
ಭಾರತದ ಅತ್ಯಂತ ಹೆಸರುವಾಸಿಯಾಗಿರುವ, ಅದರಲ್ಲಿಯೂ ಸಕಾರಾತ್ಮಕವಾದ ಅಂಶಗಳು ಇರುವ ಬೆರಳೆಣಿಕೆಯಷ್ಟು ರಿಯಾಲಿಟಿ ಷೋಗಳಲ್ಲಿ ಒಂದು ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರು ನಡೆಸಿಕೊಡುವ ಆಪ್ ಕೀ ಅದಾಲತ್ (Aap Ki Adalat). ಇದರಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಬಂದಿದ್ದಾರೆ. ಆ ಸೀಟಿನಲ್ಲಿ ಈಗ ಕುಳಿತವರು ನಟ ಯಶ್. ಈ ಹಾಟ್ ಸೀಟ್ನಲ್ಲಿ ಕುಳಿತ ಕನ್ನಡದ ಮೊದಲ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆ ಅವರದ್ದು. ಈ ಷೋನಲ್ಲಿ ರಜತ್ ಶರ್ಮಾ (Rajat Sharma) ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಯಶ್ ಅವರು ಉತ್ತರಿಸಿದ್ದಾರೆ. ತಮ್ಮ ಸಿನಿಮಾ ಜರ್ನಿ, ಪರ್ಸನಲ್ ಲೈಫ್ ಎಲ್ಲವುಗಳ ಮೇಲೆ ನಟ ಬೆಳಕು ಚೆಲ್ಲಿದ್ದಾರೆ.
ಇದರಲ್ಲಿ ಒಂದು ಕುತೂಹಲದ ಪ್ರಶ್ನೆಯನ್ನು ಯಶ್ ಅವರಿಗೆ ಕೇಳಲಾಗಿದೆ. ಅಷ್ಟಕ್ಕೂ ರಜತ್ ಶರ್ಮಾ ಅವರು ಯಾವುದೇ ಸೆಲೆಬ್ರಿಟಿ ಈ ಸೀಟಿಗೆ ಬರುವಾಗ, ಅವರ ಪೂರ್ವಪರ ಎಲ್ಲವನ್ನೂ ಸಾಕಷ್ಟು ಅಧ್ಯಯನ ಮಾಡಿರುತ್ತಾರೆ. ಅವರ ಪ್ರತಿಯೊಂದು ವಿಷಯಗಳನ್ನೂ ಅಧ್ಯಯನ ಮಾಡಿ, ಕೆಲವೊಮ್ಮೆ ಮಾತಿನಲ್ಲಿ ಸಿಲುಕಿಸಿಬಿಡುತ್ತಾರೆ. ಅವರು ಕೇಳುವ ಪ್ರಶ್ನೆಗೆ ಎಷ್ಟೋ ಮಂದಿ ಉತ್ತರಿಸಲು ಆಗದೇ ಚಡಪಡಿಸುವುದೂ ಇದೆ. ಆದರೆ ಯಶ್ ಅವರು ಎಲ್ಲಾ ಪ್ರಶ್ನೆಗಳಿಗೂ ಫಟಾಫಟ್ ಉತ್ತರ ಕೊಟ್ಟರೂ, ಈ ಒಂದು ಪ್ರಶ್ನೆ ಕೇಳಿದಾಗ, ಸ್ವಲ್ಪ ಸಮಯ ವಿಚಲಿತರಾದರು.
ಅದೇ ನಟ ಶಾರುಖ್ ಖಾನ್ (Shah rukh Khan) ಕುರಿತ ಪ್ರಶ್ನೆ. ನಿಮಗೆ ಶಾರುಖ್ ಖಾನ್ ಅಂದ್ರೆ ತುಂಬಾ ಇಷ್ಟವಾಗಿತ್ತಲ್ವಾ ಎಂದಾಗ ಯಶ್, ಕೂಡಲೇ ಈಗಲೂ ಇಷ್ಟ ಎಂದು ನಕ್ಕರು. ಅದಕ್ಕೆ ರಜತ್ ಶರ್ಮಾ ಅವರು, ನನಗೆ ತಿಳಿದಿರುವ ಪ್ರಕಾರ, ನೀವು ಶಾರುಖ್ ಖಾನ್ ಅವರನ್ನು ಮೀಟ್ ಮಾಡಲು ಡೇಟ್ ಕೇಳಿದ್ದರಂತೆ. ಆದರೆ ಅವರು ಕೊಟ್ಟಿರಲಿಲ್ಲವಂತೆ ಎಂದಾಗ ಯಶ್ ನಕ್ಕರು. ಅಲ್ಲಿಗೇ ಸುಮ್ಮನಾಗದ ರಜತ್ ಶರ್ಮಾ ಅವರು, ನೀವು ಇದೇ ಕಾರಣಕ್ಕೆ, ಶಾರುಖ್ ಖಾನ್ ಅವರ ಚಿತ್ರಕ್ಕೇ ಠಕ್ಕರ್ ಕೊಟ್ಟಿರಿ ಎನ್ನೋದು ನಿಜನಾ ಎಂದು ಯಶ್ ಸ್ವಲ್ಪ ಗಲಿಬಿಲಿಗೊಂಡರು. ಅದಕ್ಕೆ ರಜತ್ ಶರ್ಮಾ ಅವರು, ನೀವು ಅದಕ್ಕಾಗಿಯೇ ಶಾರುಖ್ ಅವರ ಜೀರೋ ಫಿಲ್ಮ್ ರಿಲೀಸ್ ಆದಾಗಲೇ, ನಿಮ್ಮ ಕೆಜಿಎಫ್ ಚಿತ್ರವನ್ನೂ ರಿಲೀಸ್ ಮಾಡಿ ಠಕ್ಕರ್ ಕೊಟ್ಟಿರಂತೆ ಹೌದಾ ಎಂದು ಪ್ರಶ್ನಿಸಿದರು.
ಇದಕ್ಕೆ ಜೋರಾಗಿ ನಕ್ಕ ಯಶ್ ಅವರು, ಹಾಗೇನೂ ಇಲ್ಲ. ನಮ್ಮದು ಚಿಕ್ಕ ಫಿಲ್ಮ್, ಶಾರುಖ್ ಸರ್ ಅವರದ್ದು ದೊಡ್ಡ ಫಿಲ್ಮ್. ಠಕ್ಕರ್ ಏನೂ ಇಲ್ಲ ಎಂದಾಗ, ರಜತ್ ಶರ್ಮಾ ಅವರು ಅಷ್ಟೇ ಕೂಲಾಗಿ, ನಿಮ್ಮ ಸಿನಿಮಾ 250 ಕೋಟಿ ಗಳಿಸಿತು, ಅವರ ಸಿನಿಮಾ ನೂರು ಕೋಟಿ ಗಳಿಸಿತು ಎಂದಾಗ ಯಶ್ ನಿರುತ್ತರರಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.