
ರಾಕಿಂಗ್ ಸ್ಟಾರ್ ಯಶ್ ಕುಂತ್ರು ನಿಂತ್ರು ಈಗ ಸಿನಿಮಾ ಜಗತ್ತಲ್ಲಿ ಸುದ್ದಿನೆ. ಯಾಕಂದ್ರೆ ರಾಕಿ ಸಂಪಾದಿಸಿರೋ ಇಮೇಜ್ ಅಂತಾದ್ದು. ಹೀಗಾಗೆ ರಾಕಿಯ ಗಡ್ಡದ ವಿಷಯ ಕೂಡ ಮುಂಬೈನಿಂದ ಕರ್ನಾಟಕದ ವರೆಗೂ ಗದ್ದಲ ಎಬ್ಬಿಸುತ್ತೆ. ಯಾವ್ ಮಟ್ಟಕ್ಕೆ ಅಂದ್ರೆ ಯಶ್‌ಗೆ ಗಡ್ಡ ಇಲ್ಲದಿದ್ರೆ ಸಿನಿಮಾದ ಶೂಟಿಂಗ್ ಕೂಡ ನಿಂತು ಹೋಗುತ್ತೆ. ಯಶ್ರನ್ನ ನಂಬಿದ್ದ ನಿರ್ಮಾಪಕರೊಬ್ರು ಈಗ ರಾಕಿ ಮುಖದ ಮೇಲೆ ಗಡ್ಡ ಇಲ್ಲ ಅಂತ ತಲೆ ಕೆಡಿಸಿಕೊಂಡಿದ್ದಾರೆ. ಹಾಗಾದ್ರೆ ಅದ್ಯಾವ ಸಿನಿಮಾ? ಏನಿದು ಯಶ್ ಗಡ್ಡದ ಕತೆ ನೋಡೋಣ ಬನ್ನಿ.
ಕೆಲವೊಂದು ಸಿನಿಮಾಗಳು ಕೆಲ ಹೀರೋಗಳು ಯಾವ್ ಮಟ್ಟಕ್ಕೆ ಸಿನಿ ಪ್ರೇಕ್ಷಕರ ಮೇಲೆ ಇಂಪ್ಯಾಕ್ಟ್ ಮಾಡುತ್ತವೆ ಅನ್ನೋದಕ್ಕೆ ಯಶ್‌ರ ಗಡ್ಡದ ಸ್ಟೈಲ್ ಸಾಕ್ಷಿ. ಕೆಜಿಎಫ್ನಲ್ಲಿ ಯಶ್ ಗಡ್ಡದ ಲುಕ್ ಇಂದಿಗೂ ಟ್ರೆಂಡ್. ಯಶ್‌ಗೆ ಉದ್ದನೆಯ ದಾಡಿ ಇದ್ರೇನೆ ಚಂದ ಅಂತ ಹೇಳೋ ಎಷ್ಟೋ ಜನರಿದ್ದಾರೆ. ಅಷ್ಟೆ ಅಲ್ಲ ಈ ಉದ್ದನೆಯ ದಾಡಿ ಇಂದಲೇ ರಾಕಿಗೆ ದೊಡ್ಡ ದೊಡ್ಡ ಅವಕಾಶಗಳು ಹುಡುಕಿ ಬಂದಿದ್ದು ಇದೆ.
ಹೌದು, ಯಶ್ ಗಡ್ಡದ ಲುಕ್ ಮೇಲೆ ಸಿನಿಮಾ ಮೇಕರ್ಸ್ ಈಗ ಎಷ್ಟು ಡಿಪೆಂಡ್ ಆಗಿದ್ದಾರೆ ಅಂದ್ರೆ ರಾಕಿ ಮುಖದ ಮೇಲೆ ದಾಡಿ ಇಲ್ಲದಿದ್ರೆ ಶೂಟಿಂಗ್ಅನ್ನೇ ಶುರು ಮಾಡೋಲ್ಲ ಎನ್ನುತ್ತಿದ್ದಾರೆ. ಮತ್ತೆ ಹಳೇ ಗಡ್ಡದ ಲುಕ್‌ಗೆ ಯಶ್ ಬರಲಿ ಆ ಮೇಲೆ ಚಿತ್ರೀಕರಣ ಮಾಡೋಣ ಎನ್ನುತ್ತಾರೆ ಪ್ರೊಡ್ಯೂಸರ್ಸ್.. ಈಗ ರಾಕಿಯ ರಾಮಾಯಣ ಪಾರ್ಟ್-2 ಸಿನಿಮಾದ ಶೂಟಿಂಗ್ ಕೂಡ ಇದೇ ಗಡ್ಡದ ವಿಷಯಕ್ಕೆ ನಿಂತು ಹೋಗಿದೆ.
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ನಲ್ಲಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿದ್ದಾರೆ. ಅದರಲ್ಲಿ ಒಂದು ಉದ್ದನೆ ಗಡ್ಡ ಬಿಟ್ಟಿರೋ ಲುಕ್ ಆದ್ರೆ ಮತ್ತೊಂದು ಕ್ಲೀನ್ ಶೇವ್ ಮಾಡಿರೋ ಅವತಾರ. ಈ ಕ್ಲೀನ್ ಶೇವ್‌ನಲ್ಲಿ ಯಶ್ರನ್ನ ನೋಡಿ ಬರೋಬ್ಬರಿ 8 ವರ್ಷ ಆಗಿತ್ತು. ಯಶ್‌ರ ಗಡ್ಡದಲ್ಲಿ ನೋಡಿ ನೋಡಿ ಸ್ವತಹ ರಾಧಿಕಾ ಪಂಡಿತ್‌ಗೆ ಜಿಗುಪ್ಸೆ ಆಗೋ ಹಾಗಿತ್ತು. ಯಶ್ ಒಮ್ಮೆ ಗಡ್ಡ ತೆಗೆದಿದ್ದೇ ತಡ ರಾಧಿಕಾ ಖುಷಿಗೆ ಪಾರವೇ ಇರಲಿಲ್ಲ.
ಈಗ ಯಶ್ ಮುಖದ ಮೇಲೆ ಗಡ್ಡ ಇಲ್ಲ. ರಾಕಿ ಮತ್ತೊಂದು ಸ್ಟೈಲೀಶ್ ಲುಕ್‌ನಲ್ಲಿ ಕಿರಾತಕ ಸಿನಿಮಾದ ಯಶ್‌ರ ಹಾಗೆ ಕಾಣಿಸುತ್ತಿದ್ದಾರೆ. ಈ ಮ್ಯಾಚೋ ಲುಕ್‌ಗೆ ಆಲ್ ಮೋಸ್ಟ್ ಮತ್ತೆ ಎಲ್ಲರೂ ಬೌಲ್ಡ್ ಆಗುತ್ತಿದ್ದಾರೆ. ಆದ್ರೆ ರಾಕಿಯ ಕ್ಲೀನ್ ಶೇವ್ ನಿಂದ ರಾಮಾಯಣ ಪಾರ್ಟ್ 2 ಸಿನಿಮಾ ಶೂಟಿಂಗೇ ನಿಂತು ಹೋಗಿದೆ.
ರಾಮಾಯಣದಲ್ಲಿ ಯಶ್ರದ್ದು ರಾವಣನ ರೋಲ್. ಹೀಗಾಗಿ ಉದ್ದ ಗಡ್ಡ ಯಶ್‌ಗೆ ಬೇಕೇ ಬೇಕು, ಆದ್ರೆ ಟಾಕ್ಸಿಕ್ ಹಡಗು ಹತ್ತಿರೋ ರಾಕಿ ಸಧ್ಯಕ್ಕೆ ಆ ಲುಕ್‌ಗೆ ಮರಳೋಕೆ ಸಾಧ್ಯವಿಲ್ಲ. ಹೀಗಾಗಿ ರಾಮಾಯಣ ಪಾರ್ಟ್2 ಚಿತ್ರೀಕರಣವನ್ನ ನಿಲ್ಲಿಸಲಾಗಿದೆ. ಟಾಕ್ಸಿಕ್ ಸಿನಿಮಾದ ರೀ ಶೂಟ್ ಮಾಡಲಾಗ್ತಿದೆ. ಇನ್ನು ನಾಲ್ಕು ತಿಂಗಳು ಯಶ್ ಹಳೇ ಲುಕ್‌ಗೆ ಮರಳಿದ ಮೇಲೆ ರಾಮಾಯಣ ಪಾರ್ಟ್2 ಶೂಟಿಂಗ್ ಆರಂಭ ಆಗುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.