ಗ್ಲಾಸ್ ಹಿಡಿದು ಅಲ್ಲಾಡ್ಸಿದ ದೀಪಿಕಾ!

Published : Jan 12, 2019, 02:18 PM ISTUpdated : Jan 12, 2019, 02:21 PM IST
ಗ್ಲಾಸ್ ಹಿಡಿದು ಅಲ್ಲಾಡ್ಸಿದ ದೀಪಿಕಾ!

ಸಾರಾಂಶ

ದೀಪಿಕಾ ಹಾಗೂ ರಣವೀರ್, ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್‌ನ ಈ ತಾರಾ ಜೋಡಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದೆ. ದೀಪಿಕಾ ಅಭಿಮಾನಿಗಳಂತೂ, ಮದುವೆಯಾದ ಬಳಿಕ ತಮ್ಮ ನೆಚ್ಚಿನ ನಟಿ ಬದಲಾಗಿದ್ದಾರೆಂದು ಸಾಮಾಜಿಕ ಜಾಲಾತಾಣಗಳಲ್ಲಿ ಅಸಮಾಧಾನ ತೋರ್ಪಡಿಸುತ್ತಲೇ ಇದ್ದಾರೆ. ಸದ್ಯ ದೀಪಿಕಾರ ವಿಡಿಯೋ ಒಂದು ವೈರಲ್ ಅಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

ಮುಂಬೈ[ಜ.12]: ಮದುವೆಯಾದ ಬಳಿಕ ಜೀವನ ಬದಲಾಗುತ್ತದೆ ಎಂಬ ಮಾತಿದೆ. ಈ ಮಾತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ವರ್ತನೆ ನೋಡಿದ ಬಳಿಕ ನಿಜ ಎನ್ನಬಹುದೇನೋ. ಯಾಕೆಂದರೆ ರಣವೀರ್ ಸಿಂಗ್ ಜೊತೆ ಮದುವೆಯಾದಾಗಿನಿಂದ ವೈರಲ್ ಆಗುತ್ತಿರುವ ದೀಪಿಕಾರ ವರ್ತನೆ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಲಾರಂಭಿಸಿದೆ. ಸದ್ಯ ದೀಪಿಕಾ ಗಂಡ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಈ ವಿಡಿಯೋದಲ್ಲಿ ದೀಪಿಕಾ ತಮ್ಮ ಗಂಡ ರಣವೀರ್ ನಂತೆ ಬಿಂದಾಸ್ ಆಗಿ ಮಜಾ ಮಾಡುತ್ತಿರುವುದು ನೋಡಬಹುದಾಗಿದೆ. ವಿಡಿಯೋದಲ್ಲಿ ದೀಪಿಕಾ 'ಏ ಆಯಾ ಪೊಲೀಸ್' ಎಂದಿದ್ದಾರೆ. ಇದನ್ನು ಶೇರ್ ಮಾಡಿಕೊಂಡಿರುವ ರಣವೀರ್ 'ಮೇರಿ ಟೀಚರ್ ಲೀಡರ್[ನನ್ನ ಟೀಚರ್ ಲೀಡರ್]' ಎಂದು ಬರೆದುಕೊಂಡಿದ್ದಾರೆ. 

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಕಮೆಂಟ್ ಗಳು ಬರಲಾರಂಭಿಸಿವೆ. ಕೆಲವರು ದೀಪಿಕಾರ ಮೇಲೆ ರಣವೀರ್ ಸಿಂಗ್ ಪ್ರಭಾವ ಬಿದ್ದಿದೆ ಎಂದರೆ, ಮತ್ತೆ ಕೆಲವರು ಅಚ್ಚರಿಗೀಡಾಗಿದ್ದಾರೆ. ಈ ಮಧ್ಯೆ ದೀಪಿಕಾ ಕೂಡಾ ಕಮೆಂಟ್ ಮಾಡಿದ್ದು, 'ನಿನಗೆ ಮನೋರಂಜನೆ ನೀಡಲು ನಾನೇನು ಏನೇನು ಮಾಡಬೇಕಾಗುತ್ತದೆ' ಎಂದು ಗಂಡನ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಮದುವೆ ಬಳಿಕ ಈ ತಾರಾ ಜೋಡಿ ಸದ್ದು ಮಾಡುತ್ತಲೇ ಇದೆ. ಸದ್ಯ ಈ ಜೋಡಿ ಕಪಿಲ್ ದೇವ್ ರವರ ಜೀವನಾಧಾರಿತ '83' ಎಂಬ ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆನ್ನಲಾಗಿದೆ. ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಕಪಿಲ್ ದೇವ್ ರವರ ಹೆಂಡತಿ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!
400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?