‘Jailer 2’ ಮೊದಲ ದಿನವೇ ವಿದ್ಯಾ ಬಾಲನ್‌ಗೆ ನಡುಕ! ರಜನೀಕಾಂತ್ ಜೊತೆಗಿನ ಆ ಸೀನ್ ಬಗ್ಗೆ ನಿರ್ದೇಶಕ ಶಾಕಿಂಗ್ ಹೇಳಿಕೆ

Published : Oct 12, 2026, 09:57 PM IST
Jailer 2

ಸಾರಾಂಶ

Jailer 2: ಸೂಪರ್‌ಸ್ಟಾರ್ ರಜನೀಕಾಂತ್ ಎದುರು ಸಿಗರೇಟ್ ಸೇದುವ ದೃಶ್ಯವನ್ನು ಚಿತ್ರೀಕರಿಸುವಾಗ ವಿದ್ಯಾ ಬಾಲನ್ ಮೊದಲ ದಿನವೇ ತುಂಬಾ ಆತಂಕಗೊಂಡಿದ್ದರು. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಈ ದೃಶ್ಯ ಮೂರನೇ ಟೇಕ್‌ನಲ್ಲಿ ಹೇಗೆ ಪೂರ್ಣಗೊಂಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ರಜನೀಕಾಂತ್ ಮುಖಕ್ಕೆ ಸಿಗರೇಟ್ ಹೊಗೆ ಬಿಡಲು ಹೆದರಿದ ವಿದ್ಯಾ ಬಾಲನ್!

ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನೀಕಾಂತ್ ಎದುರು ದೊಡ್ಡ ದೊಡ್ಡ ಕಲಾವಿದರೂ ಮಾತನಾಡಲು ಹಿಂಜರಿಯುತ್ತಾರೆ. ಇನ್ನು ಒಬ್ಬ ನಟಿ ಮೊದಲ ದಿನದ ಚಿತ್ರೀಕರಣದಲ್ಲೇ ಅವರ ಮುಖಕ್ಕೆ ಸಿಗರೇಟ್ ಹೊಗೆ ಬಿಡಬೇಕಾದರೆ ಹೇಗಿರಬಹುದು? ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೂ ಇಂತಹದ್ದೇ ಅನುಭವವಾಗಿದೆ. ‘ಜೈಲರ್ 2’ ಚಿತ್ರದಲ್ಲಿ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳಲಿರುವ ವಿದ್ಯಾ ಬಾಲನ್, ಮೊದಲ ದಿನವೇ ಒಂದು ದೃಶ್ಯವನ್ನು ಚಿತ್ರೀಕರಿಸುವಾಗ ಆತಂಕಗೊಂಡಿದ್ದರು. ಅವರ ಕೈಗಳೂ ನಡುಗಲು ಆರಂಭಿಸಿದ್ದವು. ಈ ಕುತೂಹಲಕಾರಿ ಘಟನೆಯನ್ನು ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರೇ ಬಹಿರಂಗಪಡಿಸಿದ್ದಾರೆ.

ರಜನೀಕಾಂತ್ ಎದುರು ವಿದ್ಯಾ ಬಾಲನ್ ಸ್ಥಿತಿ ಹೇಗಾಗಿತ್ತು?

ವಿದ್ಯಾ ಬಾಲನ್ ಅವರು ‘ಜೈಲರ್ 2’ ಚಿತ್ರದಲ್ಲಿ ಕಾಂತಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್, ವಿದ್ಯಾ ಬಾಲನ್ ಅವರ ಇಂಟ್ರಡಕ್ಷನ್ ಸೀನ್ ಶೂಟಿಂಗ್’ನ ಮೊದಲ ದಿನವೇ ಚಿತ್ರೀಕರಿಸಲಾಗಿತ್ತು. ಈ ದೃಶ್ಯದಲ್ಲಿ ವಿದ್ಯಾ ಬಾಲನ್ ಡೇರಿಂಗ್ ಮತ್ತು ಸ್ಟ್ರಾಂಗ್ ವ್ಯಕ್ತಿತ್ವದ ಮಹಿಳೆಯಾಗಿ ಕಾಣಿಸಿಕೊಳ್ಳಬೇಕಿತ್ತು. ರಜನೀಕಾಂತ್ ನಿರ್ವಹಿಸುವ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದ ಎದುರು ನಿಂತು ತಮ್ಮ ಮಾತನ್ನು ಹೇಳಲು ಹಿಂಜರಿಯದ ಪಾತ್ರ ಅದಾಗಿತ್ತು. ಆದರೆ ಇಂತಹ ಗಟ್ಟಿಯಾದ ಪಾತ್ರವನ್ನು ನಿರ್ವಹಿಸಲು ತಮಗೆ ಭಯವಾಗುತ್ತಿದೆ ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದರಂತೆ.

ಸಿಗರೇಟ್ ಕೈಗೆತ್ತಿಕೊಳ್ಳುತ್ತಿದ್ದಂತೆ ನಡುಗಿದ ವಿದ್ಯಾ ಬಾಲನ್ ಕೈ!

ಈ ದೃಶ್ಯದ ಹಿಂದಿನ ಅನುಭವವನ್ನು ವಿವರಿಸಿದ ನೆಲ್ಸನ್, ವಿದ್ಯಾ ಬಾಲನ್ ಅವರ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ದೃಶ್ಯದಲ್ಲಿ ರಜನೀಕಾಂತ್ ಎದುರು ನಿಂತು ಸಿಗರೇಟ್ ಸೇದುತ್ತಾ ಅವರ ಮುಖಕ್ಕೆ ಹೊಗೆ ಬಿಡುವಂತೆ ವಿದ್ಯಾ ಬಾಲನ್ ಅವರಿಗೆ ನಿರ್ದೇಶಕರು ಸೂಚಿಸಿದಾಗ, ಥರ ಥರ ನಡುಗಿದರಂತೆ ನಟಿ. ಸಿಗರೇಟ್ ಕೈಯಲ್ಲಿ ಹಿಡಿಯುವಾಗಲು ನಡುತ್ತಿದ್ದರಂತೆ, ಲಿಪ್ಸ್ಟಿಕ್ ಹಿಡಿದಂತೆ ಸಿಗರೇಟ್ ಹಿಡಿದಿದ್ದರಂತೆ. ಹಾಗಾಗಿ ಎರಡು ಬಾರಿ ದೃಶ್ಯಕ್ಕೆ ಕಟ್ ಹೇಳಬೇಕಾಗಿ ಬಂದಿತ್ತು.

ಮೂರನೇ ಟೇಕ್‌ನಲ್ಲಿ ದೃಶ್ಯ ಓಕೆ ಆಯ್ತು!

ಮಾನಿಟರ್‌ನಲ್ಲಿ ವಿದ್ಯಾ ಬಾಲನ್ ಅವರ ಅಭಿನಯವನ್ನು ಗಮನಿಸಿದಾಗ, ಪಾತ್ರಕ್ಕೆ ಬೇಕಾದ ನಿರ್ಭೀತ ನಡವಳಿಕೆ ಕಾಣಿಸುತ್ತಿಲ್ಲ ಎಂದು ನಿರ್ದೇಶಕರಿಗೆ ಅನಿಸಿತ್ತು. ಅವರ ಕಣ್ಣುಗಳಲ್ಲೂ ಆತಂಕ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಮೂರನೇ ಪ್ರಯತ್ನಕ್ಕೆ ಕೊನೆಗೂ ದೃಶ್ಯವನ್ನು ಸರಿಯಾಗಿ ಚಿತ್ರೀಕರಿಸಲು ಸಾಧ್ಯವಾಯಿತು ಎಂದು ನೆಲ್ಸನ್ ತಿಳಿಸಿದ್ದಾರೆ. ತೆರೆಯ ಮೇಲೆ ರಜನೀಕಾಂತ್‌ಗೆ ಪೈಪೋಟಿ ನೀಡುವಂತೆ ಕಾಣಿಸಿಕೊಳ್ಳುವ ವಿದ್ಯಾ ಬಾಲನ್ ಅವರಿಗೆ ಈ ದೃಶ್ಯದ ಚಿತ್ರೀಕರಣ ಸವಾಲಿನ ಅನುಭವವಾಗಿತ್ತು.

ಯಾವಾಗ ಬಿಡುಗಡೆಯಾಗಲಿದೆ ‘ಜೈಲರ್ 2’?

ನೆಲ್ಸನ್ ನಿರ್ದೇಶನದ ‘ಜೈಲರ್ 2’ ಚಿತ್ರದಲ್ಲಿ ರಜನೀಕಾಂತ್ ಮತ್ತೊಮ್ಮೆ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು, ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಸೂರಜ್ ವೆಂಜಾರಮೂಡು, ನಟಿಸುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್, ವಿಜಯ್ ಸೇತುಪತಿ ಮತ್ತು ಹೃತಿಕ್ ರೋಷನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಚಿತ್ರ ಅಕ್ಟೋಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Horror Web Series: ರಾತ್ರಿ ಹೊತ್ತು ಒಂಟಿಯಾಗಿ ನೋಡಬೇಡಿ! ಹಾಸ್ಟೆಲ್‌ನಲ್ಲಿ ನಡೆಯುವ ಭಯಾನಕ ಘಟನೆಗಳ ಕಥೆಯಿದು!
ಅಯೋಧ್ಯೆ ರಾಮಮಂದಿರ ದರ್ಶನ ಪಡೆದ ನಟಿ ಕಂಗನಾ: ಇದೊಂದು ಅದ್ಭುತ ಅನುಭವ ಎಂದಿದ್ಯಾಕೆ?