ರಾಮಾಯಣದ 'ಸೀತೆ' ಪಾತ್ರದ ಕುರಿತು ಹೊಸ ವಿವಾದ; ಯಾಮಿ ಗೌತಮ್ ವಿರುದ್ಧ ಸಾಯಿ ಪಲ್ಲವಿ ಫ್ಯಾನ್ಸ್ ಭಾರೀ ಆಕ್ರೋಶ

Published : Nov 10, 2026, 04:02 PM IST
sai pallavi and yami gautam

ಸಾರಾಂಶ

ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿಗಿಂತ ಯಾಮಿ ಗೌತಮ್ ಸೂಕ್ತ ಎಂಬ ಪೋಸ್ಟ್‌ಗೆ ಯಾಮಿ ಲೈಕ್ ಮಾಡಿದ್ದಾರೆ ಎಂಬ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಇದರಿಂದ ಸಾಯಿ ಪಲ್ಲವಿ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಇದು ಪಿಆರ್ ಗಿಮಿಕ್ ಎಂದು ಟೀಕಿಸುತ್ತಿದ್ದಾರೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಹಾಗೂ ರಣಬಿರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದರ ಮಧ್ಯೆ ಬಾಲಿವುಡ್‌ನ ಪ್ರತಿಭಾನ್ವಿತ ನಟಿ ಯಾಮಿ ಗೌತಮ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾಳೆ.

ಹೌದು, ಇನ್‌ಸ್ಟಾಗ್ರಾಂನಲ್ಲಿ ನಡೆದಿದೆ ಎನ್ನಲಾದ ಒಂದು ಸಣ್ಣ ಲೈಕ್ ಬಾಲಿವುಡ್ ಅಂಗಳದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಮಾತೆ ಸೀತೆಯ ಪಾತ್ರಕ್ಕೆ ಸೌತ್ ಬೆಡಗಿ ಸಾಯಿ ಪಲ್ಲವಿಗಿಂತ ಯಾಮಿ ಗೌತಮ್ ಅವರೇ ಹೆಚ್ಚು ಸೂಕ್ತ ಎಂಬರ್ಥದ ಪೋಸ್ಟ್‌ ಒಂದನ್ನು ನಟಿ ಲೈಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆ ಲೈಕ್ ಮಾಡಿದ್ದಾರೆ ಎನ್ನಲಾಗಿರುವ ಸ್ಕ್ರೀನ್‌ಶಾಟ್ ಭಾರೀ ವೈರಲ್ ಆಗ್ತಿದೆ.

ಏನಿದು ವಿವಾದ?

The Ultimate Trolls ಎಂಬ ಇನ್‌ಸ್ಟಾಗ್ರಾಂ ಪೇಜ್ ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿತ್ತು. ಅದರಲ್ಲಿ ರಾಮಾಯಣ ಸಿನಿಮಾದಲ್ಲಿ ಮಾತೆ ಸೀತೆಯ ಪಾತ್ರವನ್ನು ಯಾಮಿ ಗೌತಮ್‌ಗಿಂತ ಯಾರೂ ಉತ್ತಮವಾಗಿ ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಬರೆಯಲಾಗಿತ್ತು. ಈ ಪೋಸ್ಟ್‌ಗೆ ಯಾಮಿ ಗೌತಮ್ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಲೈಕ್ ಬಿದ್ದಿದೆ ಎನ್ನಲಾದ ಸ್ಕ್ರೀನ್‌ಶಾಟ್ ವೈರಲ್ ಆಗಿದೆ. ಬೆನ್ನಲ್ಲೇ ನೆಟ್ಟಿಗರು ನಟಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಸ್ಕ್ರೀನ್‌ಶಾಟ್ ಅಸಲಿಯೇ ಅಥವಾ ಎಡಿಟ್ ಮಾಡಲಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ

ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ 'ರಾಮಾಯಣ' ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಬಗ್ಗೆ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಸೂಕ್ಷ್ಮ ಸಮಯದಲ್ಲಿ ಯಾಮಿ ಗೌತಮ್ ಇಂತಹ ಪೋಸ್ಟ್‌ಗೆ ಲೈಕ್ ಮಾಡಿರುವುದು ಸಾಯಿ ಪಲ್ಲವಿ ಅಭಿಮಾನಿಗಳ ಕೆರಳಿಸಿದೆ. ರೆಡ್ಡಿಟ್‌ನಲ್ಲಿ ಈ ವಿಚಾರ ಚರ್ಚೆಗೆ ಬರುತ್ತಿದ್ದಂತೆ, ಹಲವರು ಇದನ್ನು ಗಮನ ಸೆಳೆಯಲು ಮಾಡುತ್ತಿರುವ ಕೀಳುಮಟ್ಟದ ಪಿಆರ್ (PR) ಗಿಮಿಕ್ ಎಂದು ಕಿಡಿಕಾರಿದ್ದಾರೆ.

ಯಾಮಿ ಗೌತಮ್ ಇಂತಹ 'ಲೈಕ್' ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ನಟಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದ ಸಂದರ್ಭದಲ್ಲೂ ಕೃತಿಯನ್ನು ಟ್ರೋಲ್ ಮಾಡುವ ವಿಡಿಯೋಗೆ ಲೈಕ್ ಒತ್ತಿದ್ದರು. ಆ ಸಮಯದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ನಂತರ ಎಕ್ಸ್‌ನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು.

ಸೆಲೆಬ್ರಿಟಿಗಳನ್ನು ಪ್ರತಿದಿನ ನೂರಾರು ಪೋಸ್ಟ್‌ಗಳಲ್ಲಿ ಟ್ಯಾಗ್ ಮಾಡಲಾಗುತ್ತದೆ. ನಾನು ಉದ್ದೇಶಪೂರ್ವಕವಾಗಿ ಯಾರನ್ನೂ ಟ್ರೋಲ್ ಮಾಡಲು ಲೈಕ್ ಮಾಡಿಲ್ಲ, ಅದು ಆಕಸ್ಮಿಕವಾಗಿ ಸ್ಕ್ರಾಲ್ ಮಾಡುವಾಗ ಆಗಿರಬಹುದು. ಪ್ರಚಾರಕ್ಕಾಗಿ ನಾನೆಂದಿಗೂ ಇಂತಹ ಕೀಳು ತಂತ್ರ ಮಾಡಲ್ಲ ಎಂದು ಯಾಮಿ ಸ್ಪಷ್ಟಪಡಿಸಿದ್ದರು. ಇದೀಗ ಮತ್ತೆ ಸಾಯಿ ಪಲ್ಲವಿ ಮತ್ತು ರಾಮಾಯಣ ವಿಚಾರದಲ್ಲೂ ಅಂತಹದ್ದೇ ಆರೋಪ ಕೇಳಿಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Divorce: 1800 ಕೋಟಿ ಆಸ್ತಿಯ ಒಡತಿ ಅನ್ನಾ ಲೆಜ್ನೆವಾ ಯಾರು? ಪವನ್ ಕಲ್ಯಾಣ್ ಜೊತೆ ಲವ್ ಆಗಿದ್ದು ಹೇಗೆ?
'ಆಯುಷ್' ವಿವಾದ: ನಿರ್ದೇಶಕರ ವಿರುದ್ಧ ಫಿಲಂ ಚೇಂಬರ್‌ಗೆ ಪತ್ರ ಬರೆದ ಪ್ರಿಯಾಂಕಾ ಉಪೇಂದ್ರ!