ಯಶ್ ಬಗ್ಗೆ ಅಪ್ಪು ನುಡಿದಿದ್ದ ಆ ಭವಿಷ್ಯ ನಿಜವಾಯ್ತು! ಪುನೀತ್ ಸುವರ್ಣ ನ್ಯೂಸ್ ಸಂದರ್ಶನ ವೈರಲ್!

Published : Nov 09, 2026, 12:20 PM IST
Puneeth Raj kumar Yash Future prediction

ಸಾರಾಂಶ

ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಿಸುತ್ತಿರುವ ಬೆನ್ನಲ್ಲೇ, ಪುನೀತ್ ರಾಜ್‌ಕುಮಾರ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಯಶ್ ಪೌರಾಣಿಕ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸುತ್ತಾರೆ ಎಂಬ ಅಪ್ಪು ಮಾತು ಇಂದು ನಿಜವಾಗಿದೆ ಎಂದು ಅಭಿಮಾನಿಗಳು ಭಾವುಕರಾಗಿದ್ದಾರೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ (Ramayana Movie) ಸಿನಿಮಾದಲ್ಲಿ ಲಂಕಾಧಿಪತಿ ‘ರಾವಣ’ನಾಗಿ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯಿಸಿ ಜಗತ್ತಿನಾದ್ಯಂತ ಹೊಸ ಸಂಚಲನ ಸೃಷ್ಟಿಸಿದ್ದಾರೆ. ರಾವಣನ ಪಾತ್ರಕ್ಕೆ ಯಶ್ ನೀಡಿದ ಗಾಂಭೀರ್ಯ, ರೌದ್ರಾವತಾರದ ಆರ್ಭಟ ಮತ್ತು ಅಭಿನಯವನ್ನು ಕಂಡು ಇಡೀ ದೇಶದ ಚಿತ್ರಪ್ರೇಮಿಗಳು ಕೊಂಡಾಡುತ್ತಿದ್ದಾರೆ.

ಈ ಮಹಾನ್ ಯಶಸ್ಸಿನ ನಡುವೆ, ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಹಿಂದೆ ಹೇಳಿದ್ದ ಮಾತುಗಳನ್ನೊಳಗೊಂಡ ವಿಡಿಯೋವೊಂದು ಫೇಸ್‌ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಅಪ್ಪು ಹೇಳಿದ್ದೇನು?

ಖಾಸಗಿ ಸುದ್ದಿ ವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಅಪ್ಪು ಅವರಲ್ಲಿ "ಯಶ್ ಅವರಿಗೆ ಯಾವ ರೀತಿಯ ಪಾತ್ರ ಸೂಕ್ತ?" ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ಪುನೀತ್, "ಯಶ್ ಅವರ ಗಡ್ಡ, ಕೂದಲಿನ ಉದ್ದ ಹಾಗೂ ಅವರ ಮುಖದ ಶೈಲಿಯನ್ನು ನೋಡಿದರೆ, ಅವರು ಯಾವುದಾದರೂ ಮೈಥಾಲಾಜಿಕಲ್ (ಪೌರಾಣಿಕ) ಅಥವಾ ಐತಿಹಾಸಿಕ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದರೆ ಅತ್ಯದ್ಭುತವಾಗಿ ಒಪ್ಪುತ್ತಾರೆ" ಎಂದು ಹೇಳಿದ್ದರು.

ಅಂದು ಅಪ್ಪು ಊಹಿಸಿದ್ದಂತೆಯೇ, ಇಂದು ಯಶ್ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸಿ ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಹಾಗೂ ಭಾರತೀಯ ಚಿತ್ರರಂಗದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ.

ಅಪ್ಪು ಹೇಳಿದ 2 ಮಾತುಗಳು ನಿಜವಾಯ್ತು ಎಂದ ಅಭಿಮಾನಿಗಳು!

ಫೇಸ್‌ಬುಕ್‌ನಲ್ಲಿ ಪುನೀತ್ ರಾಜ್‌ಕುಮಾರ್ ಫ್ಯಾನ್ ಪೇಜ್ ಹಂಚಿಕೊಂಡಿರುವ ಈ ಹಳೆಯ ಸಂದರ್ಶನದ ವಿಡಿಯೋ ತುಣುಕು ಹಾಗೂ ‘ರಾಮಾಯಣ’ ಸಿನಿಮಾದ ಯಶ್ ಅವರ ರಾವಣನ ಅವತಾರದ ವಿಡಿಯೋ ಮಿಕ್ಸ್ ಮಾಡಿದ ಪೋಸ್ಟ್‌ಗೆ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದುಬರುತ್ತಿವೆ.

ಇದಕ್ಕೆ ಅಭಿಮಾನಿಯೊಬ್ಬರು ಭಾವುಕರಾಗಿ ಕಾಮೆಂಟ್ ಮಾಡಿದ್ದು:

"ಅಪ್ಪು ಸರ್ ಹೇಳಿದ 2 ಮಾತುಗಳು ಅಕ್ಷರಶಃ ನಿಜವಾಗಿವೆ. ಮೊದಲನೆಯದ್ದು, 'ದೊಡ್ಮನೆ ಹುಡುಗ' ಸಿನಿಮಾದಲ್ಲಿ 'ನೀನ್ ಡಾಕ್ಟರ್ ಹಾ..?' ಅಂದಾಗ 'ಮುಂದೆ ಕರೀಬೋದು' ಎಂದಿದ್ದರು, ಅದು ಅವರಿಗೆ ಗೌರವ ಡಾಕ್ಟರೇಟ್ ಸಿಗುವ ಮೂಲಕ ನಿಜವಾಯಿತು. ಎರಡನೆಯದ್ದು, ಯಶ್ ಪೌರಾಣಿಕ ಪಾತ್ರ ಮಾಡಿದರೆ ಚೆನ್ನಾಗಿರುತ್ತೆ ಎಂದಿದ್ದರು, ಅದು ಇಂದು ರಾವಣನ ಪಾತ್ರದ ಮೂಲಕ ಸತ್ಯವಾಗಿದೆ. ಅದಕ್ಕೇ ಅವರನ್ನ ದೇವರು ಅನ್ನೋದು" ಎಂದು ಕಣ್ಣೀರಿಟ್ಟಿದ್ದಾರೆ.

ಹಲವು ಭಾಷೆಗಳಲ್ಲಿ ರಾಮಾಯಣ ಆಧಾರಿತ ಚಿತ್ರಗಳು ಬಂದಿದ್ದರೂ, ಯಶ್ ಅವರಿಗಿಂತ ಉತ್ತಮವಾಗಿ ರಾವಣನ ಪಾತ್ರಕ್ಕೆ ಬೇರಾರೂ ಜೀವ ತುಂಬಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗುಗೆ ಜನ್ಮ ನೀಡಿ ಪ್ರಾಣ ಬಿಟ್ಟ ನಿತ್ಯಾ? ಒಡಲಾಳದಲ್ಲಿರೋ ಎರಡು ಕಠೋರ ಸತ್ಯ ಹೊರ ಬಂತಾ?
ಆಟಕ್ಕುಂಟು ಲೆಕ್ಕಕ್ಕಿಲ್ಲ.. ಇದು ಈ ಸ್ಟಾರ್ ನಟಿ ಪ್ರತಿಭೆಗೆ ಮಾಡಿದ ಭಾರೀ ಮೋಸ ಎಂಬ ಆಕ್ರೋಶ!