ಯಶ್ ಹೇಳಿರೋ 'ಆ ಮಾತು' ಇಡೀ ಜಗತ್ತಿನ ಗಮನಕ್ಕೆ ಬಂದಿದೆ.. ರಾಕಿಂಗ್ ಸ್ಟಾರ್‌ಗೂ ಮೊದಲು ಯಾರಾದ್ರಾ ಹೀಗ್ ಹೇಳಿದ್ರಾ?

Published : Aug 17, 2026, 01:54 PM IST
Yash Toxic

ಸಾರಾಂಶ

ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್‌ ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, 'ಒಂದು ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಏನದು ನೋಡಿ..

Yash's response to Rashmika's question about 'showing off' actually a message for the whole world?ರಶ್ಮಿಕಾ 'ಶೋ ಆಫ್‌' ಪ್ರಶ್ನೆಗೆ ಯಶ್ ಕೊಟ್ಟ ಉತ್ತರ ಇಡೀ ಜಗತ್ತಿಗೇ ಕೊಟ್ಟ ಸಂದೇಶವೇ?

ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಭಾರತದ ಖ್ಯಾತ ಶೋ 'ಆಪ್‌ ಕಿ ಅದಾಲತ್‌'ನಲ್ಲಿ ಆಡಿರುವ ಒಂದೊಂದು ಮಾತೂ ಮುತ್ತು ಎನ್ನಿಸಿಕೊಂಡಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ಮಹತ್ವದ್ದು ಎನ್ನಬಹುದಾದ ಈ ಮಾತನ್ನು ಹಲವರು ಗಮನಿಸಿರಬಹುದು. ಎಲ್ಲ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಕೂಡ ಮಾರ್ಮಿಕವೇ ಹೌದು. ಆದರೆ, ಮುಂದೆ ಹೇಳಲಿರುವ, ಯಶ್ ಆಡಿರುವ ಆ ಮಾತು ಸಾಕಷ್ಟು ಪ್ರಬುದ್ಧ ಉತ್ತರ ಎನ್ನಿಸಿದೆ. ಕಾರಣ, ಅದು ಸ್ಟಾರ್ ವಾರ್‌ಗೆ ಸಂಬಂಧಿಸಿದ್ದು, ಜೊತೆಗೆ ಭಾರತದಲ್ಲಿ ಪರಿಹಾರ ಕಾಣಲೇಬೇಕಾದ ಸಮಸ್ಯೆಗೆ ಸಂಬಂಧಿಸಿದ್ದು. ಅದೇನು ಅಂತ ನೋಡಿ..

'ಆಪ್‌ ಕಿ ಅದಾಲತ್‌' ಕೋರ್ಟ್‌

ಹೌದು, 'ಆಪ್‌ ಕಿ ಅದಾಲತ್‌' ಕೋರ್ಟ್‌ನಲ್ಲಿ ನಟ ಯಶ್ ಅವರಿಗೆ ಬಹಳಷ್ಟು ಪ್ರಶ್ನೆ ಕೇಳಲಾಗಿದೆ. ಅದರಲ್ಲಿ ಒಂದು- ಬರೋಬ್ಬರಿ 9 ವರ್ಷಗಳ ಹಿಂದೆ ನಟಿ ರಶ್ಮಿಕಾಗೆ ಸಂಬಂಧಿಸಿದ್ದು. ಕನ್ನಡದ ನಟಿ, 'ನ್ಯಾಷನಲ್ ಕ್ರಶ್‌' ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು, ನಟ ರಕ್ಷಿತ್‌ ಶೆಟ್ಟಿ ಜೊತೆಗೆ ಭಾಗಿಯಾದ ಶೋ ಅದು. ಅಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ, ನಟಿ ರಶ್ಮಿಕಾ ಅವರು ಒತ್ತಡಕ್ಕೆ ಒಳಗಾಗಿ, 'ಗಿಫ್ಟ್‌ ಹ್ಯಾಂಪರ್' ಗೆಲ್ಲುವ ಹಠಕ್ಕೆ ಬಿದ್ದು ಹೇಳಲು ಇಷ್ಟವಿಲ್ಲದಿದ್ದರೂ 'ಶೋ ಆಫ್‌' ಯಾರು ಎಂಬ ಪ್ರಶ್ನೆಗೆ ನಟ ಯಶ್ ಹೆಸರು ಹೇಳಿದ್ದಾರೆ. ಅದು ದೊಡ್ಡ ವಿವಾದವಾಗಿ, ನಟ ಯಶ್ ಅಭಿಮಾನಿಗಳು ಆಗಲೂ ಈಗಲೂ ರಶ್ಮಿಕಾರನ್ನು ದ್ವೇಷಿಸುವುದು ನಡೆಯುತ್ತಲೇ ಇತ್ತು.

ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ!

'ಆಪ್‌ ಕಿ ಅದಾಲತ್' ಶೋದಲ್ಲಿ, ಹೋಸ್ಟ್ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ನಟ ಯಶ್ ಅವರು ಹೀಗೆ ಉತ್ತರ ಕೊಟ್ಟಿದ್ದಾರೆ: ಕೆಲವೊಂದು ಬಕ್ವಾಸ್ ಶೋಗಳು ಇರುತ್ತವೆ. ಅಲ್ಲಿ ಎರಡೋ ನಾಲ್ಕೋ ಆಪ್ಶನ್ ಕೊಟ್ಟು, ಒಂದು ಹೆಸರು ಹೇಳಲೇಬೇಕು ಎಂಬ ಪ್ರೆಶರ್ ತರುತ್ತಾರೆ. ಆ ಸಮಯದಲ್ಲಿ ರಶ್ಮಿಕಾ ಕೊಟ್ಟ ಉತ್ತರ ಅದಾಗಿರಬಹುದು. ಅಷ್ಟಕ್ಕೂ ಅಂದು ರಶ್ಮಿಕಾ ಅವರು ಆಗತಾನೇ ಸಿನಿಮಾರಂಗಕ್ಕೆ ಬಂದ ಹೊಸದು. ಅವರಿಗೆ ಎಲ್ಲವೂ ಹೊಸತು. ಸಿನಿಮಾರಂಗದ ಬಗ್ಗೆ ಅಷ್ಟೇನೂ ಇರವಿಲ್ಲದ, ವೈಯಕ್ತಿಕವಾಗಿ ಪರಿಚಯವಿಲ್ಲದ ನನ್ನ ಬಗ್ಗೆ ಜಸ್ಟ್ ಒಂದು ಆಯ್ಕೆ ಎನ್ನುವಂತೆ ಅವರು ಅಂದು ಹೇಳಿರೋ ಆ ಮಾತನ್ನು ಅಷ್ಟೇನೂ ಸೀರಿಯಸ್ಸಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಅಷ್ಟಕ್ಕೂ ನನ್ನ ವ್ಯಕ್ತಿತ್ವ ಬೇರೆಯವರ ಕಣ್ಣಿನ ದೃಷ್ಟಿಯ ಮೂಲಕ ನಿರ್ಧಾರ ಆಗೋದಿಲ್ಲ.

ಹೀಗೆಂದು ಹೇಳಿದ ಯಶ್ ಕೊನೆಗೊಂದು ಮಾತು ಹೇಳಿದ್ದಾರೆ. ಅದನ್ನು ಇಡೀ ಜಗತ್ತು ಕೇಳಿಸಿಕೊಂಡಿದೆ. ಆ ಮಾತಲ್ಲಿ ಅದೆಷ್ಟು ಮೆಚ್ಯೂರಿಟಿ ಇದೆ, ಅದೆಂಥಾ ಪ್ರಬುದ್ಧತೆ ಮನೆಮಾಡಿದೆ ಎಂದರೆ, ಇಡೀ ಜಗತ್ತು ಯಶ್ ಮಾತನ್ನು ಮೆಚ್ಚಿಕೊಂಡಿದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಸ್ಟಾರ್‌ವಾರ್ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತದಲ್ಲಿ ಹಾಗೂ ನಮ್ಮ ಕನ್ನಡನಾಡಿನಲ್ಲಿ ಅದು ಚಿತ್ರರಂಗದ ಒಂದು ಭಾಗವೇ ಆಗಿ ಬೇರೂರಿಬಿಟ್ಟಿದೆ. ಯಶ್ ಹೇಳಿರೋ ಈ ಮಾತನ್ನು ಕೇಳಿ ನಟರ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ಸ್ಟಾರ್‌ನಟರುಗಳೂ ಕೂಡ ಅಚ್ಚರಿಗೆ ಒಳಗಾಗಿ ಮೆಚ್ಚುಗೆ ಸೂಚಿಸಲೇಬೇಕು. ಹೌದು ಯಶ್ ಹೇಳಿದ್ದಾರೆ- "ಬೇರೆ ಕಲಾವಿದರನ್ನು ಗೌರವಿಸದಿದ್ದರೆ ನೀವು ನನ್ನ ಅಭಿಮಾನಿಗಳೇ ಅಲ್ಲ' ಎಂದಿದ್ದಾರೆ ಯಶ್.

ಈ ಮಾತನ್ನು ಇಡೀ ಜಗತ್ತಿಗೇ ಕೇಳುವಂತೆ ನಟ ಯಶ್ ಅವರು 'ಆಪ್‌ ಕಿ ಅದಾಲತ್' ಶೋನಲ್ಲಿ ಹೇಳಿದ್ದಾರೆ. ಈ ಹೇಳಿಕೆ ಬಂದಿರೋದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಎಂಬುದು ನಿಜವಾದರೂ, ಇಂಥ ಪ್ರಶ್ನೆಯನ್ನು ಭವಿಷ್ಯದಲ್ಲಿ ನಟ ಯಶ್‌ ಅವರಿಗೆ ಕೇಳವಂತೆ ಆಗಬಾರದು ಎಂಬ ಉದ್ದೇಶದ ಜೊತೆಗೆ, 'ಯಾರೋ ಒಬ್ಬರ ಬಗ್ಗೆ ಇನ್ಯಾರೋ ಒಬ್ಬರು ಅಭಿಪ್ರಾಯವನ್ನು ಇಟ್ಟುಕೊಂಡು ಅಭಿಮಾನಿಗಳು ಕಚ್ಚಾಡಬಾರದು, ಸೋಷಿಯಲ್ ಮೀಡಿಯಾಗಳಲ್ಲಿ ವಾದ-ವಿವಾದ ನಡೆಯಬಾರದು' ಎಂಬ ಸ್ಪಷ್ಟ ಸಂದೇಶ ಕೂಡ ಯಶ್ ಅವರ ಮಾತಿನಲ್ಲಿದೆ. ಈ ಮಾತಿಗೆ ಶೋದಲ್ಲಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ, ಜಗತ್ತಿನಲ್ಲಿರುವ 'ಬುದ್ದಿವಂತರ ಸಮೂಹ'ದಿಂದ ಕೂಡ ಯಶ್ ಅವರಿಗೆ ಕೇಳಿಸದಂತೆ, ಜಗತ್ತಿನ ಅರಿವಿಗೆ ಬಾರದಂತೆ 'ಕ್ಲಾಪ್ಸ್‌' ಬೀಳುತ್ತಿದೆ. ಇದೇ ಅಲ್ಲವೇ ಮಾನವೀಯತೆ ಬೆರೆತ ಪ್ರಬುದ್ಧತೆ ಎಂದರೆ? ನೀವ್ ಏನಂತೀರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic Countdown Day 10: ಯಶ್ 'ಟಾಕ್ಸಿಕ್' ಬಿಡುಗಡೆಗೆ ಕೌಂಟ್‌ಡೌನ್.. 10ನೇ ದಿನದ ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!
ಅಚ್ಚರಿಯ ಕಾರಣ ಕೊಟ್ಟು ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ನಟ ದೇವನ್; ಕೇರಳ ರಾಜಕೀಯದಲ್ಲಿ ಸಂಚಲನ