'ಒಳ್ಳೆಯ ಕತೆ ಸಿಕ್ಕಿದರೆ ದರ್ಶನ್, ಸುದೀಪ್ ಜೊತೆ ನಟಿಸುತ್ತೇನೆ'

Published : Oct 21, 2017, 05:09 PM ISTUpdated : Apr 11, 2018, 12:36 PM IST
'ಒಳ್ಳೆಯ ಕತೆ ಸಿಕ್ಕಿದರೆ ದರ್ಶನ್, ಸುದೀಪ್ ಜೊತೆ ನಟಿಸುತ್ತೇನೆ'

ಸಾರಾಂಶ

ಸಿನಿಮಾ ಅಭಿಮಾನಿಗಳಿಗೆ ಒಂದು ವಿಚಿತ್ರ ಆಸೆ ಇರುತ್ತದೆ. ತಮ್ಮಿಷ್ಟದ ಇಬ್ಬರು ಹೀರೋಗಳು ಒಂದೇ ಸಿನಿಮಾಗಳು ಕಾಣಿಸಿಕೊಳ್ಳಬೇಕು ಅನ್ನುವ ಆಸೆ. ಹಾಗಾಗಿ ಅವರು ತಮ್ಮಿಷ್ಟದ ಸ್ಟಾರ್‌ಗಳು ಸಿಕ್ಕಾಗ ಅವರ ಜೊತೆ ನಟಿಸುತ್ತೀರಾ, ಇವರ ಜೊತೆ ನಟಿಸುತ್ತೀರಾ ಎಂದು ಕೇಳುತ್ತಲೇ ಇರುತ್ತಾರೆ.

ಸದ್ಯ ಆ ಪ್ರಶ್ನೆ ಎದುರಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ಗೆ. ಹಬ್ಬದ ದಿನ ಮೊದಲ ಬಾರಿಗೆ ಅವರು ಫೇಸ್‌ಬುಕ್ ಲೈವ್ ಬಂದಿದ್ದರು. ಸುಮಾರು ಹತ್ತು ನಿಮಿಷಗಳ ಕಾಲ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದರು. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಎರಡು ಹೇಳಿದ ಮೂರು ಸಂಗತಿಗಳು.

1. ನನಗೂ ಎಲ್ಲರ ಜೊತೆ ನಟಿಸಬೇಕೆಂಬ ಆಸೆ ಇದೆ. ಒಳ್ಳೆಯ ಕತೆ ಇದ್ದರೆ ದರ್ಶನ್ ಅವರ ಜೊತೆ, ಕಿಚ್ಚ ಸುದೀಪ್ ಅವರ ಜೊತೆ ಆದಷ್ಟು ಬೇಗ ನಟಿಸುತ್ತೇನೆ.

2. ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನ ರಿಯಾಲಿಟಿ ಶೋ ‘ಫ್ಯಾಮಿಲಿ ಪವರ್’ ಮುಂದಿನ ತಿಂಗಳ ಕೊನೆಯ ವಾರ ಆರಂಭವಾಗಲಿದೆ.

ಅಂದಹಾಗೆ ಇದೇ ಹೊತ್ತಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಆ ಸಿನಿಮಾ ಮುಂದೆ ಹೋಗಿದೆ ಎಂದು ಹೇಳಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಾಕ್ಸ್‌ ಆಫೀಸ್‌ ಸುಲ್ತಾನ್' ಆಗ್ಬಿಟ್ಟ ರಣವೀರ್ ಸಿಂಗ್.. 1000 ಕೋಟಿ ಕ್ಲಬ್‌ನತ್ತ ಓಡುತ್ತಿರುವ 'ಧುರಂಧರ್'..!
ಹೈದರಾಬಾದ್‌ನಲ್ಲಿ ಸಿಗ್ತಿರೋ ಪ್ರೀತಿ-ಗೌರವ ಕನ್ನಡನಾಡಿನಲ್ಲಿ ಸಿಗ್ತಿಲ್ಲ.. ದೀಕ್ಷಿತ್ ಶೆಟ್ಟಿ ಈ ಬಗ್ಗೆ ಏನೆಲ್ಲಾ ಹೇಳಿದ್ರು?