ಯಕ್ಷಗಾನದ ನಡುವೆ ಶ್ರೀವಲ್ಲಿ ಡಾನ್ಸ್ ಮಾಡಿದ ಕಲಾವಿದ
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡು
ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಸೆನ್ಸೇಷನ್ ಸೃಷ್ಟಿಸಿರುವ ಗೀತೆ
ಬೆಂಗಳೂರು (ಮಾ.2): ಆಕರ್ಷಕ ಡೈಲಾಗ್ ಗಳು (Dialouge), ಹುಕ್ ಸ್ಟೆಪ್ (Hook Step) ಹಾಗೂ ಸೂಪರ್ ಹಿಟ್ ಗೀತೆಗಳ ಮೂಲಕ ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪಾ-ದಿ ರೈಸ್ (Pushpa-The Rise) ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇನ್ ಫ್ಲೂಯೆನ್ಸರ್ ಗಳಿಂದಲೂ ಈ ಚಿತ್ರದ ಸಾಕಷ್ಟು ಹುಕ್ ಸ್ಟೆಪ್ ಗಳನ್ನು ಮರು ಸೃಷ್ಟಿ ಮಾಡಲಾಗಿತ್ತು. ಸಾಮಾನ್ಯ ಜನ ಮಾತ್ರವಲ್ಲದೆ, ಕ್ರಿಕೆಟಿಗರು, ಸೆಲಿಬ್ರಿಟಿಗಳೂ ಕೂಡ ಪುಪ್ಷಾ ಚಿತ್ರದ ಹಾಡಿಗೆ ಲಿಪ್ ಸಿಂಕ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ನಡುವೆ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಯಕ್ಷಗಾನ ವೇದಿಕೆಯಲ್ಲೂ ಪುಷ್ಪಾ ಚಿತ್ರದ "ಶ್ರೀವಲ್ಲಿ" ಹುಕ್ ಸ್ಟೆಪ್ ಡಾನ್ಸ್ ಪ್ರಕಟವಾಗಿದೆ.
ಟ್ರೆಂಡಿಂಗ್ ನಲ್ಲಿರುವ, ವೈರಲ್ ಆಗಿರುವ ಸಂಗತಿಗಳನ್ನು ಅಷ್ಟೇ ಬೇಗ ಆಪ್ತವಾಗಿ ವೇದಿಕೆಯಲ್ಲಿ ಪ್ರಕಟ ಮಾಡುವುದು ಯಕ್ಷಗಾನದಲ್ಲಿ ಹೊಸದೇನಲ್ಲ. ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವುದು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದಾಗ, ಕೆಲವೇ ದಿನಗಳಲ್ಲಿ ಅದನ್ನು ಯಕ್ಷಗಾನದ ವೇದಿಕೆಯಲ್ಲೂ ತೋರಿಸಲಾಗಿತ್ತು. ಈಗ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ತಮ್ಮ ಒಂದು ಕಾಲನ್ನು ಎಳೆದುಕೊಂಡು ಮಾಡಿರುವ ಸುಲಭದ ಸ್ಟೆಪ್ ವೈರಲ್ ಆಗಿದೆ.
ವೀಡಿಯೋದಲ್ಲಿ ಯಕ್ಷಗಾನ (Yakshagana) ಕಲಾವಿದರು ತಮ್ಮ ವೇಷಭೂಷಣಗಳನ್ನು ಧರಿಸಿ, ವೇದಿಕೆಯ ಮೇಲೆ ಪ್ರದರ್ಶನ ನೀಡುತ್ತಿದ್ದಾರೆ. ಯಕ್ಷಗಾನವು ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಆಚರಿಸಲ್ಪಡುವ ರಂಗಭೂಮಿಯ ಸಾಂಪ್ರದಾಯಿಕ ರೂಪವಾಗಿದೆ. ಇದ್ದಕ್ಕಿದ್ದಂತೆ, ಶ್ರೀವಲ್ಲಿ ಹಾಡು ಪ್ಲೇ ಆಗಲು ಪ್ರಾರಂಭಿಸುತ್ತದೆ, ಅದರ ಬೀಟ್ ಗೆ ಕಲಾವಿದ ಅಲ್ಲು ಅರ್ಜುನ್ ರೀತಿಯಲ್ಲೇ ಕಾಲನ್ನು ಎಳೆದುಕೊಂಡು ಡಾನ್ಸ್ ಮಾಡಲು ಆರಂಭಿಸುತ್ತಾರೆ. ಕಲಾವಿದನ ಈ ಸಾಹಸಕ್ಕೆ ಸಹನಟರು ಹಾಗೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.
ದಕ್ಷಿಣ ಕನ್ನಡದ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯಿಂದ 'ಯಕ್ಷಗಾನ' ಪ್ರಸಂಗವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಾಗವತರು 'ಪುಷ್ಪ' ಶ್ರೀವಲ್ಲಿ ಹಾಡನ್ನು ಹಾಡಿದ್ದರು. ಇದಕ್ಕೆ ಯಕ್ಷಗಾನ ಕಲಾವಿದರೊಬ್ಬರು ಅಲ್ಲು ಅರ್ಜುನ್ ಹಾಕಿದ ಹೆಜ್ಜೆಯನ್ನೇ ಹಾಕಿದ್ದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಕ್ಷಗಾನ ನೋಡಲು ನೆರೆದಿದ್ದ ಜನರು ಕೂಡ ಶ್ರೀವಲ್ಲಿ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ.
Pushpa 2 Movie: ಅಲ್ಲು ಅರ್ಜುನ್ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಫೈನಲ್
ಭೂತನಿ-ಕೆ-ಮೀಮ್ಸ್ (bhutni_ke_memes) ಇನ್ಸ್ ಟಾಗ್ರಾಮ್ ಅಕೌಂಟ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದ್ದು, ವೀಡಿಯೊವನ್ನು ಮೂಲತಃ ಥಗ್ಸ್_ಆಫ್_ಎಡಿಟಿಂಗ್ (thugs_of_editing) ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ, ಅದರ ಶೀರ್ಷಿಕೆಯಲ್ಲಿ, "ಶ್ರೀವಲ್ಲಿ ಟ್ರೆಂಡಿಂಗ್ ಹಾಡಿನ ಟ್ಯೂನ್‌ನಲ್ಲಿ ಯಕ್ಷಗಾನ ಕಲಾವಿದನ ಪ್ರದರ್ಶನ." ಎಂದು ಬರೆಯಲಾಗಿದೆ. ವೀಡಿಯೊ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ. ಈ ಕ್ಲಿಪ್ ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಗುವಿನ ಇಮೋಜಿಯನ್ನೂ ಹಂಚಿಕೊಂಡಿದ್ದಾರೆ.
ಪುಷ್ಪ 2 ಸಿನಿಮಾ ಮಾಡೋಕೆ 2.5 ಕೋಟಿ ರೂ ಬೇಡಿಕೆ ಇಟ್ಟ ರಶ್ಮಿಕಾ ಮಂದಣ್ಣ?
ಯಕ್ಷಗಾನದ ರಂಗಸ್ಥಳದಲ್ಲಿ ಪ್ರಸ್ತುತ ಸನ್ನಿವೇಶದ ಸಂದರ್ಭಗಳನ್ನು ತರುವುದು ಹೊಸದೇನಲ್ಲ. ಸನ್ನಿವೇಶ, ಡೈಲಾಗ್, ಹುಕ್ ಸ್ಟೆಪ್ ಡಾನ್ಸ್ ಎಲ್ಲವನ್ನೂ ಸೂಕ್ತವಾಗಿ ಹೊಂದಿಕೆ ಆಗುವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಆದರೆ, ಯಕ್ಷಗಾನದ ಕಟ್ಟಾ ಅಭಿಮಾನಿಗಳು ಇಂಥ ಪ್ರಯೋಗಗಳಿಗೆ ಕೆಲವೊಮ್ಮೆ ವಿರೋಧ ವ್ಯಕ್ತಪಡಿಸುತ್ತಾರೆ. ಯಕ್ಷಗಾನಕ್ಕೆ ಅದರದ್ದೇ ಆದ ಇತಿಹಾಸ ಹಾಗೂ ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಿ ಹೋಗಬಾರದು ಎನ್ನುವ ಅಭಿಪ್ರಾಯ ಅವರದಾಗಿದೆ.