ಎಲ್ಲಿ ಮರೆಯಾದೆ? ಕಾವ್ಯಾ.. ಏಕೆ ದೂರಾದೆ? 'ಬಿಗ್ ಬಾಸ್' ಬಳಿಕ ಅದ್ಯಾಕೆ ಸಿನಿಮಾನೂ ಮಾಡ್ತಿಲ್ಲ 'ಕೊತ್ತಲವಾಡಿ' ಸುಂದರಿ?

Published : Jul 31, 2026, 03:20 PM IST
Kavya Shaiva

ಸಾರಾಂಶ

ಕೊತ್ತಲವಾಡಿ ಸಿನಿಮಾ ಮೂಲಕ ಕನ್ನಡಿಗರ ಮನೆಮನಕ್ಕೆ ಬಲಗಾಲಿಟ್ಟು ಬಂದಿದ್ದ ನಟಿ ಕಾವ್ಯಾ ಶೈವ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಹೃದಯದಲ್ಲಿ ಹರಿದಾಡುತ್ತಿದ್ದರು. ಆದ್ರೆ ಈಗ ಕಾವ್ಯಾ ಶೈವರ ಸಿನಿಮಾ ಇಲ್ಲ, ಕಿರುತೆರೆಯಲ್ಲಿಯೂ 'ದರ್ಶನ' ಇಲ್ಲ ಏಕೆ? ಈ ಸ್ಟೋರಿ ನೋಡಿ..

Kavya Shiva Viral News: ಬಿಗ್ ಬಾಸ್' ಬಳಿಕ ಏಕೆ ಸಿನಿಮಾನೂ ಮಾಡ್ತಿಲ್ಲ 'ಕೊತ್ತಲವಾಡಿ' ಸುಂದರಿ?

ಕನ್ನಡ ಸಿನಿರಸಿಕರು ಮರೆಯಲಾಗದ ಹೆಸರು ನಟಿ ಕಾವ್ಯಾ ಶೈವ (Kavya Shaiva) ಅವರದ್ದು. 'ಕೊತ್ತಲವಾಡಿ' ಸಿನಿಮಾ ಮೂಲಕ ಕರ್ನಾಟಕದ ತುಂಬಾ ಸೌಂಡ್ ಮಾಡಿದ್ದ ಈ ಚೆಲುವೆ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಮತ್ತಷ್ಟು ಫೇಮಸ್ ಆದವರು. ಬಿಗ್‌ ಬಾಸ್ ಶೋನಲ್ಲಿ ಕಾವ್ಯಾ ಶೈವ ಹೆಸರು ಅದೆಷ್ಟು ವೈರಲ್ ಆಗಿತ್ತು ಎಂದರೆ ಗಿಲ್ಲಿ ವಿನ್ನರ್ ಎಂದವರು ಈ ಕಾವ್ಯಾನೇ ರನ್ನರ್‌-ಅಪ್ ಅಂತಾ ಇದ್ರು. ಆದ್ರೆ ಅದ್ಯಾಕೋ ಗೊತ್ತಿಲ್ಲ, ಕಾವ್ಯಾ ಅಷ್ಟು ದೂರ ಹೋಗದೇ ಮಧ್ಯದಲ್ಲೇ ಬಿಗ್ ಬಾಸ್ ಪ್ರಿಯರಿಗೆ ಕೈ ಕೊಟ್ಟು ಹೋಗಿಬಿಟ್ರು!

ಹೌದು, ನಟಿ ಕಾವ್ಯಾ ಶೈವ ಸುಂದರಿ ಎಂಬ ಮಾತಿಲ್ಲ ಎಳ್ಳಷ್ಟೂ ಸುಳ್ಳಿಲ್ಲ. ಹಾಗೇ, ಬಿಗ್ ಬಾಸ್‌ ಕನ್ನಡ ರಿಯಾಲಿಟಿ ಶೋಗೆ ಕಾಲಿಟ್ಟಾಗ ಹಲವರು ಈಕೆ ಗೆಲ್ಲಬಹುದು ಎಂದಿದ್ದರು. ಆದ್ರೆ ಕೆಲವರು ಬಿಗ್ ಬಾಸ್ ಟ್ರೋಫಿಯನ್ನು ಕಾವ್ಯಾ ಶೈವ ಗೆಲ್ಲೋದು ಕಷ್ಟ, ಆದ್ರೆ ರನ್ನರ್ ಅಪ್ ಆಗಬಹುದು ಎಂದಿದ್ದರು. ಆದ್ರೆ ಎಲ್ಲರ ನಿರೀಕ್ಷೆ ಹುಸಿಯಾಗಿ ಕಾವ್ಯಾ ಕೊನೆಯ ದಿನಗಳಲ್ಲಿಯೇ 'ದೊಡ್ಮನೆ'ಯಿಂದ ಹೊರಬಿದ್ದರು. ಆದರೆ, 'ಗಿಲ್ಲಿ ಆಪ್ತ ಸ್ನೇಹಿತೆ' ಎಂಬ ಪಟ್ಟದಿಂದ ಹೊರಬರಲಾಗಲಿಲ್ಲ. ಬಿಗ್ ಬಾಸ್ ಶೋದಲ್ಲಿ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರಿಬ್ಬರ ಜೋಡಿಯ ಆಟ ಎಲ್ಲರ ಗಮನ ಸೆಳೆದಿತ್ತು ಎಂಬುದು ಈಗ ಹೇಳಬೇಕಾದ ಹೊಸ ವಿಷಯವೇನಲ್ಲ!

ಹೊಸ ಸಂಗತಿ ಏನು?

ಹಾಗಿದ್ದರೆ ಈಗ ಹೇಳಲೇಬೇಕಾದ ಹೊಸ ಸಂಗತಿ ಏನು? ಹಲವರು ಇದನ್ನು ಊಹೆ ಮಾಡೋದು ಕಷ್ಟ.. ಏನು ಅಂಥದ್ದು ಗೊತ್ತಾ? ಇಲ್ಲಿದೆ ನೋಡಿ ಕಾವ್ಯಾ ಶೈವರ ಶಾಕಿಂಗ್ ನ್ಯೂಸ್.. 'ಬಿಗ್ ಬಾಸ್ ಹೋಗಿ ಬಂದಮೇಲೆ ಕಾವ್ಯ ಅವರಿಗೆ ಮೊದಲಿಗಿಂತ ಹೆಚ್ಚಿನ ನೇಮ್-ಫೇಮ್ ಎಲ್ಲಾ ಸಿಕ್ಕಿತು. ಆದ್ರೆ ಸಿನಿಮಾ ಅವಕಾಶಗಳು ಸಿಕ್ತಿಲ್ವಾ..? ಅಥವಾ ಒಳ್ಳೆ ಕಥೆಗಾಗಿ ವರ್ಷಗಟ್ಟಲೆ ಕಾಯುತ್ತಿದ್ದಾರಾ..? 'ಗಿಲ್ಲಿ ಪಳಾರ್'ನಲ್ಲಿ ಇದ್ದಾರಾ..? ಏಕೆ ಕಾವ್ಯಾ ಶೈವ ನಟನೆಯ ಯಾವುದೇ ಸಿನಿಮಾ ಸುದ್ದಿ ಹೊರಗೆ ಬರುತ್ತಿಲ್ಲ?' ಹೀಗೆ ಹತ್ತು ಹಲವು ಪ್ರಶ್ನೆಗಳು ಕಾವ್ಯಾ ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿದೆ. ಆದರೆ ಸದ್ಯಕ್ಕೆ ಯಾವುದಕ್ಕೂ ಸ್ಪಷ್ಟ ಉತ್ತರವಿಲ್ಲ!

ಕೊತ್ತಲವಾಡಿ ಸಿನಿಮಾ ಸುಂದರಿಗೆ ಕಾಯುತ್ತಿರುವ ಫ್ಯಾನ್ಸ್!

ಒಟ್ಟಿನಲ್ಲಿ, ಕೊತ್ತಲವಾಡಿ ಸಿನಿಮಾ ಮೂಲಕ ಕನ್ನಡಿಗರ ಮನೆಮನಕ್ಕೆ ಬಲಗಾಲಿಟ್ಟು ಬಂದಿದ್ದ ನಟಿ ಕಾವ್ಯಾ ಶೈವ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಹೃದಯದಲ್ಲಿ ಹರಿದಾಡುತ್ತಿದ್ದರು. ಆದ್ರೆ ಈಗ ಕಾವ್ಯಾ ಶೈವರ ಸಿನಿಮಾ ಇಲ್ಲದೇ, ಕಿರುತೆರೆಯಲ್ಲಿಯೂ 'ದರ್ಶನ' ಇಲ್ಲದೇ ಅವರ ಫ್ಯಾನ್ಸ್ ಕಂಗಾಲು ಆಗಿದ್ದಾರೆ! ಏನಾದ್ರೂ ಹೊಸ ನ್ಯೂಸ್ ಸಿಗಬಹುದಾ ಕಾವ್ಯಾ ಕಡೆಯಿಂದ,,?!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೆನಪಿದೆಯಾ ಈ ವೈರಲ್ ಕೇಸ್..? ಬ್ರಿಟಿಷ್ ರ್‍ಯಾಪರ್ 'ಯಂಗ್ ಫಿಲ್ಲಿ'ಗೆ ಸ್ವಲ್ಪ ಸಿಹಿ ಸ್ವಲ್ಪ ಕಹಿ.. ಅಷ್ಟಕ್ಕೂ ಏನ್ ಆಗಿತ್ತು?
Bigg Boss ಗಿಲ್ಲಿ ನಟನಿಂದ ಜೀವನಪರ್ಯಂತದ ಒಂದು ಗಿಫ್ಟ್​ ಬೇಡಿದ ರಕ್ಷಿತಾ ಶೆಟ್ಟಿ: ಅಂಥದ್ದೇನು ಕೇಳಿದ್ರು ನೋಡಿ