
Shocking Case: ಬ್ರಿಟಿಷ್ ರ್‍ಯಾಪರ್ 'ಯಂಗ್ ಫಿಲ್ಲಿ'ಗೆ ಬಿಗ್ ರಿಲೀಫ್ ಸಿಕ್ಕಿದ್ದರೂ .. ಆದರೆ ಮುಗಿದಿಲ್ಲ ಸಂಕಷ್ಟ!
ಸೋಶಿಯಲ್ ಮೀಡಿಯಾ ಸ್ಟಾರ್, ಖ್ಯಾತ ಯೂಟ್ಯೂಬರ್ ಮತ್ತು ಬ್ರಿಟಿಷ್ ರ್‍ಯಾಪರ್ ಆಗಿ ಜಗತ್ತಿನಾದ್ಯಂತ ಮಿಂಚುತ್ತಿರುವ ಯಂಗ್ ಫಿಲ್ಲಿ (Yung Filly) ಬದುಕಿನಲ್ಲಿ ಕಳೆದ ಕೆಲವು ತಿಂಗಳುಗಳು ಅಕ್ಷರಶಃ ಅಗ್ನಿಪರೀಕ್ಷೆಯಂತಿದ್ದವು. 2024ರಲ್ಲಿ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆದ ಕನ್ಸರ್ಟ್ ನಂತರ ಅವರ ಮೇಲೆ ಕೇಳಿಬಂದಿದ್ದ ಗಂಭೀರ ಆರೋಪಗಳು ಅವರ ವೃತ್ತಿಜೀವನವನ್ನೇ ಅಲುಗಾಡಿಸಿದ್ದವು. ಆದರೆ ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಒಂದು ಮಹತ್ವದ ತೀರ್ಪು ಹೊರಬಿದ್ದಿದೆ.
ಕಳೆದ ಸೆಪ್ಟೆಂಬರ್ 2024ರಲ್ಲಿ ಪರ್ತ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ, 30 ವರ್ಷದ ಯಂಗ್ ಫಿಲ್ಲಿ (ಅಸಲಿ ಹೆಸರು ಆಂಡ್ರೆಸ್ ಫೆಲಿಪೆ ವೇಲೆನ್ಸಿಯಾ ಬ್ಯಾರಿಯೆಂಟೋಸ್) ಅವರು ತಮ್ಮ 20 ವರ್ಷದ ಮಹಿಳಾ ಅಭಿಮಾನಿಯೊಬ್ಬರನ್ನು ಮಿಸ್ ಯೂಸ್ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಇಡೀ ಅಂತರಾಷ್ಟ್ರೀಯ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು.
ಕೋರ್ಟ್ ಕಟಕಟೆಯಲ್ಲಿ ಎಂಟು ದಿನಗಳ ಹಗ್ಗಜಗ್ಗಾಟ:
ವೆಸ್ಟರ್ನ್ ಆಸ್ಟ್ರೇಲಿಯನ್ ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ನಡೆದ ಎಂಟು ದಿನಗಳ ಸುದೀರ್ಘ ವಿಚಾರಣೆಯಲ್ಲಿ ಹಲವು ಆಘಾತಕಾರಿ ವಿಷಯಗಳು ಹೊರಬಂದವು. ಕೆಟ್ಟ ನಡವಳಿಕೆ ಗಂಭೀರ ಆರೋಪಗಳು, ಮೂರು ಹಲ್ಲೆ ಪ್ರಕರಣಗಳು ಮತ್ತು ಒಂದು ಗಂಟಲು ಹಿಸುಕಿದ ಆರೋಪವನ್ನು ಫಿಲ್ಲಿ ಎದುರಿಸುತ್ತಿದ್ದರು. ಆದರೆ, ಸುದೀರ್ಘ ಚರ್ಚೆಯ ನಂತರ ಜ್ಯೂರಿ (ನ್ಯಾಯಮಂಡಳಿ) ಯಂಗ್ ಫಿಲ್ಲಿ ಅವರನ್ನು ಗಂಭೀರ ಆರೋಪಗಳಿಂದ ಮುಕ್ತಗೊಳಿಸಿದೆ.
'ಲವ್ ಬೈಟ್ಸ್' ತಂದ ಸಂಕಷ್ಟ!
ಅತ್ಯಾಚಾರದ ಆರೋಪದಿಂದ ಬಚಾವಾದರೂ, ಯಂಗ್ ಫಿಲ್ಲಿ ಅವರಿಗೆ ಇನ್ನೊಂದು ವಿಷಯದಲ್ಲಿ ಹಿನ್ನಡೆಯಾಗಿದೆ. ಆ ಯುವತಿಯ ಮೈಮೇಲೆ ಇದ್ದ ಕಡಿತದ ಗುರುತುಗಳನ್ನು (Bites) ಆಧರಿಸಿ, ನ್ಯಾಯಾಲಯವು ಅವರನ್ನು ಎರಡು 'ದೈಹಿಕ ಹಲ್ಲೆ' (Bodily Harm) ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಿದೆ. ವಿಚಾರಣೆ ವೇಳೆ ಫಿಲ್ಲಿ ಅವರು, "ಅವು ಕೇವಲ ಪ್ರೀತಿಯಿಂದ ನೀಡಿದ ಕಡಿತಗಳು (Love Bites). ಆಕೆ ಎಂದೂ ನೋವಾಗುತ್ತಿದೆ ಎಂದು ದೂರಲಿಲ್ಲ," ಎಂದು ವಾದಿಸಿದ್ದರು. ಆದರೆ ನ್ಯಾಯಾಲಯ ಆಕೆಯ ಮೈಮೇಲಿದ್ದ ಗಾಯದ ಗುರುತುಗಳನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಸದ್ಯಕ್ಕೆ ಯಂಗ್ ಫಿಲ್ಲಿ ಅವರಿಗೆ ಜಾಮೀನು ನೀಡಲಾಗಿದ್ದು, ಅವರು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದರೆ ಈ ಕೇಸ್ ಇಲ್ಲಿಗೆ ಮುಗಿದಿಲ್ಲ! ಉಳಿದ ಮೂರು ಆರೋಪಗಳ ಬಗ್ಗೆ ಜ್ಯೂರಿ ಇನ್ನು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ, ಹಾಗಾಗಿ ಆ ವಿಷಯದಲ್ಲಿ ಮರು-ವಿಚಾರಣೆ (Retrial) ನಡೆಯುವ ಸಾಧ್ಯತೆ ದಟ್ಟವಾಗಿದೆ.
ಆಗಸ್ಟ್ 21, 2026 ರಂದು ಈ ಪ್ರಕರಣ ಮತ್ತೆ ನ್ಯಾಯಾಲಯದ ಮುಂದೆ ಬರಲಿದೆ. ಅಲ್ಲಿಯವರೆಗೆ ಯಂಗ್ ಫಿಲ್ಲಿ ಮೇಲೆ ತೂಗುಗತ್ತಿ ಇದ್ದೇ ಇರುತ್ತದೆ. ತನ್ನ ಅಭಿಮಾನಿಗಳ ನಡುವೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಈ ರ್‍ಯಾಪರ್, ಈ ಕಾನೂನು ಸಮರದಿಂದ ಪೂರ್ತಿಯಾಗಿ ಹೊರಬರುತ್ತಾರಾ ಅಥವಾ ಈ 'ಕಡಿತ'ದ ಕೇಸ್ ಅವರಿಗೆ ದೊಡ್ಡ ಹೊಡೆತ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.