ ವಿನ್ಯಾಸದ ಆಭರಣಗಳು ಮತ್ತು ಪ್ರಾಸ್ಥೆಟಿಕ್ಸ್‌ಗಳ ಸಂಯೋಜನೆಯಿಂದ ಯಶ್ ಅವರ ರಾವಣನ ಗೆಟಪ್ ಸಿದ್ಧಪಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ತೆರೆಮೇಲೆ ಅದ್ಭುತವಾಗಿ ಕಾಣಿಸುವ ಪ್ರತಿಯೊಂದು ದೃಶ್ಯದ ಹಿಂದೆ ಎಷ್ಟೊಂದು ಪರಿಶ್ರಮ ಅಡಗಿದೆ ಎಂಬುದಕ್ಕೆ ಈ ವಿವರಗಳೇ ಸಾಕ್ಷಿ.

ಸೆಟ್‌ನಲ್ಲಿ ಎಲ್ಲರನ್ನೂ ನಗಿಸುತ್ತಿದ್ದ ಯಶ್!

ಯಶ್ ಅವರ ವೃತ್ತಿಪರ ಬದ್ಧತೆಯ ಬಗ್ಗೆಯೂ ಸಾನಿಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾವಣನ ಪಾತ್ರದ ವಿನ್ಯಾಸ ಪ್ರಕ್ರಿಯೆಯಲ್ಲಿ ಯಶ್ ಕೂಡ ಸಕ್ರಿಯವಾಗಿ ಭಾಗವಹಿಸುತ್ತಿದ್ದರಂತೆ. ಇಷ್ಟೊಂದು ಭಾರವಾದ ವೇಷಭೂಷಣಗಳನ್ನು ಧರಿಸುವುದರಿಂದ ದೈಹಿಕವಾಗಿ ಸಾಕಷ್ಟು ಕಷ್ಟವಾಗುತ್ತಿದ್ದರೂ, ಸೆಟ್‌ನಲ್ಲಿ ಮಾತ್ರ ಅವರು ಸದಾ ಉತ್ಸಾಹದಿಂದ ಇರುತ್ತಿದ್ದರಂತೆ.

ಚಿತ್ರೀಕರಣದ ವಿಳಂಬ, ದೀರ್ಘಕಾಲದ ಶೂಟಿಂಗ್ ವೇಳಾಪಟ್ಟಿ ಮತ್ತು ಭಾರೀ ಕಾಸ್ಟ್ಯೂಮ್‌ಗಳಿಂದ ಉಂಟಾಗುವ ದೈಹಿಕ ಆಯಾಸದ ನಡುವೆಯೂ ಯಶ್ ಸೆಟ್‌ನ ವಾತಾವರಣವನ್ನು ಹಗುರವಾಗಿಡುತ್ತಿದ್ದರು. ತಮ್ಮ ಹಾಸ್ಯಮಯ ಮಾತುಗಳಿಂದ ಚಿತ್ರತಂಡದವರನ್ನು ನಗಿಸುತ್ತಾ, ಎಲ್ಲರಿಗೂ ಉತ್ಸಾಹ ತುಂಬುತ್ತಿದ್ದರು ಎಂದು ಸಾನಿಯಾ ನೆನಪಿಸಿಕೊಂಡಿದ್ದಾರೆ.

ಇನ್ನು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನು ತೆರೆಮೇಲೆ ಜೀವಂತವಾಗಿಸಲು ಯಶ್ ಮಾಡಿರುವ ಸಿದ್ಧತೆ ಮತ್ತು ಕಾಸ್ಟ್ಯೂಮ್ ವಿನ್ಯಾಸ ತಂಡದ ಪರಿಶ್ರಮ ನಿಜಕ್ಕೂ ವಿಶೇಷವಾಗಿದೆ. 33 ಕೆಜಿ ತೂಕದ ವೇಷಭೂಷಣದಿಂದ ಹಿಡಿದು 1.8 ಕೆಜಿ ಕಿರೀಟದವರೆಗೆ ಪ್ರತಿಯೊಂದು ವಿಚಾರವೂ ಚಿತ್ರದ ಮೇಕಿಂಗ್ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ವನವಾಸಕ್ಕೆ ಕೊನೆ ಇಲ್ವಾ? ಹೆಣ್ಣು ಮತ್ತೆ ಮದ್ವೆಯಾಗಬಾರದಾ, ಇದ್ಯಾವ ನ್ಯಾಯ? ಪವನ್​ ಕಲ್ಯಾಣ್​ ಮಾಜಿ ಪತ್ನಿ ಪ್ರಶ್ನೆ
Amurthadhaare ಶಕುಂತಲಾ ‌ಅರೆಸ್ಟ್‌: ಜೈಲಿಗೆ ಹೋಗೋ ಮುನ್ನ ಸೀರಿಯಲ್‌ ತಾರೆಯರ ಜೊತೆ ಫೋಟೋಶೂಟ್‌