ಅಚ್ಚರಿಯ ಕಾರಣ ಕೊಟ್ಟು ಬಿಜೆಪಿಗೆ ಗುಡ್‌ಬೈ ಹೇಳಿದ ಖ್ಯಾತ ನಟ ದೇವನ್; ಕೇರಳ ರಾಜಕೀಯದಲ್ಲಿ ಸಂಚಲನ

Published : Aug 17, 2026, 12:07 PM IST
actor Devan

ಸಾರಾಂಶ

ಮಲಯಾಳಂ ನಟ ಮತ್ತು ರಾಜಕೀಯ ನಾಯಕ ದೇವನ್ ಅವರು ಕೇರಳ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣ ಮತ್ತು ಹಿರಿಯ ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಬೇಸರದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 2021ರಲ್ಲಿ ತಮ್ಮ ಕೇರಳ ಪೀಪಲ್ಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.

ಮಲಯಾಳಂ ಸಿನಿಮಾ ನಟ, ರಾಜಕೀಯ ನಾಯಕ ದೇವನ್ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೇರಳ ಬಿಜೆಪಿಯಲ್ಲಿ ಸೂಕ್ತ ಸ್ಥಾನ ಸಿಗುತ್ತಿಲ್ಲ ಎಂಬ ಬೇಸರದಿಂದ ರಾಜೀನಾಮೆ ನೀಡುತ್ತಿರುವ ತಿಳಿಸಿರುವ ನಟ ದೇವನ್, ಹಿರಿಯ ನಾಯಕರು ತಮ್ಮ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರೆ.

ರಾಜೀನಾಮೆ ನಿರ್ಧಾರ ಯಾಕೆ?

ಪಕ್ಷವನ್ನು ತೊರೆಯುವ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದು ಅಲ್ಲ, ಕಳೆದ ಹಲವು ತಿಂಗಳಿನಿಂದ ಈ ಬಗ್ಗೆ ಯೋಚನೆ ಮಾಡಿದ್ದೇನೆ. ಆದರೆ ಕೇಂದ್ರ ಬಿಜೆಪಿ ನಾಯಕರೊಂದಿಗೆ ತಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ತಮ್ಮ ರಾಜಕೀಯ ಚಿಂತನೆಗಳನ್ನು ಕೇರಳದಲ್ಲಿ ಅಳವಡಿಸಲು ಆಗುತ್ತಿಲ್ಲ. ಆದ್ದರಿಂದಲೇ ರಾಜೀನಾಮೆ ನಿರ್ಧಾರ ಮಾಡಿರೋದಾಗಿ ತಿಳಿಸಿದ್ದಾರೆ.

ಕೇರಳದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರೋದು ವಿಶೇಷ ಏನು ಅಲ್ಲ. ಮಲಯಾಳಂ ಸಿನಿಮಾ ರಂಗದಲ್ಲಿ ತಮಗೆ ವಿಶೇಷ ಸ್ಥಾನವಿದೆ. ಜನರಿಗೆ ನನ್ನ ಪರಿಚಯ ಇದ್ದು, ಸಿನಿಮಾ ರಂಗದಲ್ಲಿರುವ ಪ್ರಭಾವ, ರಾಜಕೀಯ ಬಗ್ಗೆ ಆಸಕ್ತಿಯಿಂದ ಪಕ್ಷಕ್ಕೆ ಉಪಯೋಗ ಆಗಬೇಕು ಎಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಅಲ್ಲಿನ ನಾಯಕರ ನಡುವಿನ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರೋದಾಗಿ ಹೇಳಿದ್ದರೆ.

ಬಿಜೆಪಿ ಪಕ್ಷದಲ್ಲಿ ತಮ್ಮ ಪಕ್ಷ ವಿಲೀನ ಮಾಡಿದ್ದ ದೇವನ್

ಶ್ರೀ ದೇವನ್ 2004ರಲ್ಲಿ ರಾಜಕೀಯಕ್ಕೆ ಕಾಲಿಟ್ಟಿದ್ದರು. ಕೇರಳ ಪೀಪಲ್ಸ್ ಪಾರ್ಟಿ ಪ್ರಾರಂಭಿಸಿದ್ದ ಅವರು, ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ 2021ರಲ್ಲಿ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನ ಮಾಡಿದ್ದರು. ದೇವನ್ ಅವರು ಶ್ರೀ ನಾರಾಯಣ ಗುರುಗಳ ಆದರ್ಶಿಗಳನ್ನು ಪಾಲಿಸುವ ಉದ್ದೇಶದಿಂದ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಮ್ ನಲ್ಲಿ ನಡೆದ ಸಮಾರಂಭದಲ್ಲಿ ಈ ಬಗ್ಗೆ ಸಂಕಲ್ಪ ಕೂಡ ಮಾಡಿದ್ದರು.

2026ರ ಚುನಾವಣೆಯಲ್ಲಿ ನಾನು ಬಿಜೆಪಿ ಪರವಾಗಿ ಅಕ್ರಮಣಕಾರಿಯಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಆತ್ಮಾವಲೋಕನ ನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ತೊರೆಯುವ ನಿರ್ಧಾರ ಮಾಡಿದ್ದೇನೆ. 2026ರ ಆರಂಭದಲ್ಲಿಯೇ ಈ ಬಗ್ಗೆ ಚಿಂತನೆ ಮಾಡಿದ್ದೆ, ಸದ್ಯ ನನ್ನ ದೃಷ್ಟಿಕೋನವೂ ಬಿಜೆಪಿಗೆ ಹೊಂದಾಣಿಕೆ ಆಗೋದಿಲ್ಲ ಎಂದು ಅರಿತುಕೊಂಡು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ ಎಂದು ದೇವನ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರದ ಸಚಿವ ಸ್ಥಾನದ ಕನಸು, ನಟಿ ಉಮಾಶ್ರೀಗೆ ಉಪಸಭಾಪತಿ ಸ್ಥಾನ ಫಿಕ್ಸ್! ಎದುರಾಳಿಗಳೇ ಇಲ್ಲದೆ ಗೆಲುವು ಖಚಿತ!
ತ್ರಿಷಾ ಬಳಿ ಕೋಟಿ ಕೋಟಿ ಆಸ್ತಿ; ಚೆನ್ನೈ ಮನೆಯಿಂದ ಲಂಡನ್ ಪ್ರಾಪರ್ಟಿವರೆಗೆ ಸಂಪತ್ತಿನ ಲೆಕ್ಕ