
ಖ್ಯಾತ ನಟಿ ತಾಪ್ಸಿ ಪನ್ನು ತಾನು ಬೊಜ್ಜು ಕರಗಿಸಲು ಪ್ರಯತ್ನಿಸಿ ಪಟ್ಟ ಪಾಡಿನ ಕುರಿತು ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ.
1. ನಾನು ಈ ಮೊದಲು ಅತ್ಯಂತ ಫಿಟ್ ಆಗಿದ್ದೆ. ಆದರೂ ಕೆಳಹೊಟ್ಟೆ ಬೊಜ್ಜು ಹೆಚ್ಚಾಗಿತ್ತು. ನಾನು ಎಷ್ಟೇ ಫಿಟ್ ಆಗಿದ್ದರೂ ಹೊಟ್ಟೆಬೊಜ್ಜು ಕರಗುತ್ತಿಲ್ಲ ಎನ್ನುವ ಚಿಂತೆ ಶುರುವಾಯಿತು. ಫ್ಲಾಟ್ ಬೆಲ್ಲಿ ಹೊಂದುವ ಹಠಕ್ಕೆ ಬಿದ್ದ ನಾನು ಮಿತಿ ಮೀರಿ ವರ್ಕೌಟ್ ಮಾಡಲು ಶುರುಮಾಡಿದೆ. ಅತಿಯಾದ ಒತ್ತಡ ಹೇರಿದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾದವು.
2. ದೇಹವನ್ನು ಮಿತಿ ಮೀರಿ ದಂಡಿಸಿದಾಗ ಮೆದುಳು ನಮ್ಮ ದೇಹಕ್ಕೆ ರಕ್ಷಣೆಯ ಅಗತ್ಯವಿದೆ ಎನ್ನುವ ಎಚ್ಚರಿಕೆ ರವಾನಿಸುತ್ತದೆ. ದೇಹವು ನೀರನ್ನು ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಆದರೆ, ಈ ಬಗ್ಗೆ ನಾವು ಗಮನ ಕೊಡದೆ ವರ್ಕೌಟ್ ಮುಂದುವರಿಸುತ್ತೇವೆ.
3. ಆ ಕೆಳಹೊಟ್ಟೆಯಲ್ಲಿ ಕಾಣಿಸುವುದು ಕೇವಲ ಕೊಬ್ಬು ಮಾತ್ರವಲ್ಲ, ಅದು ನೀರು ಕೂಡ ಆಗಿರುತ್ತದೆ. ಅತಿಯಾದ ವರ್ಕೌಟ್‌ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಕರಗುವುದಿಲ್ಲ. ಹೀಗಾಗಿ ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬೇಡಿ.
4. ಪ್ರತಿಯೊಬ್ಬ ಮಹಿಳೆಯ ದೇಹದ ಪ್ರಕೃತಿಯೂ ವಿಭಿನ್ನವಾಗಿರುತ್ತದೆ. ನನಗೂ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಸಾಕಷ್ಟು ಹಿಂಸೆ ಅನುಭವಿಸಿದ ಬಳಿಕವಷ್ಟೇ ನನಗೆ ಇದರ ಸತ್ಯದ ಅರಿವಾಯಿತು. ಮಹಿಳೆಯರ ಕೆಳಹೊಟ್ಟೆಯ ಭಾಗದಲ್ಲಿ ಸ್ವಲ್ಪ ಕೊಬ್ಬು ಹಾಗೂ ನೀರಿನಂಶ ಇರಬೇಕು. ಯಾಕೆಂದರೆ ಅಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳಿರುತ್ತವೆ. ಅವುಗಳ ರಕ್ಷಣೆಗೆ ಪ್ರಕೃತಿಯೇ ಈ ರಚನೆ ಮಾಡಿರುತ್ತದೆ ಎಂದು ನನ್ನ ನ್ಯೂಟ್ರಿಷನಿಸ್ಟ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.