
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಾರಸ್ದಾರ' ಧಾರವಾಹಿ ಮೂಲಕ ಎಲ್ಲರ ಮನದಲ್ಲಿ ಬೇರೂರಿವ ಯಜ್ಞಾ ಕೆಲವು ತಿಂಗಳು ಯಾರಿಗೂ ಕಾಣದಂತೆ ಮಾಯವಾಗಿದ್ದರು. ಈಗ ಅವರನ್ನು ಮತ್ತೆ ತೆರೆ ಮೇಲೆ ನೋಡುವ ಅವಕಾಶ ಮಾಡಿಕೊಟ್ಟಿದ್ದಾರೆ ರಾಮ್ ಗೋಪಾಲ್ ವರ್ಮಾ.
ಈಗಾಗಲೇ ವರ್ಮಾ ನಿರ್ದೇಶನದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ವೀರಪ್ಪನ್ ಮಡದಿ ಪಾತ್ರ ಮಾಡಿ ಎಲ್ಲರ ಪ್ರಶಂಸೆ ಪಡೆದಿದ್ದರು ಯಜ್ಞಾ. ಈಗ ಟಾಲಿವುಡ್‌ನಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ ‘ಲಕ್ಷ್ಮೀಸ್ ಎನ್‌ಟಿಆರ್’ನಲ್ಲಿ ಎನ್‌ಟಿಆರ್ ಪತ್ನಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದುವರೆಗೂ ಎನ್‌ಟಿಆರ್ ಚಿತ್ರದ ಬಗ್ಗೆ ಯಾವ ಸುಳಿವೂ ನೀಡದ ವರ್ಮಾ, ಇದೀಗ ಚಿತ್ರದ ಬಗ್ಗೆ ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದೇ ಮೊದಲ ಸಲ ಪಾತ್ರಗಳ ಬಗ್ಗೆ ರಿವೀಲ್ ಮಾಡಿರುವ ವರ್ಮಾ, ಸಿನಿಮಾದಲ್ಲಿ ಲಕ್ಷ್ಮಿ ಪಾರ್ವತಿ ಮಾಡುತ್ತಿರುವುದು ಯಜ್ಞಾ ಶೆಟ್ಟಿ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ ,ಮತ್ತೊಂದು ಪಾತ್ರದ ಬಗ್ಗೆಯೂ ಹೇಳಿದ್ದಾರೆ. ಅದು ಹೇಗೆ ಗೊತ್ತಾ?
ಥೇಟ್ ಚಂದ್ರ ಬಾಬು ನಾಯ್ಡು ಹೋಲುವ ಫೋಟೋ ಅಪ್ಲೋಡ್ ಮಾಡಿ, ಇದು ಯಾರೆಂದು ಗೆಸ್ ಮಾಡಿ ಎಂದಿದ್ದಾರೆ. ಈಗಾಗಲೇ ಈ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಎರಡು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರೂ ಸಿನಿಮಾದ ಛಾಯಗ್ರಾಹಣದೇ ಬಗ್ಗೆಯೇ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.