
ಅದ್ಯಾಕೋ ಗೊತ್ತಿಲ್ಲ. ನಟ ದರ್ಶನ್ ಹಾಗು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಮಧ್ಯೆ ಪದೇ ಪದೇ ಬೆಂಕಿ ಹೊತ್ತಿಕೊಳ್ತಾನೆ ಇದೆ. ನಟ ದರ್ಶನ್ ಜೈಲಿನಿಂದ ಹೊರಗಿದ್ದಕ್ಕೆ ಸುಖಾಸುಮ್ಮನೇ ಅಪ್ಪು ಲ್ಯಾಂಬೋರ್ಗಿನಿ ಬಗ್ಗೆ ಮಾತಾಡಿ ಇಬ್ಬರ ಮಧ್ಯೆ ಯಾವ್ದೂ ಸರಿ ಇಲ್ವಾ ಅನ್ನೋ ಪ್ರಶ್ನೆ ಹುಟ್ಟುಹಾಕಿದ್ರು. ಈ ಪ್ರಶ್ನೆಯನ್ನ ಮತ್ತೆ ಮತ್ತೆ ಫ್ಯಾನ್ಸ್ ಮನದಲ್ಲಿ ಗುನುಗುವಂತೆ ಘಟನೆಗಳು ಮರುಕಳಿಸುತ್ತಿವೆ. ಈಗ ಆಕಾಶ್ ವರ್ಸಸ್ ಡೆವಿಲ್ ಅನ್ನೋ ಮೆಗಾ ಫೈಟ್ ಒಂದು ಏರ್ಪಟ್ಟಿದೆ. ಹಾಗಾದ್ರೆ ಏನಿದು ಆಕಾಶ್ ಡೆವಿಲ್ ಮೆಗಾ ಫೈಟ್. ನೋಡೋಣ ಬನ್ನಿ.
ಯೆಸ್, ನಟ ದರ್ಶನ್ ಈಗ ವಿವಾದಿತ ನಟ. ಈಗಲ್ಲ ದರ್ಶನ್ ಯಾವಾಗ್ಲೂ ವಿವಾದಿತ ನಟನೇ. ಯಾಕಂದ್ರೆ ನಟ ದರ್ಶನ್ ಬಾಕ್ಸಾಫೀಸ್ನಲ್ಲಿ ಬೆಳ್ಳಿತೆರೆ ಮೇಲೆ ಹೇಗೆಲ್ಲಾ ಒಳ್ಳೊಳ್ಳೆ ರೆಕಾರ್ಡ್ ಬೆರೆದಿದ್ದಾರೋ ಹಾಗೆ ನಿಜ ಜೀವನದಲ್ಲಿ ಬೇಡದ ರೆಕಾರ್ಡ್ಗಳನ್ನೆಲ್ಲಾ ಬರೆದು ಬಿಟ್ಟಿದ್ದಾರೆ. ಅದು ಗಂಡ ಹೆಂಡತಿ ವಿಷಯದಿಂದ ಹಿಡಿದು ತಮ್ಮ ಚಿತ್ರರಂಗದ ಸಹಪಾಠಿಗಳ ಜೊತೆಗಾದ ಘಟನೆಗಳೇ ಇದಕ್ಕೆ ಸಾಕ್ಷಿ.
ಯೆಸ್, ನಟ ದರ್ಶನ್ ಹಾಗು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಧ್ಯೆ ಎಷ್ಟು ಧ್ವೇಷ ಇತ್ತು ಅನ್ನೋದಕ್ಕೆ ಮೈಸೂರಿನ ತೋಟದ ಮನೆಯಲ್ಲಿ ಅಪ್ಪು ಲೈಫ್ ಸ್ಟೈಲ್ ಬಗ್ಗೆ ದರ್ಶನ್ ಮಾತನಾಡಿದ್ದು ಎಂದೂ ಮರೆಯಲು ಸಾಧ್ಯವಿಲ್ಲ. ಸಂಬಂದವೇ ಇಲ್ಲದ ವಿಷಯಕ್ಕೆ ದೊಡ್ಮನೆ ಹುಡುಗನ ಹೆಸರು ಎಳೆದು ತಂದು ಪುನೀತ್ ರಾಜ್ ಕುಮಾರ್ ಬಳಿ ಇರೋ ಲ್ಯಾಂಬೋರ್ಗಿನಿ ಕಾರು ನನ್ನ ಬಳಿಯೂ ಇದೆ ಅಂದಿದ್ರು..
ದರ್ಶನ್ ಆವತ್ತು ಪುನೀತ್ ಕಾರಿನ ಬಗ್ಗೆ ಮಾತಾಡಿದ್ದಕ್ಕೆ ಇಡೀ ಅಪ್ಪು ಬಳಗ ಬಹಳಾ ಬೇಸರಗೊಂಡಿತ್ತು. ಆದ್ರೆ ಅಪ್ಪು ಮಾತ್ರ ಎಲ್ಲಿಯೂ ಆ ಬಗ್ಗೆ ತುಟಿ ಬಿಚ್ಚಲಿಲ್ಲ. ಈಗ ಪವರ್ ಸ್ಟಾರ್ ನಮ್ಮೊಂದಿಲ್ಲ. ಆದ್ರೂ ದರ್ಶನ್ ಅಪ್ಪು ಜೊತೆ ಸಿನಿಮಾ ಯುದ್ಧ ಸಾರುತ್ತಲೇ ಇದ್ದಾರೆ ಅಂತ ಗಾಂಧಿನಗರ ಮಾತಾಡುತ್ತಿದೆ. ಅದಕ್ಕೆ ಕಾರಣ ಪವರ್ ಸ್ಟಾರ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಆಗುತ್ತಿರೋ ಆಕಾಶ್ ಸಿನಿಮಾ ಹಾಗು ಡೆವಿಲ್ ಚಿತ್ರ.
ಯೆಸ್, ಇಲ್ಲೇ ಇರೋದು ಅಸಲಿ ಕಥೆ. ಮಾರ್ಚ್ 17ಕ್ಕೆ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ. ಅಪ್ಪು ನಿಧನ ಆದ ಮೇಲೆ ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪಿಆರ್‌ಕೆ ಪ್ರೊಡಕ್ಷನ್ನಿಂದ ಒಂದು ಹಿಟ್ ಸಿನಿಮಾವನ್ನ ರೀ ರಿಲೀಸ್ ಮಾಡುತ್ತಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಭಾರಿ ಕೂಡ ಪವರ್ ಸ್ಟಾರ್ ಹಾಗು ರಮ್ಯಾ ನಟನೆಯ ಆಕಾಶ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.
ಆಕಾಶ್ ಸಿನಿಮಾ ಮರು ಬಡುಗಡೆ ಆಗುತ್ತಿರೋದಕ್ಕೆ ಇಡೀ ದೊಡ್ಮನೆ ಅಭಿಮಾನಿ ಬಳಹ ಚಿತ್ರಮಂದಿರಕ್ಕೆ ನುಗ್ಗಲು ತಯಾರಿ ಮಾಡುತ್ತಿದೆ. ಆದ್ರೆ ಅಸಲಿ ಆಟ ಅಂದ್ರೆ ಅದೇ ದಿನ ನಟ ದರ್ಶನ್‌ರ ಡೆವಿಲ್ ಸಿನಿಮಾ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಂದಿದ್ದ ಈ ಸಿನಿಮಾ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಆದ್ರೆ ಈಗ ಪುನೀತ್ ಜನ್ಮದಿನದಂದೇ ಮತ್ತೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಡೆವಿಲ್ ರೀ ರಿಲೀಸ್ ಮಾಡುತ್ತಿದ್ದಾರೆ.
ಪುನೀತ್ ಸಿನಿಮಾ ಎದುರು ದರ್ಶನ್ ಸಿನಿಮಾ ಮರು ಬಿಡುಗಡೆ ಆಗುತ್ತಿರೋದು ಹೊಸದೇನು ಅಲ್ಲ. ಇದು ಡಿ ಗ್ಯಾಂಗ್‌ಗೆ ಹಳೇ ಚಾಳಿ. ಯಾಕಂದ್ರೆ ಕಳೆದ ವರ್ಷ ಕೂಡ ಅಪ್ಪು ಹುಟ್ಟುಹಬ್ಬಕ್ಕೆ ಪುನೀತ್‌ರ ಮಾಸ್ ಹಿಟ್ ಜಾಕಿ ಸಿನಿಮಾ ಮರು ಬಿಡುಗಡೆ ಆಗಿತ್ತು. ಅದೇ ದಿನಕ್ಕೆ ಕಾದಿದ್ದು, ದರ್ಶನ್‌ರ ಕರಿಯಾ ಸಿನಿಮಾ ಕೂಡ ರಿ ರಿಲೀಸ್ ಮಾಡಿದ್ರು. ಆಗ ಸ್ಯಾಂಡಲ್ವುಡ್ನಲ್ಲಿ ಒಂದಷ್ಟು ಕೋಲಾಹಲ ಎದ್ದಿದ್ದು ಸುಳ್ಳಲ್ಲ. ಆ ನಡುವೆಯೂ ಅಂದು ಜಾಕಿ ದೊಡ್ಡ ಹಿಟ್ ಆಗಿತ್ತು.
ಈಗ ಈ ಬಾರಿಯೂ ಅಪ್ಪು ಹುಟ್ಟುಹಬ್ಬ ಮಾರ್ಚ್ 17ಕ್ಕೆ ಮತ್ತೆ ಬಾಕ್ಸಾಫೀಸ್ ಕದನಕ್ಕೆ ಕಾಲ್ಕೆರೆದು ಬಂದಂತಿದೆ. ಆಕಾಶ್ ಸಿನಿಮಾದ ಎದುರು ಮೂರು ತಿಂಗಳ ಹಿಂದಷ್ಟೆ ಬಂದಿದ್ದ ಡೆವಿಲ್ ಚಿತ್ರ ಮತ್ತೆ ರೀ ರಿಲೀಸ್ ಆಗುತ್ತಿದೆ. ಈ ಬಾರಿ ಅದಿನ್ನೇನು ಆಗುತ್ತೆ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.