Toxic Countdown Day 10: ಯಶ್ 'ಟಾಕ್ಸಿಕ್' ಬಿಡುಗಡೆಗೆ ಕೌಂಟ್‌ಡೌನ್.. 10ನೇ ದಿನದ ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!

Published : Aug 17, 2026, 12:25 PM IST
Yash Toxic Release

ಸಾರಾಂಶ

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದ ಬಗೆಗಿನ ಸ್ಪೆಷಲ್ ಮಾಹಿತಿ ಇಲ್ಲಿದೆ ನೋಡಿ..

Yash Toxic Release Date-Rocking Star Yash-Toxic Movie Countdown: ಯಶ್‌ ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ ಶುರು:

ಕನ್ನಡನಾಡು ಸೇರಿದಂತೆ ಇಡೀ ಜಗತ್ತಿನಲ್ಲಿ ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಬ್ಬದ ಹವಾ ಶುರುವಾಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ ಮಾಡಲಾಗುತ್ತಿದೆ. ಇನ್ನೇನು 10 ದಿನಗಳಷ್ಟೇ ಬಾಕಿ ಇದೆ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಎಂಬುದು ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿರಸಿಕರಿಗೆ ಖುಷಿಯ ಸಮಾಚಾರ. ಹೌದು, ಟಾಕ್ಸಿಕ್‌ ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 10 ದಿನಗಳಷ್ಟೇ ಬಾಕಿ ಇವೆ, ಅಂದರೆ ಇಂದು ಕೌಂಟ್‌ಡೌನ್ ನಂಬರ್ 10.

ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್

ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಸೇರಿದಂತೆ, ಜಗತ್ತಿನ ಖ್ಯಾತ ಟೆಕ್ನಿಷಿಯನ್ಸ್‌ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಪ್ಯಾನ್ ವರ್ಲ್ಡ್ ಸಿನಿಮಾ ಎಂಬ ಹಣೆಪಟ್ಟೆ ಹೊತ್ತಿದೆ. ಈಗಾಗಲೇ ಜಗತ್ತಿಗೆ ಅನಾವರಣ ಆಗಿರುವ ಟ್ರೇಲರ್ ಹಾಗೂ ಸಾಂಗ್ ಮೂಲಕ ಹೇಳುವುದಾದರೆ ಟಾಕ್ಸಿಕ್ ಸಿನಿಮಾ ಅಕ್ಷರಶಃ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ.

ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್‌ನರ್‌ಶಿಪ್ ಮೂಲಕ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಈ ಬಜೆಟ್‌ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಪೊಸಿಟಿವ್ ಟಾಕ್ ಹಾಗೂ ಭಾರೀ ನಿರೀಕ್ಷೆ ಇರುವುದರಿಂದ ಸಿನಿಮಾ ಸೂಪರ್ ಹಿಟ್ ಆಗುವುದಂತೂ ಖಂಡಿತ ಎಂಬ ಮಾತು ಎಲ್ಲಾ ಕಡೆ ಕೇಳಿಬರುತ್ತಿದೆ. ಹಾಕಿರುವ ಬಜೆಟ್‌ಗೆ ಅದರ 2-3 ಪಟ್ಟು ಗಳಿಕೆ ಆಗುವದಂತೂ ನಿಶ್ಚಿತ. ಮಿಕ್ಕಿದ್ದನ್ನು ಈಗಲೇ ಹೇಳಲಾಗದು, ಏಕೆಂದರೆ ಭವಿಷ್ಯ ಯಾವತ್ತೂ ಅನಿಶ್ಚಿತ ಎನ್ನುತ್ತಿದ್ದಾರೆ ಬಾಕ್ಸ್‌ ಆಫೀಸ್ ಕಲೆಕ್ಷನ್ ಲೆಕ್ಕಾಚಾರದಲ್ಲಿ ಮುಳುಗೇಳುತ್ತಿರುವ ಪಂಡಿತರು.

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಅಬ್ಬರದ ಪ್ರಚಾರಕಾರ್ಯ

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು, ಅಂದರೆ ನಯನಾತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ಹಾಗೂ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇಂದು 10ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 09. ಎಲ್ಲಾ ದಿನಗಳ ಅಪ್‌ಡೇಟ್‌ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಚ್ಚರಿಯ ಕಾರಣ ಕೊಟ್ಟು ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ನಟ ದೇವನ್; ಕೇರಳ ರಾಜಕೀಯದಲ್ಲಿ ಸಂಚಲನ
ಈಡೇರದ ಸಚಿವ ಸ್ಥಾನದ ಕನಸು, ನಟಿ ಉಮಾಶ್ರೀಗೆ ಉಪಸಭಾಪತಿ ಸ್ಥಾನ ಫಿಕ್ಸ್! ಎದುರಾಳಿಗಳೇ ಇಲ್ಲದೆ ಗೆಲುವು ಖಚಿತ!